Advertisement
“ಭಾರತೀಯ ಕ್ರಿಕೆಟಿಗರ ಮೊದಲ ತಂಡ ಶುಕ್ರವಾರ ಚೆನ್ನೈಗೆ ಆಗಮಿಸಿದೆ. ಉಳಿದ ಆಟಗಾರರು ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಆಗಮಿಸಲಿದ್ದಾರೆ’ ಎಂಬುದಾಗಿ ತಮಿಳುನಾಡು ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇವರಲ್ಲಿ ದೀಪಕ್ ಚಹರ್ ಕಳೆದ ಡಿಸೆಂಬರ್‌ನಿಂದ ಯಾವುದೇ ಕ್ರಿಕೆಟ್ ಪಂದ್ಯವಾಡಿಲ್ಲ. ಫಿಟ್‌ನೆಸ್ ಸಮಸ್ಯೆ ಹಾಗೂ ತಂದೆಯ ತೀವ್ರ ಅನಾರೋಗ್ಯದ ಕಾರಣ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಿಂದ ನಡುವಲ್ಲೇ ಹಿಂದೆ ಸರಿದರು. ದಕ್ಷಿಣ ಆಫ್ರಿಕಾ ಪ್ರವಾಸದಿಂದಲೂ ದೂರ ಉಳಿದರು. ಬಳಿಕ ಬೆಂಗಳೂರಿನ ಎನ್‌ಸಿಎಗೆ ತೆರಳಿ ಫಿಟ್‌ನೆಸ್ ಸಾಬೀತುಪಡಿಸಿದರು. ಇನ್ನೀಗ ಐಪಿಎಲ್ ಆಡಿ ಟಿ20 ವಿಶ್ವಕಪ್ ತಂಡಕ್ಕೆ ಮರಳುವುದು ದೀಪಕ್ ಚಹರ್ ಗುರಿ ಆಗಿದೆ. ಅವರು ಶನಿವಾರವೇ ಅಭ್ಯಾಸಕ್ಕೆ ಇಳಿದರು. ಚೆನ್ನೈ ಮತ್ತು ಆರ್‌ಸಿಬಿ ಮಾ. 22ರ ಉದ್ಘಾಟನ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.