ಬಳ್ಳಾರಿ: ಕಾಶ್ಮೀರದ ಪುಲ್ವಾಮಾ ಗ್ರಾಮದಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಗರದ ಎಎಸ್‌ಎಂ ಕಾಲೇಜಿನಲ್ಲಿ ವಿವಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಶನಿವಾರ ನುಡಿನಮನ ಸಲ್ಲಿಸಿದರು.
ವಿವಿ ಸಂಘದ ಅಧ್ಯಕ್ಷ ಉಡೇದ ಬಸವರಾಜ ಮಾತನಾಡಿ, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಉಗ್ರ ಸಂಘಟನೆಯ ಕೃತ್ಯವನ್ನು ಖಂಡಿಸಿದರು. ಭಾರತದಲ್ಲಿ 42ಸೈನಿಕರು ಹುತಾತ್ಮರಾಗಿದ್ದಾರೆ. ಇದರಲ್ಲಿ ರಾಜ್ಯದ ಮಂಡ್ಯ ಜಿಲ್ಲೆಯ ಗುಡಿಗೇರಿ ಗ್ರಾಮದ ವೀರಯೋಧ ಎಚ್.ಗುರು ಸಹ
ಒಬ್ಬರಾಗಿದ್ದಾರೆ. ಹುತಾತ್ಮರಾದ ವೀರ ಸೈನಿಕರ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ ಎಂದರು.
ಸಂಘದ ಕಾರ್ಯದರ್ಶಿ ಟಿ. ಚೋರನೂರು ಕೊಟ್ರಪ್ಪ, ಸದಸ್ಯ ಕೆ.ಎಂ.ಮಹೇಶ್ವರಸ್ವಾಮಿ ಮಾತನಾಡಿದರು. ಕೋಶಾಧಿ ಕಾರಿ ಕೋಳೂರು ಮಲ್ಲಿಕಾರ್ಜುನಗೌಡ, ಸದಸ್ಯರಾದ ಟಿ.ವಿರೂಪಾಕ್ಷಗೌಡ, ಡಾ.ಸೋಮೇಶ್ವರ ಫಕೀರಪ್ಪ ಗಡ್ಡಿ, ಎಂ.ಶರಣಬಸವನಗೌಡ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಅಂಗಡಿ ಶಶಿಕಲ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಿ.ಮಲ್ಲಿಕಾರ್ಜುನ, ಎನ್‌ಎಸ್‌ಎಸ್ ಅಧಿಕಾರಿ ಸೋಮಶೇಖರ್ ಇತರರಿದ್ದರು.
ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್: ಉಗ್ರರ ದಾಳಿಯಿಂದ ಹುತಾತ್ಮರಾಗಿರುವ ಸಿ.ಆರ್.ಪಿ.ಎಫ್ ಯೋಧರ ಆತ್ಮಕ್ಕೆ ಶಾಂತಿ ಕೋರಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಆ್ಯಂಡ್ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲೆಯ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್, ಪ್ರಾಚಾರ್ಯ ಜೆ.ಅನಿಲ ಕುಮಾರ ಇತರರಿದ್ದರು.
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ: ಕಾಶ್ಮೀರದ ಪುಲ್ವಾಮ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಸುಮಾರು 42ಜನ ಭಾರತೀಯ ಸೈನಿಕರಿಗೆ ನಗರದ ಈ.ಕ.ರ.ಸಾ.ಸಂಸ್ಥೆ ಮಜ್ದೂರ್ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಎಸ್ಪಿ ವೃತ್ತದಲ್ಲಿ ಸಂಘದ ಪದಾಧಿಕಾರಿಗಳು ಸೇರಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ಆಚರಿಸಲಾಯಿತು. ಸಂಘದ ಅಧ್ಯಕ್ಷ ಆರ್.ವೀರಭದ್ರಪ್ಪ, ಮುಖಂಡರಾದ ವಿಜಯಕುಮಾರ್, ಬಿ.ಸೋಮಶೇಖರ್, ಭೀಮರಾವ್ ಸೇರಿ ಇತರರಿದ್ದರು.