Advertisement

ತಂಡದಲ್ಲಿ ಮನೆಯ ವಾತಾವರಣ ಇದು ಕ್ಯಾಪ್ಟನ್‌ ಕೊಹ್ಲಿ ಬಯಕೆ

03:45 AM Feb 08, 2017 | Team Udayavani |

ಹೈದರಾಬಾದ್‌: ತಂಡದಲ್ಲಿ ಯಾವತ್ತೂ ಮನೆಯ ವಾತಾವರಣ ಇರಬೇಕು. ಅದರಲ್ಲೂ ಮುಖ್ಯವಾಗಿ, ಯುವ ಆಟಗಾರರಿಗೆ ಇದರ ಅಗತ್ಯ ಬಹಳಷ್ಟಿದೆ ಎಂಬುದನ್ನು ಕಿರಿಯ ವಯಸ್ಸಿನಲ್ಲೇ ನಾಯಕನ ಹುದ್ದೆ ನಿಭಾಯಿಸುತ್ತಿರುವ ಕೊಹ್ಲಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

Advertisement

ಇದಕ್ಕೆ ಮಂಗಳವಾರದ ವಿದ್ಯಮಾನವೊಂದು ಸಾಕ್ಷಿಯಾಯಿತು. ಆರಂಭಕಾರ ಕೆ.ಎಲ್‌. ರಾಹುಲ್‌, ಆಲ್‌ರೌಂಡರ್‌ಗಳಾದ ಹಾರ್ದಿಕ್‌ ಪಾಂಡ್ಯ, ಜಯಂತ್‌ ಯಾದವ್‌ ಜತೆಗೂಡಿ ವಿರಾಟ್‌ ಕೊಹ್ಲಿ ಉಪಾಹಾರ ಸೇವಿಸಿದರು. ಇದರ ಚಿತ್ರವನ್ನು ಟ್ವಿಟರ್‌ ಮತ್ತು ಇನ್‌ಸ್ಟ್ರಾಗ್ರಾಮ್‌ ಮೂಲಕ ಹರಿಯಬಿಟ್ಟರು. ಇದಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

“ಹುಡುಗರ ಜತೆ ಬ್ರೇಕ್‌ಫಾಸ್ಟ್‌ ಮಾಡುತ್ತಿದ್ದೇನೆ. ಹೈದರಾಬಾದ್‌ನಲ್ಲಿಂದು ಬಿಸಿಲಿನ ಹಿತಕರ ವಾತಾವರಣ. ಹ್ಯಾವ್‌ ಎ ಗ್ರೇಟ್‌ ಡೇ ಆಲ್‌ ಆಫ್ ಯೂ…’ ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

ಕೋಚ್‌ ಅನಿಲ್‌ ಕುಂಬ್ಳೆ ಕೂಡ ತಂಡದಲ್ಲಿ ಸದಾ ಮನೆಯ ವಾತಾವರಣವನ್ನು ಬಯಸುತ್ತಾರೆ. “ಮೈದಾನದಾಚೆ ನಮ್ಮ ಆಟಗಾರರೆಲ್ಲ ಅತ್ಯುತ್ತಮ ಗೆಳೆಯರಾಗಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ. ಇದರಿಂದ ನಾನು ಬಹಳಷ್ಟು ಪ್ರಭಾವಿತನಾಗಿದ್ದೇನೆ…’ ಎಂದು ಕುಂಬ್ಳೆ ಕಳೆದ ವೆಸ್ಟ್‌ ಇಂಡೀಸ್‌ ಪ್ರವಾಸ ಮುಗಿಸಿದ ಬಳಿಕ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next