ಪಡೆಯಲಿರುವುದರಿಂದ ಅ. 28ರ ಮಧ್ಯಾಹ್ನ 2 ಗಂಟೆಯಿಂದ ಅ. 29ರ ಮಧ್ಯಾಹ್ನ 2 ಗಂಟೆಯ ತನಕ ಕ್ಷೇತ್ರದಲ್ಲಿ ಇತರ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
Advertisement
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಬಂದ್ ವಾತಾವರಣ ಕಂಡು ಬರಲಿದೆ. ಧರ್ಮಸ್ಥಳದಲ್ಲಿ ಶನಿವಾರ ಮಧ್ಯಾಹ್ನದಿಂದ ಭಾನುವಾರ ಮಧ್ಯಾಹ್ನದವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಮಾಲಿಕರಿಗೆ ಸೂಚನೆ ಕೊಡಲಾಗಿದೆ.