Advertisement

Jail security: ಕಾರಾಗೃಹ ಭದ್ರತೆಗೆ 13 ದಿನಗಳ ಹಿಂದೆಯೇ ಪತ್ರ ಬರೆದಿದ್ದ ಡಿಜಿಪಿ

10:18 AM Aug 27, 2024 | Team Udayavani |

ಬೆಂಗಳೂರು: ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ಅಭದ್ರತೆ ವಿಚಾರ ಕುರಿತು ಕಾರಾಗೃಹ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ 13 ದಿನಗಳ ಹಿಂದೆಯೇ ಜೈಲಿನ ಮುಖ್ಯ ಅಧೀಕ್ಷಕರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

Advertisement

ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ ಫೋಟೋ ವೈರಲ್‌ ಆಗುತ್ತಿದ್ದಂತೆ ಈ ಪತ್ರ ಕೂಡ ವೈರಲ್‌ ಆಗಿದೆ. ಕಾರಾಗೃಹದಲ್ಲಿ  ಸುಮಾರು 5 ಸಾವಿರ ಕೈದಿಗಳಿದ್ದು, ಕಾರಾಗೃಹ ಗರಿಷ್ಠ ಭದ್ರತೆ ವಿಭಾಗದಲ್ಲಿ 250-300 ಬಂಧಿಗಳಿದ್ದು, ಈ ಪೈಕಿ ರೌಡಿಶೀಟರ್‌ಗಳು, ಉಗ್ರಗಾಮಿಗಳು, ನಕ್ಸಲ್‌ಗ‌ಳು ಹಾಗೂ ಇತರೆ ಸಾಮಾನ್ಯ ಬಂಧಿಗಳಿದ್ದಾರೆ.

ಸಾಮಾನ್ಯ ಬಂಧಿಗಳು ರೂಢಿಪರಾಧಿ ಬಂಧಿಗಳಿಗೆ ಪ್ರಚೋದನೆಗೊಳಗಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ನಿಯಾನುಸಾರ ತಪಾಸಣೆ ನಡೆಸಬೇಕು. ನಿಷೇಧಿತ ವಸ್ತುಗಳು ಪತ್ತೆ ಹಚ್ಚಲು ಹಾಗೂ ಭದ್ರತೆ ಪಾಲನೆಗೆ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಕಾರಾಗೃಹದ ಅಧೀಕ್ಷರಿಗೆ ಸೂಚಿಸಲಾಗಿತ್ತು. ಆದರೆ, ಪರಿಣಾಮಕಾರಿಯಾಗಿ ಮಾಡಿಲ್ಲ. ಆದರಿಂದ ನಿಮಗೆ(ಶೇಷಮೂರ್ತಿ) ಈ ಹೊಣೆಯನ್ನು ವಹಿಸುತ್ತಿದ್ದೇವೆ ಎಂದು ಉತ್ರದಲ್ಲಿ ಉಲ್ಲೇಖೀಸಲಾಗಿದೆ.

ಅಲ್ಲದೆ, ಭದ್ರತೆ ಮತ್ತು ನಿಷೇಧಿತ ವಸ್ತುಗಳು ಕೈದಿಗಳಿಗೆ ಸಿಗದಂತೆ ಎಚ್ಚರಿಕೆ ವಹಿಸಿ, ಈ ವರದಿಯನ್ನು ಕಾರಾಗೃಹಗಳ ಡಿಐಜಿಗೆ ಪ್ರತಿನಿತ್ಯ ವರದಿ ಸಲ್ಲಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿದಲ್ಲಿ ಕರ್ತವ್ಯಲೋಪವೆಂದು ಪರಿಗಣಿಸಲಾಗುವುದು. ಮುಖ್ಯ ಅಧೀಕ್ಷಕರಾದ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಾಲಿನಿ ಕೃಷ್ಣಮೂರ್ತಿ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

4 ದಿನಗಳ ಹಿಂದೆ ನಡೆದಿರುವ ಘಟನೆ:

Advertisement

ವೈರಲ್‌ ಆಗಿರುವ ಫೋಟೋದಲ್ಲಿನ ಘಟನೆ ಆ.22ರಂದು ಸಂಜೆ ನಡೆದಿರುವುದು ಪ್ರಾಥ ಮಿಕ ಮಾಹಿತಿಯಿಂದ ಗೊತ್ತಾಗಿದೆ. ಕಾರಾಗೃಹ ಸಿಸಿ ಕ್ಯಾಮೆರಾಗಳ ನಿರ್ವಹಣೆಯಲ್ಲಿ ವೈಫ‌ ಲ್ಯವೂ ಕಂಡು ಬಂದಿದೆ. ಹೆಚ್ಚಿನ ತನಿಖೆ ಬಳಿಕ ತಪ್ಪಿತಸ್ಥರ ಬಗ್ಗೆ ಮಾಹಿತಿ ಸಿಗಲಿದೆ. ಇನ್ನು ಕಾರಾ ಗೃಹದಲ್ಲಿ ಸಿಸಿ ಕ್ಯಾಮೆರಾಗಳ ಸಂಖ್ಯೆ ಹೆಚ್ಚಳ ಹಾಗೂ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದ ಕ್ಯಾಮೆರಾಗಳ ಅಳವಡಿಕೆ ಬಗ್ಗೆ ಚಿಂತಿಸಲಾಗಿದೆ. ಕಾರಾಗೃಹದಲ್ಲಿ ಸಜಾ ಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ಪ್ರತ್ಯೇಕ ಬ್ಯಾರಕ್‌ಗಳನ್ನು ನಿರ್ಮಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು.

ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ನಾನೂ ನೋಡಿದೆ. ಅದು ತಪ್ಪು. ಕಾನೂನಲ್ಲಿ ಆ ರೀತಿ ಅವಕಾಶ ಇಲ್ಲ. ಈ ರೀತಿ ಸಂಸ್ಕೃತಿ ಇರಬಾರದು. ತನಿಖೆ ಮಾಡಿ, ನಿಜವಾದ ಘಟನೆ ನಡೆದಿದ್ದರೆ ಕ್ರಮ ಆಗುವ ವಿಶ್ವಾಸವಿದೆ.-ಕೃಷ್ಣ ಬೈರೇಗೌಡ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next