Advertisement

ಪಾಪ ಕರ್ಮ ನಾಶ ಮಾಡುವುದೇ ದೀಕ್ಷೆ ಸಂಸ್ಕಾರ: ಸ್ವಾಮೀಜಿ

02:46 PM May 04, 2019 | pallavi |

ಹಾವೇರಿ: ಧರ್ಮ ಸಂಸ್ಕಾರ ನೀಡುವ ಮೂಲಕ ನಮ್ಮಲ್ಲಿರುವ ಪಾಪ ಕರ್ಮಗಳನ್ನು ನಾಶ ಮಾಡುವುದೇ ದೀಕ್ಷೆ ಸಂಸ್ಕಾರ ಎಂದು ನಗರದ ಹರಸೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

Advertisement

ನಗರದ ಹರಸೂರು ಬಣ್ಣದಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ ಹಾಗೂ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳ 9ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ವಟುಗಳ ದೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೀರಶೈವ ಧರ್ಮದಲ್ಲಿ ಬಹಳ ಪ್ರಮುಖವಾದುದೆಂದರೆ ದೀಕ್ಷೆ ನೀಡುವುದು. ದೀಕ್ಷೆ ಎನ್ನುವುದಕ್ಕೆ ಬಹಳ ಅರ್ಥವಿದೆ. ಬೇರೆ ಬೇರೆ ಧರ್ಮಗಳಲ್ಲಿ ಅದರದೇ ಆದಂತಹ ಪದ್ಧತಿಗಳಿವೆ. ಆದರೆ, ವೀರಶೈವ ಧರ್ಮದಲ್ಲಿ ಲಿಂಗಧಾರಣೆ ಮಾಡಿಕೊಳ್ಳುವ ಮೂಲಕ ಪರಮಾತ್ಮನನ್ನು ದೇಹದ ಮೇಲೆ ಹೊತ್ತುಕೊಂಡು ಹೋಗುವ ಶಕ್ತಿ ಈ ಧರ್ಮದಲ್ಲಿ ಮಾತ್ರವಿದೆ ಎಂದರು.

ದೀಕ್ಷೆ ನಂತರದಲ್ಲಿ ಧಾರಣೆ ಮಾಡಿಕೊಳ್ಳುವ ಲಿಂಗವು ಶಿವನ ಪಂಚ ಮುಖಗಳಿಂದಾದು ಎನ್ನಲಾಗುತ್ತದೆ. ಇಷ್ಟಲಿಂಗವು ಮಾನವನಲ್ಲಿನ ದರಿದ್ರವನ್ನು ನಾಶಪಡಿರುತ್ತದೆ ಎನ್ನುವ ಕಾರಣಕ್ಕೆ ಇದನ್ನು ಧರಿಸಲಾಗುತ್ತದೆ ಎಂದು ತಿಳಿಸಿದರು.

ಲಿಂಗಧಾರಣೆಗೆ ಯಾವುದೇ ಜಾತಿ ಬೇಧವಿಲ್ಲ, ತಾಯಿ ಗರ್ಭದಿಂದ ಜನ್ಮ ತಾಳಿದ ನಂತರದಲ್ಲಿ ದೀಕ್ಷೆ ಸಂಸ್ಕಾರ ಪಡೆಯುವ ಸಂದರ್ಭದಲ್ಲಿ ನೀಡಲಾಗುವ ಮಂತ್ರೋಪದೇಶದಿಂದ ಜೀವನದಲ್ಲಿ ಮರು ಜೀವ ಪಡೆದಂತೆ. ಹೀಗಾಗಿ ದೀಕ್ಷಾ ಸಂಸ್ಕಾರ ವೀರಶೈವರಿಗೆ ಬಹಳ ಮಹತ್ವವಾದುದು ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ವಟುಗಳಿಗೆ ಲಿಂಗ ದೀಕ್ಷೆ ನೀಡಲಾಯಿತು. ಇಬ್ಬರು ಮಹಿಳೆಯರೂ ಸಹ ಲಿಂಗ ದೀಕ್ಷೆ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next