Advertisement

ಉದ್ಯಾವರ ಶಂಭುಕಲ್ಲು ಹಸಿರು ಹೊರೆ ಕಾಣಿಕೆ ಸಮರ್ಪಣೆ

11:05 AM Apr 16, 2018 | Team Udayavani |

ಕಟಪಾಡಿ: ಉಡುಪಿ ಜಿಲ್ಲೆಯ ಉದ್ಯಾವರ ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ಗಣಪತಿ ಮಹಾಕಾಳಿ ಪಂಜುರ್ಲಿ ದೇವಸ್ಥಾನದ ಅಷ್ಟಬಂಧ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ರಥೋತ್ಸವಕ್ಕೆ ಪೂರ್ವಭಾವಿಯಾಗಿ ಹಸಿರು ಹೊರೆ ಕಾಣಿಕೆ ಮೆರವಣಿಗೆ ರವಿವಾರ ನಡೆಯಿತು.

Advertisement

ಉದ್ಯಾವರ ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಿಂದ ಹೊರಟ ಹೊರೆಕಾಣಿಕೆಯ ವೈಭವದ ಶೋಭಾಯತ್ರೆಗೆ ವೇ|ಮೂ| ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ ಚಾಲನೆ ನೀಡಿದರು. ಮೆರವಣಿಗೆಯು ಉದ್ಯಾವರ ಶಾಂತಿನಗರ – ಮಠದಂಗಡಿ ಪೇಟೆ ಮಾರ್ಗವಾಗಿ ದೇವಸ್ಥಾನಕ್ಕೆ ಸಾಗಿ ಬಂತು.

ಪ್ರಧಾನ ಅರ್ಚಕ ಶ್ರೀನಿವಾಸ ಮೂರ್ತಿ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಉಡುಪಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಠೇಲರ ಮನೆ ಉಲ್ಲಾಸ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಣಪತಿ ಕಾರಂತ, ಜತೆ ಕಾರ್ಯದರ್ಶಿ ಯು.ಆರ್‌. ಚಂದ್ರಶೇಖರ್‌, ಕಾರ್ಯದರ್ಶಿಗಳಾದ ವಿನೋದ್‌ ಭಟ್‌, ಮಿಥೇಶ್‌ ಸುವರ್ಣ, ಪ್ರಚಾರ ಸಮಿತಿ ಸಂಚಾಲಕ ಎಚ್‌. ರತ್ನಾಕರ ಆಚಾರ್ಯ, ಆರ್ಥಿಕ ಸಮಿತಿ ಸಂಚಾಲಕರಾದ ಜಿತೇಂದ್ರ ಶೆಟ್ಟಿ, ಗಿರೀಶ್‌ ಕುಮಾರ್‌, ಸ್ವಾಗತ ಸಮಿತಿ ಸಂಚಾಲಕ ಸಂತೋಷ್‌ ಕುಮಾರ್‌, ಪ್ರಮುಖರಾದ ಜಯಕರ ಶೆಟ್ಟಿ ಇಂದ್ರಾಳಿ, ಗೋಪಾಲ ದೇವಾಡಿಗ ಶಂಭುಕಲ್ಲು, ಪಠೇಲರ ಮನೆ ಯತಿರಾಜ್‌ ಶೆಟ್ಟಿ, ಪ್ರತಾಪ್‌ ಕುಮಾರ್‌, ರಾಮಮೂರ್ತಿ ಭಟ್‌, ಸತೀಶ್‌ ಭಟ್‌, ಕೃಷ್ಣ ಎನ್‌. ಆಚಾರ್ಯ, ಶೇಖರ ಕೆ. ಕೋಟ್ಯಾನ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next