Advertisement

ಆಹಾರ ಇಲಾಖೆ ಹೊಸ ನಿಯಮದಿಂದ ಸಮಯ ಹಾಳು

01:14 PM Jun 20, 2019 | Suhan S |

ಸಕಲೇಶಪುರ: ಆಹಾರ ಇಲಾಖೆಯ ಹೊಸ ನಿಯಮದ ಎಡವಟ್ಟಿನಿಂದಾಗಿ ಜನರು ಕುಟುಂಬ ಸದಸ್ಯರೊಂದಿಗೆ ಕೆಲಸ ಕಾರ್ಯಗಳನ್ನು ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಆತಂಕದಲ್ಲಿ ಕಾದು ಕುಳಿತುಕೊಳ್ಳುವಂತಾಗಿದೆ.

Advertisement

ಸರ್ವರ್‌ ಸಮಸ್ಯೆ: ಆಹಾರ ಇಲಾಖೆಯ ಒಂದೇ ವೆಬ್‌ಸೈಟ್‌ನಲ್ಲಿ ಕೆವೈಸಿಯಡಿ ಕಾರ್ಡ್‌ ನವೀಕರಣ ಹಾಗೂ ಆಹಾರ ಪಡಿತರ ನೀಡಲು ಅವಕಾಶ ಕಲ್ಪಿಸಿರುವುದು ಸಮಸ್ಯೆ ಮೂಲವಾಗಿದೆ. ಕೆವೈಸಿ ದೃಢೀಕರಣಕ್ಕಾಗಿ ಗ್ರಾಹಕರು ನ್ಯಾಯಬೆಲೆ ಅಂಗಡಿಗೆ ಆಗಮಿಸಿ ತಮ್ಮ ಬೆರಳಚ್ಚು (ಬಯೋ ಮೆಟ್ರಿಕ್‌) ನೀಡಬೇಕಾಗಿದೆ. ಇದೇ ವೆಬ್‌ಸೈಟ್‌ನಲ್ಲಿ ಆಹಾರ ಸಾಮಗ್ರಿಗಳ ವಿತರಣೆ ಕಾರ್ಯವನ್ನು ಮಾಡಬೇಕಿದೆ. ಆದರೆ, ಈ ಎರಡು ಕಾರ್ಯಕ್ಕೆ ಆಹಾರ ಇಲಾಖೆಯ ವೆಬ್‌ಸೈಟ್‌ನ ಸರ್ವರ್‌ ಸಮಸ್ಯೆ ಅತಿಯಾಗಿರುವುದರಿಂದ ಸರ್ವರ್‌ಗಾಗಿ ನ್ಯಾಯಬೆಲೆ ಅಂಗಡಿ ಮುಂದೆ ಜನರು ವಾರ ಗಟ್ಟಲೇ ಕಾದು ಕುಳಿತುಕೊಳ್ಳ ಬೇಕಿದೆ.

ಪಡಿತರ ಚೀಟಿ ರದ್ದುಗೊಳ್ಳುವ ಭೀತಿ: ಪಡಿತರ ವನ್ನು ಪ್ರತಿ ತಿಂಗಳ 30ರ ಒಳಗಾಗಿ ಪಡೆಯದಿದ್ದರೆ ಪಡಿತರ ಕೈತಪ್ಪಲಿದೆ. ಆದರೆ, ಕೆವೈಸಿಯಡಿ ನಿಯಮದಡಿ ಕಾರ್ಡ್‌ ದೃಢೀಕರಣ ಮಾಡದಿದ್ದರೆ ಕಾರ್ಡ್‌ ರದ್ದುಗೊಳ್ಳಲಿರುವುದರಿಂದ ಜನರು ಸಂಕಷ್ಟಕ್ಕಿಡಾಗಿದ್ದಾರೆ. ಕೆವೈಸಿಯಡಿ ಕಾರ್ಡ್‌ ನವೀಕರಣಕ್ಕೆ ಆಹಾರ ಇಲಾಖೆ ಜೂನ್‌ ಒಂದರಿಂದ ಜು.30 ರವರಗೆ ಗಡುವು ನೀಡಿದೆ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಆಹಾರ ಇಲಾಖೆ ಕಾರ್ಡ್‌ ದೃಢೀಕರಣಕ್ಕೆ ಅವಕಾಶ ಕಲ್ಪಿಸಿ 20 ದಿನ ಕಳೆದರು ತಾಲೂಕಿನಲ್ಲಿರುವ 32 ಸಾವಿರ ಪಡಿತರ ಕಾರ್ಡ್‌ ಗಳಲ್ಲಿ ಕೇವಲ ಶೇ.5 ಪಡಿತರ ಚೀಟಿಗಳಷ್ಟೆ ದೃಢೀಕರಣಗೊಂಡಿವೆ.

ಕೆವೈಸಿಯಡಿ ಕಾರ್ಡ್‌ ನವೀಕರಣಕ್ಕೆ ಕಾರ್ಡ್‌ನಲ್ಲಿ ಹೆಸರಿರುವ ಎಲ್ಲರೂ ನ್ಯಾಯಬೆಲೆ ಅಂಗಡಿಗೆ ಬರಬೇಕಿರುವುದರಿಂದ ಕೂಲಿ ಕೆಲಸ ಬಿಟ್ಟು ಜನರು, ಶಾಲೆ ಬಿಟ್ಟು ಮಕ್ಕಳು ವಾರಗಟ್ಟಲೆ ಅಂಗಡಿ ಮುಂಭಾಗ ಕಾಯ ಬೇಕಿದೆ. ಪಡಿತರ ರದ್ದು ಗೊಳ್ಳುವ ಭಯದಿಂದ ಜನ ಆತಂಕದಿಂದ ನ್ಯಾಯ ಬೆಲೆಗಳ ಅಂಗಡಿಗಳ ಮುಂದೆ ಕಾದು ಕಾದು ಯಾಕಪ್ಪಾ ಈ ಜೀವನ ಎಂದು ಬೇಸತ್ತಿದ್ದಾರೆ.

● ಸುಧೀರ್‌ ಎಸ್‌.ಎಲ್

Advertisement
Advertisement

Udayavani is now on Telegram. Click here to join our channel and stay updated with the latest news.

Next