Advertisement
ಮಂಗಳವಾರ ಶ್ರೀಜಯದೇವ ವೃತ್ತದಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷ(ಸಿಪಿಐ), ಭಾರತೀಯ ಜನಕಲಾ ಸಮಿತಿ(ಇಪಾr), ಸಾಮೂಹಿಕ ಸಂಘಟನೆಯಿಂದ ಹಾಡುಗಳ ಮೂಲಕ ಭಕ್ತಿಪೂರ್ವಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಹುಟ್ಟು ಆಕಸ್ಮಿಕ. ಸಾವು ನಿಶ್ವಿತ. ಹುಟ್ಟು ಮತ್ತು ಸಾವಿನ ನಡುವೆಯ ಅವಧಿಯಲ್ಲಿ ಸಮಾಜಕ್ಕೆ ಒಳ್ಳೆಯದಾಗುವಂತ ಕೆಲಸ ಮಾಡಬೇಕು ಎಂಬ ಮಾತಿಗೆ ಅನುಗುಣವಾಗಿ ಡಾ| ಶಿವಕುಮಾರ ಸ್ವಾಮೀಜಿಯವರು ತಮ್ಮ ಜೀವಿತದುದ್ದಕ್ಕೂ ಇಡೀ ಸಮಾಜವೇ ಸ್ಮರಿಸುವ ಕೆಲಸ ಮಾಡಿದ್ದಾರೆ ಎಂದರು.
Related Articles
Advertisement
ಡಾ| ಶಿವಕುಮಾರ ಸ್ವಾಮೀಜಿಯವರನ್ನು ದೇವರಿಗೆ ಹೋಲಿಕೆ ಮಾಡಬಾರದು. ಅವರು ಮಾನವ ದೇವರು. ದೇವರಿಗೆ ಹೋಲಿಕೆ ಮಾಡಿದರೆ ಅವರು, ಸೇವೆಯನ್ನು ಮರೆಯುವಂತಾಗುತ್ತದೆ. ಆ ಮಾನವ ದೇವರು ಇಡೀ ಮಾನವ ಕುಲಕ್ಕೆ ಕೊಡುಗೆ ನೀಡಿರುವುದನ್ನ ಸ್ಮರಿಸುತ್ತಾ ಸಮತಾ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಮನವಿ ಮಾಡಿದರು.
ಡಾ| ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ.. ಪ್ರಶಸ್ತಿ ನೀಡದೇ ಮೂಲಕ ಎಲ್ಲಾ ಸರ್ಕಾರಗಳು ಕೊಡದಿರುವ ಅಪರಾಧ ಮಾಡಿವೆ. ಅವರು ಜೀವಂತ ಇರುವಾಗಲಾದರೂ ಭಾರತರತ್ನ… ಕೊಡದೇ ಇರುವ ಅಪರಾಧವನ್ನ ಅವರು ಲಿಂಗೈಕ್ಯರಾದ ನಂತರವಾದರೂ ಕೊಡದೇ ಇರುವ ಅಪರಾಧ ಮಾಡದೆ ಭಾರತರತ್ನ… ಕೊಡುವ ಮೂಲಕ ಗೌರವ ಸಲ್ಲಿಸಬೇಕು ಎಂದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್ ಮಾತನಾಡಿ, ಡಾ| ಶಿವಕುಮಾರ ಸ್ವಾಮೀಜಿಯವರು ಬರೀ ಕರ್ನಾಟಕ, ಭಾರತಕ್ಕೆ ಮಾತ್ರವಲ್ಲ ಇಡೀ ಪ್ರಪಂಚದ ಪ್ರೀತಿ, ಗೌರವಕ್ಕೆ ಪಾತ್ರರಾದವರು.
111 ವರ್ಷಗಳ ಕಾಲ ಮನುಕುಲಕ್ಕೆ ಆಶೀರ್ವಾದ ಮಾಡಿದವರು. ಯಾವುದೇ ಜಾತಿ, ಮತ, ಪಂಥ, ವರ್ಗ ಭೇದ ಇಲ್ಲದೆ 10 ಸಾವಿರಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಣ ನೀಡಿದವರು. ಅಂತಹ ಮಹಾನ್ ಪುರುಷರ ದಾರಿಯಲ್ಲಿ ಕಿಂಚಿತ್ತಾದರೂ ಸಾಗುವುದೇ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಆವರಗೆರೆ ಎಚ್.ಜಿ. ಉಮೇಶ್, ಭಾರತ ಕಮ್ಯೂನಿಷ್ಟ್ ಪಕ್ಷ(ಸಿಪಿಐ) ಖಜಾಂಚಿ ಆನಂದರಾಜ್, ಆವರಗೆರೆ ವಾಸು, ಸರೋಜಾ, ನಿಂಗಪ್ಪ ಇತರರು ಇದ್ದರು.
ಸಿಪಿಐ, ಇರ್ಪಾದಿಂದ ಗಾಯನ ನಮನದಾವಣಗೆರೆ: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಸಿದ್ಧಗಂಗೆಯ ಪೀಠಾಧಿಪತಿ ಡಾ| ಶಿವಕುಮಾರ ಸ್ವಾಮೀಜಿಯವರಿಗೆ ದೇವನಗರಿ ದಾವಣಗೆರೆಯಲ್ಲಿ ಮಂಗಳವಾರ ಭಾರತ ಕಮ್ಯೂನಿಷ್ಟ್ ಪಕ್ಷ(ಸಿಪಿಐ), ಭಾರತೀಯ ಜನಕಲಾ ಸಮಿತಿ(ಇರ್ಪಾ), ಸಾಮೂಹಿಕ ಸಂಘಟನೆಯಿಂದ ಹಾಡುಗಳ ಮೂಲಕ ಭಕ್ತಿಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀಜಯದೇವ ವೃತ್ತದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಇರ್ಪಾ ಕಲಾವಿದರಾದ ಐರಣಿ ಚಂದ್ರು, ಅಂಜಿನಪ್ಪ ಲೋಕಿಕೆರೆ, ಪಾಲವನಹಳ್ಳಿ ಪ್ರಸನ್ನಕುಮಾರ್, ಪಿ. ಷಣ್ಮುಖಸ್ವಾಮಿ, ಕೊಂಡಯ್ಯ, ಮಾಂತೇಶ್, ಪರಶುರಾಮ್, ರಂಗನಾಥ್, ಗದಿಗೀಶ್ ಇತರರು ರಾಷ್ಟ್ರಕವಿ ಕುವೆಂಪುರವರ, ಓ ನನ್ನ ಚೇತನ… ಆಗು ನೀ ಅನಿಕೇತನ.. ಹಾಡು ಹಾಡುವ ಮೂಲಕ ಡಾ| ಶಿವಕುಮಾರ ಸ್ವಾಮೀಜಿಯವರು ಕೋಟ್ಯಂತರ ಜನರಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಬಾಳಿನ ಚೇತನ ಆಗಿದ್ದಾರೆ. ಆ ಮೂಲಕ ಅನಂತತಾನಾದ ಅನಿಕೇತನ.. ವಾಗಿದ್ದಾರೆ ಎಂದು ಸ್ಮರಿಸಿದರು. ಕೊಟಗೇನಹಳ್ಳಿ ರಾಮಯ್ಯನವರ ಶರಣಯ್ಯ… ಶರಣು… ಶರಣು… ಶರಣು… ಎನ್ನುವ ಹಾಡಿನ ಮೂಲಕ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ 111 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ನಡೆದಾಡುವ ದೇವರೇ.. ಆಗಿರುವ ಡಾ| ಶಿವಕುಮಾರ ಸ್ವಾಮೀಜಿಯವರಿಗೆ ಶರಣು ಸಮರ್ಪಿಸಿದರು. ಹಾಲಂತ ಮನಸು ಶರಣು… ದೀವಟಿಗೆಯ ಬೆಳಕಿಗೆ ಶರಣು… ಎನ್ನುವ ಸಾಲುಗಳ ಹಾಡುವ ಮೂಲಕ ಸಿದ್ಧಗಂಗೆಯ ಪೀಠಾಧಿಪತಿಯಾಗಿ ವಿಶ್ವಕ್ಕೇ ಗುರುವಾಗಿದ್ದರೂ ಮಠದಲ್ಲಿನ 15 ಸಾವಿರದಷ್ಟು ಮಕ್ಕಳ ಜೊತೆಗೆ ಮಕ್ಕಳಂತೆ ಆಟವಾಡುತ್ತಿದ್ದಂತಹ ಹಾಲಿನಂತ ಮನಸಿನ ಗುರುಗಳಾಗಿದ್ದರು ಎಂದು ಸ್ಮರಿಸಿದರು. ದೀವಟಿಗೆಯ ಬೆಳಕಿಗೆ ಶರಣು… ಎನ್ನುವ ಸಾಲಿನ ಮೂಲಕ 1930ರಿಂದ ಸಿದ್ದಗಂಗೆಯ ಮಠಾಧಿಪತಿಯಾಗಿ ಶೈಕ್ಷಣಿಕ ಕ್ರಾಂತಿಯ ಮೂಲಕ ಲಕ್ಷಾಂತರ ಜನರ ಬಾಳಿನ ಬೆಳಕಾಗಿ ದಾರಿದೀಪವಾಗಿರುವ ಡಾ| ಶಿವಕುಮಾರ ಸ್ವಾಮೀಜಿಯವರು ದೀವಟಿಗೆ ಬೆಳಕಿನಂತೆ ಜನರ, ಸಮಾಜದ ಬೆಳಕಾಗಿದ್ದರು ಎಂದು ಕೊಂಡಾಡಿದರು. ಮನುಜ ಜಾತಿ ತಾನೊಂದೇ ವಲಂ…. ಮನುಜ ಜಾತಿ ತಾನೊಂದೇ ಕುಲಂ… ಎನ್ನುವ ಹಾಡು ಹಾಡುವ ಮೂಲಕ ಡಾ| ಶಿವಕುಮಾರ ಸ್ವಾಮೀಜಿಯವರು ಜಾತಿ, ಮತ, ಪಂಥ, ವರ್ಗ ಎಲ್ಲವನ್ನೂ ಮೀರಿ ಇಡೀ ಮಾನವ ಕುಲ.. ಒಂದೇ ಎಂಬ ಉದಾತ್ತ ಸಂದೇಶವನ್ನು ಎಲ್ಲರಿಗೂ ಶಿಕ್ಷಣ, ಅನ್ನ, ಜ್ಞಾನ ಧಾರೆ ಎರೆಯುವ ಮೂಲಕ ಮಾನವ ಜಾತಿಯ ಶ್ರೇಷ್ಠತೆಯ ಎತ್ತಿ ಹಿಡಿದಂತಹ ಮಹಾನ್ ಮಾನವತಾವಾದಿ ಎಂಬುದನ್ನ ಸಾರಿ ಸಾರಿ ಹೇಳಲಾಯಿತು. ದೇಶ, ಭಾಷೆಯ ಎಲ್ಲೆಯ ಮೀರಿ… ಎನ್ನುವ ಮೂಲಕ ಡಾ| ಶಿವಕುಮಾರ ಸ್ವಾಮೀಜಿಯವರ ಇಡೀ ಬದುಕು, ಸಾಗಿದ ಬಂದ ಹಾದಿ, ಸಾಧಿಸಿದ ಸಾಧನೆಗಳು, ಮಾನವ ಕುಲಕ್ಕೆ ನೀಡಿರುವಂತಹ ಮಹತ್ವದ ಅವಿಸ್ಮರಣೀಯ ಕಾಣಿಕೆ… ದೇಶ, ಭಾಷೆಯ ಎಲ್ಲೆಯನ್ನೂ ಮೀರಿ ನಿಂತಿದೆ ಎಂದು ಗುಣಗಾನ ಮಾಡುವ ಮೂಲಕ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಡಾ| ಶಿವಕುಮಾರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.