Advertisement

ಕಾಂಗ್ರೆಸ್‌ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ

01:08 PM Jun 05, 2017 | Team Udayavani |

ಹೊನ್ನಾಳಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕೇವಲ ಮೂರು ವರ್ಷಗಳಲ್ಲಿ ವಿಶ್ವವೇ ಭಾರತದ ಕಡೆ ಗಮನಹರಿಸುವಂತೆ ಮಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಭಾವಿ ಮತ್ತು ಮೇಧಾವಿ ಪ್ರಧಾನಿಯಾಗಿ ಹೊರ ಹೊಮ್ಮಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

Advertisement

ಚೀಲೂರು ಗ್ರಾಮದ ಎನ್‌ಇಎಸ್‌ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚೀಲೂರು ಜಿಪಂ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯನ್ನದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ನಲ್ಲಿ ಹೂತು ಹೋಗಿದ್ದ ವಂಶಪಾರಂಪರೆಯ ಆಡಳಿತ ವ್ಯವಸ್ಥೆಯನ್ನು ಕಿತ್ತೂಗೆದು ಸ್ವಾತಂತ್ರ ನಂತರ ಲೋಕಸಭೆಯಲ್ಲಿ ವಿರೋಧ ಪಕ್ಷಕ್ಕೆ ಬೇಕಾಗಿರುವ ಸಂಖ್ಯೆಯನ್ನು ಕಾಂಗ್ರೆಸ್‌ ಗಳಿಸಲಾರದ ಸ್ಥಿತಿಗೆ ಬಂದಿದ್ದು, ಇಂದು ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಹೆಜ್ಜೆ ಹಾಕುತ್ತಿದೆ. 

ನರೇಂದ್ರಮೋದಿ ದೇಶಕ್ಕೆ ಕೊಟ್ಟ ಅನೇಕ ಜನಪರ ಯೋಜನೆಗಳನ್ನು ಕಾರ್ಯಕರ್ತರು ಪ್ರತಿ ಮನೆಗೂ ತಲುಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ರಾಜ್ಯದಲ್ಲಿ ಆಕಸ್ಮಿಕವಾಗಿ ಅಧಿ ಕಾರಕ್ಕೆ ಬಂದ ಕಾಂಗ್ರೆಸ್‌ ಕಳೆದ ನಾಲ್ಕು ವರ್ಷಗಳ ಅವಧಿ ಯಲ್ಲಿ ಅಭಿವೃದ್ಧಿಯಲ್ಲಿ ಸೊನ್ನೆ ಸುತ್ತಿದೆ.

ಅನ್ನಭಾಗ್ಯ ಯೋಜನೆ ಎಂದು ಹೇಳಿಕೊಂಡು ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಿಕೊಂಡು ಬಡವರ ಹೊಟ್ಟೆ ಮೇಲೆ ಹೊಡೆದು ಕನ್ನಭಾಗ್ಯ ಮಾಡಲಾಗಿದೆ ಎಂದು ದೂರಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಅವರ ಆಡಳಿತವನ್ನು ಮತ್ತು ಅವರು ಜಾರಿಗೆ ತಂದ ಯೋಜನೆಗಳನ್ನು ಇಂದಿಗೂ ಜನರು ಮೆಲಕು ಹಾಕುತ್ತಿದ್ದಾರೆ.

ಬಿಎಸ್‌ವೈ ಆಡಳಿತ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಆಡಳಿತ ನೀಡಿದರು. ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುವ ಕಾಲ ಈಗ ಬಂದಿದೆ ಎಂದರು. ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಶಾಸಕರು ಅಭಿವೃದ್ಧಿ ಕಾರ್ಯ ಮಾಡಲಿ ಎಂದು ತಾಲೂಕು ಆಡಳಿತ ಬಗ್ಗೆ ಯಾವುದೇ ಧರಣಿ,

Advertisement

-ಪ್ರತಿಭಟನೆ ಹಮ್ಮಿಕೊಳ್ಳಲಿಲ್ಲ ಇದನ್ನೇ ದೌರ್ಬಲ್ಯ ಎಂದು ತಿಳಿದ ಶಾಸಕರು ಭ್ರಷ್ಟಾಚಾರ ಮಾಡುತ್ತಾ ಸರ್ಕಾರದ ಅಕ್ಕಿಯನ್ನು ತಮ್ಮ ರೈಸ್‌ ಮಿಲ್‌ನಲ್ಲಿ ಇಟ್ಟುಕೊಂಡು ಮರು ಪಾಲಿಷ್‌ ಮಾಡಿ ಕಾಳ ಸಂತೆಯಲ್ಲಿ ಮಾರಿದ್ದು ಮಾದ್ಯಮದಲ್ಲಿ ತೇಲಿ ಬಂದದ್ದನ್ನು ಮುಚ್ಚಿ ಹಾಕಿದ್ದ ಘಟನೆಯನ್ನು ಇನ್ನು ಜನರು ಮರೆತಿಲ್ಲ ಎಂದರು.  

ರೇಣುಕಾಚಾರ್ಯರ ಹಿಂಬಾಲಕರು ಮರಳು ದಂಧೆಯಲ್ಲಿ ತೊಡಗಿ ಮರಳಿನ ಅಭಾವ ಸೃಷ್ಟಿಯಾಗಿದೆ ಎಂದು ಶಾಸಕರು ಆರೋಪ ಮಾಡಿದ್ದಾರೆ ತಾಲೂಕು ಆಡಳಿತ ಶಾಸಕರ ಕೈಯಲ್ಲಿದ್ದು, ನನ್ನ ಹಿಂಬಾಲಕರು ಮರಳು ಅಭಾವ ಸೃಷ್ಟಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. 

ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಜಿ.ರಾಜಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಕುಬೇಂದ್ರಪ್ಪ, ಯುವ ಮೋರ್ಚಾ ಅಧ್ಯಕ್ಷ ಸಿ.ಆರ್‌. ಶಿವಾನಂದ್‌, ಪಕ್ಷದ ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಕನಕದಾಸ, ಎಸ್ಸಿ-ಎಸ್ಟಿ ಮೋರ್ಚಾ ಅಧ್ಯಕ್ಷ ಮಾರುತಿ ನಾಯ್ಕ, ಮುಖಂಡರಾದ ನೆಲಹೊನ್ನೆ ಮಂಜುನಾಥ್‌, 

-ಶಾಂತರಾಜ ಪಾಟೀಲ್‌, ಸುರೇಶ್‌ ಹೊಸಕೇರಿ, ಅರಸುನಾಯ್ಕ, ದಿಡಗೂರು ಪಾಲಾಕ್ಷಪ್ಪ, ವಾಲ್ಮೀಕಿ ಸಮಾಜದ ಮುಖಂಡ ವೀರಪ್ಪ ಮಾತನಾಡಿದರು. ಜಿಪಂ ಸದಸ್ಯ ಸುರೇಂದ್ರನಾಯ್ಕ, ತಾಪಂ ಸದಸ್ಯ ಕೆ.ಎಲ್‌.ರಂಗಪ್ಪ, ಚಂದಪ್ಪ ಇತರರು ಉಪಸ್ಥಿತರಿದ್ದರು. ಚೀಲೂರು ಲೋಕೇಶ್‌ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next