Advertisement
ಬಜೆಟ್ ಮಂಡನೆಯಾದ ಗುರುವಾರ ತಾಲೂಕಿನ ಪ್ರಸಿದಟಛಿ ನೊಣವಿನಕೆರೆಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವ ಸ್ಮರಣಾರ್ಥ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠದ ನೂತನ ಶಿಲಾಮಠ ಲೋಕಾರ್ಪಣೆ ಸಮಾರಂ ಭದಲ್ಲಿ ಅವರು ಮಾತನಾಡಿದರು. ಕಾಡಸಿದ್ದೇಶ್ವರ ಮಠ ತಮಗೆಶಕ್ತಿ ಮಾರ್ಗದರ್ಶನ ಸರ್ವಸ್ವವನ್ನೂ ಕೊಟ್ಟ ಸ್ಥಳ. ಈ ಸ್ಥಾನಕ್ಕೇರಲು ಇಲ್ಲಿನಶ್ರೀಗಳ ಆಶೀರ್ವಾದವೇ ಕಾರಣಎಂದರು. ಭಕ್ತ ಹಾಗೂ ಭಗವಂತನನಡುವೆ ನೋವು ನಲಿವು ಹಂಚಿಕೆಯಾಗುವುದು ಮಠ ಮಂದಿರಗಳಲ್ಲಿ ಮಾತ್ರ. ಕಲ್ಲು ಕಡೆದರೆ ಆಕೃತಿ, ಪೂಜಿಸಿದರೆಸಂಸ್ಕೃತಿ ಅದೇ ರೀತಿ ದೇವರನ್ನು ಎಲ್ಲಾ ರೂಪದಲ್ಲಿಯೂ ಕಾಣುತ್ತೇವೆ. ಶ್ರೀಕ್ಷೇತ್ರ ದೊಡ್ಡ ಶಕ್ತಿ ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ ಎಂದರು.