Advertisement
ಜೂ.11ರಂದು ಉಳ್ಳಾಲದಲ್ಲಿ ಆಸ್ಟೀನ್ ಮೇಲಿನ ಹಲ್ಲೆ ಪ್ರಕರಣವನ್ನು ಬೇಧಿಸಿ 4 ಮಂದಿಯ ಬಂಧನ, ಜೂ.7ರಂದು ಅಡ್ಯಾರ್‌ಪದವಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ 3ಮಂದಿಯ ಬಂಧನ, ಜೂ.23ರಂದು ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ವಿಫಲ ಯತ್ನ ಪ್ರಕರಣದಲ್ಲಿ ಇಬ್ಬರ ಬಂಧನ, ನಗರದ ಲಾಡ್ಜ್ನಲ್ಲಿ 10 ಕೆ.ಜಿ.ಗಾಂಜಾ ವಶಪಡಿಸಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಸಿಸಿಬಿ ಎಸಿಪಿ ವೆಲೆಂಟೈನ್ ಡಿ’ಸೋಜಾ, ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ನಾಯಕ್, ಎಸ್‌ಐ ಶ್ಯಾಮ್ ಸುಂದರ್ ಅವರನ್ನು ಅಭಿನಂದಿಸಿ ಪ್ರಶಂಸಾ ಪತ್ರ ಹಾಗೂ 50,000 ರೂ. ನಗದು ಪುರಸ್ಕಾರ ನೀಡಿದರು. ಸಿಸಿಬಿ ತಂಡದಲ್ಲಿ ರಾಜೇಂದ್ರ, ದಾಮೋದರ್, ಚಂದ್ರಶೇಖರ್, ಶೀನಪ್ಪ, ರಾಮಣ್ಣ, ಆಶಿತ್, ರಿಜಿ, ಸುಧೀರ್, ಸುನೀಲ್, ಇಕ್ಬಾಲ್, ಚಂದ್ರಹಾಸ್, ಚಂದ್ರ, ಸುಬ್ರಹ್ಮಣ್ಯ, ಮಣಿ, ಹರೀಶ್, ಶಶಿಧರ್ ಶೆಟ್ಟಿ, ಜಬ್ಟಾರ್, ಗಣೇಶ್, ಸುಬ್ರಹ್ಮಣ್ಯ, ಯೋಗೀಶ್ ಅವರಿದ್ದರು.
ಕಾನೂನು ಸುವ್ಯವಸ್ಥೆಗೆ ಶ್ಲಾಘನೆ: ಅಶ್ರಫ್ ಶವಯಾತ್ರೆ ಸಂದರ್ಭ ಪಡೀಲ್-ಕಣ್ಣೂರು ಬಳಿ ಪರಿಸ್ಥಿತಿಯನ್ನು ನಿಯಂ ತ್ರಣಕ್ಕೆ ತಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ ಉರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವೀಶ್ ನಾಯ್ಕ, ಕದ್ರಿ ಇನ್‌ಸ್ಪೆಕ್ಟರ್ ಮಾರುತಿ ನಾಯಕ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯವರ ಗನ್‌ಮ್ಯಾನ್ ವೀಕ್ಷಿತ್, ವಾಹನ ಚಾಲಕ ಜಾಫರ್ ಸಾದಿಕ್, ಮಾರುತಿ ನಾಯ್ಕ ವಾಹನ ಚಾಲಕ ಅಜಿತ್ ಅವರನ್ನು ಅಭಿನಂದಿಸಿದರು. ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಕೆ. ಎಂ. ಶಾಂತರಾಜು ಮತ್ತು ಹನುಮಂತರಾಯ ಮುಂತಾ ದವರು ಉಪಸ್ಥಿತರಿದ್ದರು. ಡಿಜಿಪಿ ನಿರ್ಗಮನ: ಡಿಜಿಪಿ ರೂಪ್ ಕುಮಾರ್ ದತ್ತ ಅವರು ಮೂರು ದಿನಗಳ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕಾರ್ಯಕ್ರಮ ಮುಗಿಸಿ ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿಗೆ ನಿರ್ಗಮಿಸಿದರು. ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದ ಅವರು ಅಂದು ಉಳ್ಳಾಲಕ್ಕೆ ಭೇಟಿ ನೀಡಿದ್ದರು. ಶುಕ್ರವಾರ ಬೆಳಗ್ಗೆ ಬಂಟ್ವಾಳ, ವಿಟ್ಲ ಸಂದರ್ಶಿಸಿ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದ್ದರು. ಶನಿವಾರ ಮಧ್ಯಾಹ್ನ ತನಕ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿವಿಧ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿದರು ಹಾಗೂ ಬಳಿಕ ಕಳೆದ ಒಂದು ತಿಂಗಳ ಅವಧಿಯಲ್ಲಿ ಅಪರಾಧ ಪ್ರಕರಣಗಳನ್ನು ಬೇಧಿಸಿದ ಪೊಲೀಸರನ್ನು ಅಭಿನಂದಿಸಿದರು.