Advertisement
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ ಪುತ್ತೂರು ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಜನ ಜಾಗೃತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇರು ಬಿಟ್ಟಿರುವ ಮದ್ಯಪಾನದಂತಹ ವ್ಯವಸ್ಥೆಯನ್ನು ಪ್ರಜಾ ರಾಜ್ಯದಲ್ಲಿ ಮನಪರಿವರ್ತನೆಯಿಂದ ಮಾತ್ರ ದೂರಗೊಳಿಸಲು ಸಾಧ್ಯ. ಮದ್ಯಪಾನ ಸಂಯಮ ಮಂಡಳಿಯೂ ಇದೇ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುವಂತೆ ಸೀಮಿತಗೊಳಿಸಲಾಗಿದೆ. ಮಂಡಳಿಯ ವಾರ್ಷಿಕ ಬಜೆಟ್ ಇರುವುದೂ 80 ಲಕ್ಷ ರೂ. ಮಾತ್ರ. ಆದರೂ ಈ ಹಿಂದೆ ಈ ಬಜೆಟ್ ಖರ್ಚಾಗಿರಲಿಲ್ಲ. 12 ಮಂದಿ ಸ್ವಾತಂತ್ರ್ಯ ಹೋರಾಟಗಾರರೇ ಮಂಡಳಿಯ ಅಧ್ಯಕ್ಷರಾಗಿದ್ದರೂ ಮಂಡಳಿಯ ವ್ಯಾಪ್ತಿಯನ್ನೂ ಅವರು ಅರಿತಿರಲಿಲ್ಲ. ಆದರೆ ಇತ್ತೀಚೆಗೆ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಮಂಡಳಿಯ ಉದ್ದೇಶ ಸಾಕಾರಗೊಳ್ಳುತ್ತಿದೆ ಎಂದು ಅವರು ಹೇಳಿದರು. ಉತ್ತಮ ಶಿಕ್ಷಣ ನೀಡಿ
ಮುಖ್ಯ ಅತಿಥಿಯಾಗಿದ್ದ ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಮಕ್ಕಳನ್ನು ಯಾವುದೇ ಚಟಗಳಿಗೆ ಒಳಗಾಗದಂತೆ ಎಚ್ಚರಿಕೆ ವಹಿಸಿ ಉತ್ತಮ ಶಿಕ್ಷಣ ನೀಡುವ ಕುರಿತು ಪೋಷಕರು ಗಮನಹರಿಸಬೇಕು ಎಂದರು. ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಸರಕಾರ ಮಾಡಬೇಕಾದ ಕೆಲಸವನ್ನು ಜನಜಾಗೃತಿ ವೇದಿಕೆ, ಧ.ಗ್ರಾ. ಯೋಜನೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಒಗ್ಗಟ್ಟು ಹಾಗೂ ಇಚ್ಛಾಶಕ್ತಿಯನ್ನು ಪ್ರತಿಯೊಬ್ಬರೂ ಪ್ರದರ್ಶಿಸುವ ಮೂಲಕ ಗ್ರಾಮಗಳನ್ನು ಮದ್ಯಮುಕ್ತವನ್ನಾಗಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
Related Articles
Advertisement
ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ. ಜಿಲ್ಲಾ ಉಪ ನಿರ್ದೇಶಕ ವೈ. ಶಿವರಾಮಯ್ಯ, ಜನಜಾಗೃತಿ ವೇದಿಕೆ ರಾಜ್ಯ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಮಹಿಳಾ ಮತ್ತು ಶಿಶು ಕಲ್ಯಾಣಾಧಿಕಾರಿ ಶಾಂತಿ ಟಿ. ಹೆಗ್ಡೆ, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ಉಪಸ್ಥಿತರಿದ್ದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸದಸ್ಯ ಕೆ. ಭಾಸ್ಕರ ಕೋಡಿಂಬಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಂದಿಸಿದರು. ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.
ವಿಚಾರ ಗೋಷ್ಠಿಅನಂತರ ಮದ್ಯ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತ ಪ್ರಥಮ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾçಸ್ ಮದ್ಯಪಾನ ಮತ್ತು ಮಾನಸಿಕ ಅಸ್ವಸ್ಥತೆ ವಿಷಯದ ಎರಡನೇ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾನಸಿಕ ರೋಗ ತಜ್ಞ ಡಾ| ಜಯಂತ ಕುಮಾರ್ ಕೆ. ಮಾಹಿತಿ ನೀಡಿದರು. ರಾಜ್ಯದಲ್ಲಿ ಮತ್ತೆ ಆರಂಭ
ಸ್ವಾತಂತ್ರ್ಯ ಲಭಿಸಿದ ಕಾಲದಲ್ಲಿ ನೆಹರೂ ಪ್ರಧಾನಿಯಾಗಿದ್ದಾಗ ಗಾಂಧೀಜಿ ಅವರ ಮದ್ಯ ವಿರೋಧಿ ಚಳವಳಿಯ ಕಾರಣದಿಂದ ದೇಶದಲ್ಲಿ ಮದ್ಯ ವಿರೋಧಿ ನಿಲುವು ಇತ್ತು. ರಾಜ್ಯದಲ್ಲೂ ಎಸ್. ನಿಜಲಿಂಗಪ್ಪ ಸಿಎಂ ಆಗಿದ್ದಾಗ, ರಾಮಕೃಷ್ಣ ಹೆಗಡೆ ಅಬಕಾರಿ ಸಚಿವರಾಗಿದ್ದ ಸಂದರ್ಭ ಒತ್ತಡದಿಂದ ಮದ್ಯವನ್ನು ಮರು ಆರಂಭಿಸಲಾಯಿತು. ದೇವರಾಜ ಅರಸು ಸಿಎಂ ಆಗಿದ್ದಾಗ ಮದ್ಯ ನಿಯಂತ್ರಣದ ದೃಷ್ಟಿಯಿಂದ ಸಂಯಮ ಮಂಡಳಿಯೂ ಚಟುವಟಿಕೆ ಆರಂಭಿಸಿತು. ಬಿಹಾರದಲ್ಲಿ 2012ರಿಂದ ಕೋಟ್ಯಾಂತರ ಮಹಿಳೆಯರು ಒಗಟ್ಟಿನ ಹೋರಾಟ ನಡೆಸಿದ ಪರಿಣಾಮ ಅಲ್ಲಿ ಮದ್ಯ ನಿಷೇಧ ಜಾರಿಗೆ ಬಂತು. ಇಂತದ್ದೇ ಪ್ರಯತ್ನ ರಾಜ್ಯದಲ್ಲೂ ನಡೆದರೆ ನಿಷೇಧ ಸಾಧ್ಯವಾಗಲಿದೆ ಎಂದು ರುದ್ರಪ್ಪ ಹೇಳಿದರು. ಹೆಚು ಮಕ್ಕಳಿಗೆ ಸಮಸ್ಯೆ
ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಕುಡಿತದ ಪರಿಸ್ಥಿತಿಯ ಅನುಭವವನ್ನು ಎದುರಿಸುವವರು ಹೆಣ್ಣು ಮಕ್ಕಳು. ಸರಕಾರದ ಕಾನೂನಿಗಿಂತಲೂ ನಮಗೆ ನಾವೇ ನಿಯಂತ್ರಣ ಮಾಡಿಕೊಳ್ಳುವುದು ಅತಿ ಅಗತ್ಯ ಎಂದರು.
ನ್ಯಾಯವಾದಿ ಭಾಸ್ಕರ ಕೋಡಿಂಬಾಳ ಅವರು ಸಂಯಮ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಬಳಿಕ ಬೀದಿ ನಾಟಕ, ಜಾಗೃತಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.