Advertisement

ನಿಡಗುಂದಿ ತಾಲೂಕಿಗೆ ಸೇರಿಸಲು ಯಲಗೂರು ಭಾಗದ  ಗ್ರಾಮಸ್ಥರ  ಆಗ್ರಹ 

04:03 PM Sep 14, 2017 | |

ವಿಜಯಪುರ: ಪ್ರಸ್ತುತ ಮುದ್ದೇಬಿಹಾಳ ತಾಲೂಕ ಕೇಂದ್ರದಿಂದ ಸುಮಾರು 30 ಕಿ.ಮೀ. ದೂರವಿರುವ ತಮ್ಮ ಗ್ರಾಮಗಳನ್ನು ನೂತನ ತಾಲೂಕ ಕೇಂದ್ರ ನಿಡಗುಂದಿಗೆ ಸೇರಿಸಬೇಕು ಎಂದು ಆಗ್ರಹಿಸಿ ಯಲಗೂರ, ಕಾಶಿನಕುಂಟಿ, ಮಸೂತಿ, ಬೂದಿಹಾಳ, ವಡವಡಗಿ ಭಾಗದ ಗ್ರಾಮಸ್ಥರ ನಿಯೋಗ ಜಿಲ್ಲಾಡಳಿತವನ್ನು ಆಗ್ರಹಿಸಿತು.

Advertisement

ಮುಖಂಡರಾದ ಗೋಪಾಲ ಗದ್ದನಕೇರಿ ಮಾತನಾಡಿ, ವಾಸುದೇವ ಸಮಿತಿ, ಪಿ.ಎಂ. ಹುಂಡೇಕಾರ ಸಮಿತಿ, ಪಿ.ಸಿ.ಗದ್ದಿಗೌಡರ ಸಮಿತಿ, ಎಂ.ಬಿ. ಪ್ರಕಾಶ ಸಮಿತಿ ಸಮಗ್ರ ಗ್ರಾಮಗಳ ಅಂತರ ಮತ್ತು ಅನಾನುಕೂಲತೆ ಮಾನದಂಡದ ಮೇಲೆ ಈ ಗ್ರಾಮಗಳನ್ನು ನಿಯೋಜಿತ ನಿಡಗುಂದಿ ತಾಲೂಕಿನಲ್ಲಿ ಕೂಡಿಸಿ ಆ ಪ್ರಕಾರ ಸರಕಾರಕ್ಕೆ ವರದಿ ಸಲ್ಲಿಸಿದೆ. ಯಲಗೂರು, ಕಾಶಿನಕುಂಟಿ, ಮಸೂತಿ,ಬೂದಿಹಾಳ, ವಡವಡಗಿ ಭಾಗದ ಗ್ರಾಮಗಳು ಭೌಗೋಳಿಕವಾಗಿ ಮುದ್ದೇಬಿಹಾಳ ತಾಲೂಕ ಕೇಂದ್ರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಕಾರಣ ಈ ಭಾಗದ ಹಳ್ಳಿಗಳನ್ನು ಘೋಷಿತ ನೂತನ ನಿಡಗುಂದಿ ತಾಲೂಕಿಗೆ ಸೇರಿಸುವಂತೆ ಆಗ್ರಹಿಸಿದರು.

ಯಲಗೂರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಹಾಗೂ ಅದರ ಸುತ್ತಲಿನ ಗ್ರಾಮಗಳ ಜನರು ಸರ್ಕಾರಿ ಕೆಲಸಗಳಿಗೆ ಮುದ್ದೇಬಿಹಾಳ ತಾಲೂಕಿಗೆ ಅಲೆಯಬೇಕು. ಇದರಿಂದ ಅನಗತ್ಯವಾಗಿ ದೂರದ ಗ್ರಾಮ ಪಂಚಾಯತ್‌ಗೆ ಹೋಗುವುದು ಕಷ್ಟಸಾಧ್ಯವಾಗುತ್ತದೆ. ಮತ್ತೂಂದೆಡೆ ನಿಯೋಜಿತ ನಿಡಗುಂದಿ ತಾಲೂಕಿನ 2-3 ಕಿ.ಮೀ. ದೂರದಲ್ಲಿದ್ದು, ನಿತ್ಯದ ಎಲ್ಲ ವಹಿವಾಟಿಗೆ ನಿಡಗುಂದಿ ಪಟ್ಟಣವನ್ನೇ ಅವಲಂಬಿಸಿದ್ದು ನಿಯೋಜಿತ ನೂತನ ತಾಲೂಕ ಕೇಂದ್ರಕ್ಕೆ ಈ ಗ್ರಾಮಗಳನ್ನು ಸೇರಿಸಬೇಕು ಎಂದು ಆಗ್ರಹಿಸಿದರು.

ಯಲಗೂರು ಗ್ರಾಪಂ ಈಗಾಗಲೇ ಗ್ರಾಮ ಸಭೆಯಲ್ಲಿ ಠರಾವು ಪಾಸು ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಭಾಗದ ಹಳ್ಳಿಗಳ ಸಿವ್ಹಿಲ್‌ ವ್ಯಾಜ್ಯಗಳು ಮುದ್ದೇಬಿಹಾಳ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಮತ್ತು ಅವಕ್ಕೆ ಪೂರಕವಾಗಿ ಅಪರಾಧಿ ಕ ಪ್ರಕರಣಗಳು ದಾಖಲಾಗುತ್ತಿದ್ದು, ಬಸವನಬಾಗೇವಾಡಿ ತಾಲೂಕು ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುತ್ತವೆ. ಅದರಂತೆ ಈ ಗ್ರಾಮಗಳ ಅಪರಾಧ ಪ್ರಕರಣಗಳು ನಿಡಗುಂದಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗುವುದರಿಂದ ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ಎರಡು ತಾಲೂಕುಗಳಿಗೆ ಅಲೆದಾಡುವದರಿಂದ ಅಡಚಣೆ ಉಂಟಾಗುತ್ತಿದೆ ಎಂದರು.

ಸಿದ್ದಪ್ಪ ಗೌಡರ ಮಾತನಾಡಿ, ಯಲಗೂರ ಗ್ರಾಪಂ ವ್ಯಾಪ್ತಿಯ ಹಲವು ಹಳ್ಳಿಗಳು ನಿಡಗುಂದಿಗೆ ಹೊಂದಿಕೊಂಡಿದ್ದು, ಶೇ.
20ರಷ್ಟು ಜಮೀನು ನಿಡಗುಂದಿ ಹೋಬಳಿಯಲ್ಲಿವೆ. ಅದರಂತೆ ನಿಡಗುಂದಿಯ ಶೇ. 20ರಷ್ಟು ಜಮೀನುಗಳು ಯಲಗೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವುದರಿಂದ ಸಮಗ್ರ ನಾಗರಿಕರಿಗೆ ಎರಡು ಕಡೆ ತಮ್ಮ ಕಂದಾಯ ದಾಖಲಾತಿಗಳು ಮತ್ತು ಇತರ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ತೊಂದರೆ ಅನುಭವಿಸಬೇಕಾಗಿದೆ ಎಂದರು. ಬಸವರಾಜ ಕುಂಬಾರ, ಬಸವರಾಜ ಕಂದಗನೂರ, ಬಸವರಾಜ ಸೀತಿಮನಿ, ಸೋಮನಗೌಡ ಬಿರಾದಾರ, ಎಂ.ಕೆ. ಚಿನ್ನಿಗಾವಿ,  ಎ.ಎಸ್‌. ದಂಗಿ, ಎಂ.ಡಿ. ಕಾಮನಕೇರಿ, ಲಕ್ಷ್ಮಣಗೌಡ ಪಾಟೀಲ, ಭೀಮಪ್ಪ ಪೂಜಾರಿ, ಬಸವರಾಜ ಗಣಿ, ಮಹಾಂತೇಶ ಡೆಂಗಿ, ರಾಮಣ್ಣ ಗೌಡರ, ರಾಮಣ್ಣ ಪೂಜಾರಿ, ಶರೀಫ ವಾಲೀಕಾರ, ಹುಸೇನಸಾಬ ನಂದನೂರ, ವೈ.ಎಸ್‌. ಜಟಗಿ, ಚನ್ನಬಸು ಮಜ್ಜಗಿ, ಸಿದ್ದಪ್ಪ ವಾಲೀಕಾರ, ವೈ.ವೈ. ಪಾಟೀಲ, ಆರ್‌.ವೈ. ಗೌಡರ, ವಿ.ಎಂ.ಅಮ್ಮತಗೌಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next