Advertisement

ರಾಯರ ಭಕ್ತರಿಗೆ ಕಷ್ಟಗಳಿಲ

11:34 AM Aug 09, 2017 | Team Udayavani |

ಕಲಬುರಗಿ: ಕಲಿಯುಗದ ಕಾಮಧೇನು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತರಿಗೆ ಭವದ ಸಮಸ್ಯೆಗಳು ಕಾಡುವುದಿಲ್ಲ,
ಕಷ್ಟುಗಳು ಬರುವುದಿಲ್ಲ ಎಂದು ಗುಂಡಾಚಾರ್ಯ ನರಿಬೋಳ ಹೇಳಿದರು. ಮಂಗಳವಾರ ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ರಾಘವೇಂದ್ರ ಸ್ವಾಮಿಗಳ ಪೂರ್ವಾಧನೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಲಿಯುಗದಲ್ಲಿ ಕಲ್ಪವೃಕ್ಷವಾಗಿ ರಾಘವೇಂದ್ರ ಸ್ವಾಮಿಗಳು ಇದ್ದಾರೆ. ಅವರನ್ನು ಯಾರು ಭಕ್ತಿಪೂರ್ವಕವಾಗಿ ಆರಾಧಿಸುತ್ತಾರೋ ಅವರಿಗೆ ಯಾವುದೇ ಕಷ್ಟಗಳು ಬರುವುದಿಲ್ಲ. ಅವರು ಬೇಡಿದ ವರಗಳನ್ನು ನೀಡುವ ಕಾಮಧೇನು ಆಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಪೂರ್ವಾರಾಧನೆಯಲ್ಲಿ ಪಾಲ್ಗೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಅಷ್ಟೋತ್ತರ ಪಾರಾಯಣ, ಪವಮಾನ ಹೋಮ, ಮಹಿಳಾ ಭಜನಾ ಮಂಡಳಿಗಳಿಂದ ಪಲ್ಲಕ್ಕಿ ಸೇವೆ ವೈಭೋಗದಿಂದ ಜರುಗಿತು. ನಂತರ ಪಂಡಿತ ಶ್ರೀನಿವಾಸಚಾರ್ಯ ಪದಕಿ ಅವರಿಂದ ರಾಯರ ಜೀವನ ಚರಿತ್ರೆಯ ಪ್ರವಚನ ಜರುಗಿತು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನವಲಿ ಕೃಷ್ಣಾಚಾರ್ಯ, ಅನಿಲ ಕಕ್ಕೇರಿ,ಲಕ್ಷ್ಮಣರಾವ್‌ ಮುಗಳನಾಗಾಂವ್‌, ಶ್ಯಾಮರಾವ ಕುಲಕರ್ಣಿ, ಡಿ.ವಿ. ಕುಲಕರ್ಣಿ ಹಾಗೂ ಕಾಲೋನಿ ನಾಗರಿಕರು ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next