Advertisement

ಅಭಿವೃದ್ಧಿ, ಅನುದಾನಕ್ಕೆ ಸದಸ್ಯರ ಬೇಡಿಕೆ

01:48 PM Feb 24, 2017 | |

ಸುಳ್ಯ:  ಸಂಪಾಜೆ ಗ್ರಾಮ ಪಂಚಾಯತ್‌ ಇಲ್ಲಿಗೆ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಭೇಟಿ ನೀಡಿ, ಗ್ರಾಮ ಪಂಚಾಯತ್‌ ಸದಸ್ಯರುಗಳ ಅಹವಾಲುಗಳನ್ನು ಸ್ವೀಕರಿಸಿದರು.

Advertisement

ಸದಸ್ಯ ಪಿ.ಕೆ. ಅಬುಶಾಲಿ ಅವರು ಗ್ರಾಮ ಪಂಚಾಯತ್‌ನ ಕುಡಿಯುವ ನೀರಿಗೆ ವಿದ್ಯುತ್‌ ಶುಲ್ಕವನ್ನು ವಾಣಿಜ್ಯ ಮಾದರಿಯಲ್ಲಿ ನೀಡುತ್ತಿದ್ದು, ಅದನ್ನು ಕೃಷಿ ಪಂಪ್‌ ಸೆಟ್‌ಗೆ ವಿಧಿಧಿಸುವ ರೀತಿಯಲ್ಲಿ ನೀಡಬೇಕೆಂದು ಒತ್ತಾಯಿಸಿದರು.

ಸದಸ್ಯ ಷಣ್ಮುಗಂ ಅವರು ಬಂಟೋಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡುವಂತೆ ಕೇಳಿಕೊಂಡರು.ಸದಸ್ಯ ಜಿ.ಕೆ. ಹಮೀದ್‌ ಅವರು ಗ್ರಾಮ ಪಂಚಾಯತ್‌ ಸದಸ್ಯರ ಒಕ್ಕೂಟದ ಪರವಾಗಿ ಗ್ರಾಮ ಪಂಚಾಯತ್‌ ಸದಸ್ಯರಲ್ಲಿ ಬಹುತೇಕ ಸದಸ್ಯರು ಮಹಿಳೆಯರಾಗಿದ್ದು, ಕೆಲವು ಸದಸ್ಯರು ಮೀಸಲಾತಿಯಡಿ ಆಯ್ಕೆಗೊಂಡ ಅಧ್ಯಕ್ಷ/ಉಪಾಧ್ಯಕ್ಷರು ಕೂಲಿ ಕಾರ್ಮಿಕರಾಗಿರುವುದರಿಂದ ಅವರಿಗೆ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು ಕಷ್ಟದಾಯಕವಾಗಿದೆ. ಆದುದರಿಂದ ಪ್ರಸ್ತುತ ಬಜೆಟ್‌ ಅಧಿಧಿವೇಶನದಲ್ಲಿ ಗ್ರಾಮ ಪಂಚಾಯತ್‌ ಸದಸ್ಯರ ಗೌರವಧನವನ್ನು ಹೆಚ್ಚಿಸಿ ಅನುದಾನ ಮೀಸಲಿಡುವಂತೆ ಗ್ರಾಮ ಪಂಚಾಯತ್‌ ಸದಸ್ಯರ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಿದರು.

ಸಂಪಾಜೆ ಗ್ರಾಮದ ದಂಡೆಕಜೆ ರಸ್ತೆ ಅಭಿವೃದ್ಧಿ, ಆಲಡ್ಕ ಚಟ್ಟೆಕಲ್ಲು ರಸ್ತೆ ಅಭಿವೃದ್ಧಿ ಬಗ್ಗೆ, ವಿಧಾನ ಪರಿಷತ್‌ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು. ವಿದ್ಯುತ್‌ ಮತ್ತು ಸಬ್‌ಸ್ಟೇಶನ್‌ ಸಮಸ್ಯೆಯ ಬಗ್ಗೆ ಸರಕಾರದ ಗಮನಕ್ಕೆ ತಂದು ಸೂಕ್ತ ವ್ಯವಸ್ಥೆ ಕಲ್ಪಿಸಲು ಮನವಿ ಮೂಲಕ ಒತ್ತಾಯಿಸಲಾಯಿತು.

ಈ ಮೊದಲು ತಾಲೂಕು ಪಂಚಾಯತ್‌ ಮಟ್ಟದಲ್ಲಿ ಕನ್ವರ್ಷನ್‌ ಆಗುತ್ತಿದ್ದು, ಇದೀಗ ಜಿಲ್ಲಾ ಮಟ್ಟದಲ್ಲಿ ವರ್ಗಾವಣೆಯಾಗುವುದರಿಂದ ತಾಲೂಕು ಮಟ್ಟದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಜಾಗದ ಕನ್ವರ್ಷನ್‌ ವ್ಯವಸ್ಥೆಯನ್ನು ಸರಿಪಡಿಸಿಕೊಡಬೇಕೆಂದು ಜಿ.ಕೆ., ಹಮೀದ್‌ ಆಗ್ರಹಿಸಿದರು.

Advertisement

ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಆಶಾ ವಿನಯ್‌ಕುಮಾರ್‌ ಅವರು ಗೂನಡ್ಕ-ಬೈಲೆ ರಸ್ತೆ ಅಭಿವೃದ್ಧಿ, ಗೂನಡ್ಕ-ಪೆಲ್ತಡ್ಕ ಬಸ್‌ ತಂಗುದಾಣ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್‌ ಅಧ್ಯಕ್ಷೆ  ಯಶೋದಾ  ಅವರು ವಹಿಸಿದರು.

ತಾಲೂಕು ಪಂಚಾಯತ್‌ ಸದಸ್ಯೆ ಪುಷ್ಪಾ ಮೇದಪ್ಪ  ಅವರು ಸರಕಾರದ ಮೂಲಕ ಹೆಚ್ಚಿನ ಅನುದಾನವನ್ನು  ಗ್ರಾ.ಪಂ. ಮತ್ತು ತಾ.ಪಂ.ಗೆ ಒದಗಿಸಿಕೊಡುವಂತೆ ಕೇಳಿಕೊಂಡರು.ಸಭೆಯಲ್ಲಿ ನ.ಪಂ. ಮಾಜಿ ಅಧ್ಯಕ್ಷ ಎಂ. ವೆಂಕಪ್ಪಗೌಡ, ಕುಂದಾಪುರ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಸಂತೋಷ್‌ಕುಮಾರ್‌ ಶೆಟ್ಟಿ,  ಗ್ರಾ.ಪಂ. ಸದಸ್ಯೆ ಸುಂದರಿ ಮುಂಡಡ್ಕ, ಉಬರಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಸ್‌ ಗಂಗಾಧರ, ಆಲೆಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಪರಿವಾರಕಾನ, ಸತ್ಯಪ್ರಕಾಶ್‌ ಆಡಿಂಜ, ಸುಳ್ಯ ಅಲ್ಪಸಂಖ್ಯಾತರ ಬ್ಯಾಂಕ್‌ ನಿರ್ದೇಶಕ ಎಸ್‌.ಕೆ. ಹನೀಫ್‌, ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಚ್‌ ಹಮೀದ್‌, ಗ್ರಾಮ ಪಂಚಾಯತ್‌ ಪಿಡಿಓ ಕಾಂತಪ್ಪ, ಸಂಪಾಜೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್‌, ಕಲ್ಲುಗುಂಡಿ ಶಾಲಾ ಅಧ್ಯಾಪಕ ಧನಂಜಯ ಮಾಸ್ಟರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next