ರೋಣ: ರಸ್ತೆಯ ಪಕ್ಕದಲ್ಲಿ ಕುರಿ ಕಾಯುತ್ತಿರುವ ಬಾಲಕನಿಗೆ ಅಕ್ಷರದ ಅರಿವು ಮೂಡಿಸಿ ಶಾಲೆಗೆ ಸೇರಿಸುವ ಮೂಲಕ ಶಿಕ್ಷಣ ಇಲಾಖೆಯ ಮುಖ್ಯಸ್ಥರು ಶಿಕ್ಷಣ ಪ್ರೇಮದ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.
ಹೊಲ ಗದ್ಯೆಗಳಲ್ಲಿ ಬಿಸಿಲು, ಚಳಿ, ಗಾಳಿಯನ್ನೆದೆ ಕುರಿ ಕಾಯಿಯುವ ಕುರಿಗಾಯಿಯ ಮಕ್ಕಳಿಗೂ ಶಾಲೆಗೂ ಅಂದರೆ ಅಷ್ಟಕ್ಕೆ ಅಷ್ಟೆ ಸಂಬಂಧ.ಆದರೆ, ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಂಡ್ಯ ಹಾಗೂ ಹಾಗೂ ಅಕ್ಷರ ದಾಸೋಹ ಅಕಾರಿ ಬಸವರಾಜ ಅಂಗಡಿ ಜೊತೆಗೂಡಿ 5 ನೇ ತರಗತಿಯಿಂದ ಹೊರಗುಳಿದ ಮಗುವನ್ನು ಶಾಲೆಗೆ ದಾಖಲಿಸಿದ್ದಾರೆ.
ತಾಲೂಕಿನ ವಿವಿಧ ಗ್ರಾಮಗಳ ಶಾಲೆಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಅಕ್ಷರ ದಾಸೋಹದ ಕುರಿತು ಪರಿಶೀಲನೆಗೆ ತೆರಳಿದ್ದರು. ತಾಲೂಕಿನ ಕಳಕಾಪುರ ಗ್ರಾಮದಿಂದ ಮರಳಿ ರೋಣ ಪಟ್ಟಣಕ್ಕೆ ಬರುವ ಸಂದರ್ಭದಲ್ಲಿ 11 ವರ್ಷದ ರಾಜು ಕಟ್ಟಿಮನಿ ಎಂಬ ಬಾಲಕ ಮಾರ್ಗ ಮಧ್ಯೆ ಶಾಲೆ ಬಿಟ್ಟು ಕುರಿ ಕಾಯುತ್ತಿರುವುದನ್ನು ಗಮನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ನಂಜುಂಡಯ್ಯ ಹಾಗೂ ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ ಬಾಲಕನ್ನು ಶಾಲೆಗೆ ಸೇರುವಂತೆ ಸೂಚಿಸಿದ್ದಾರೆ. ಅದರಂತೆ ಗುರುವಾರ ಇಟಗಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಗೆ ಸೇರಿಸಿದ್ದಾರೆ.
ಬಾಲಕ ಸ್ಥಿತಿ ಗತಿಯನ್ನು ಪರಿಶೀಲಿಸಿದ ಈ ಅಧಿಕಾರಿಗಳ ತಂಡ ಇಟಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರೊಂದಿಗೆ ದೂರವಾಣಿಯ ಮೂಲಕ ಮಾತನಾಡಿ, ಬಾಲಕನ್ನು ಶಾಲೆಗೆ ಸೇರಿಸಿಕೊಳ್ಳುವಂತೆ ಸೂಚಿಸಿದ್ದಾರೆ.ಅಲ್ಲದೆ ಅವರ ಸಂಬಂಧಿಕರನ್ನು ಸಂಪರ್ಕಿಸಲು ರೋಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ.
ಹೌದು ಈ ಬಾಲಕ ಮೂಲತಃ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಿಂದ ಕುರಿ ಕಾಯಲು ಕರೆ ತಂದಿದ್ದಾರೆ. ಈ ಬಾಲಕನ ತಂದೆ ಕಾಯಿಲೆಗೆ ತುತ್ತಾಗಿ ಹಸುನಿಗಿದ್ದರಿಂದ ಈತನಿಗೆಚಿಕ್ಕ ವಯಸ್ಸಿನಲ್ಲಿ ಮೂರೊತ್ತಿನ ಕೂಳಿಗಾಗಿ ಕುರಿ ಕಾಯಿವ ಸ್ಥಿತಿ ಬಂದೊದಗಿದೆ.ಆದರೆ ದೇವರ ಲೀಲೆಯೂ ಈ ಮಗು ಶಿಕ್ಷಣ ಇಲಾಖೆಯ ಕಣ್ಣಿಗೆ ಬಿದ್ದಿದ್ದರಿಂದ ಶಾಲೆಗೆ ಸೇರಿದೆ.