Advertisement
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಾತ್ವಿಕ-ಧಾರ್ಮಿಕ-ಸಾಂಸ್ಕೃತಿಕ- ಸಾಹಿತ್ಯಿಕ ಕಲಾಸಂಘವನ್ನು ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಸಾಹಿತಿ ಗೋಪಾಲಕೃಷ್ಣ ಭಟ್ ಗೋಳಿತ್ತಡ್ಕ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ “ಆಚರಣೆಗಳಲ್ಲಿ ಭಜನಾ ಸಂಸ್ಕೃತಿ’ ವಿಷಯದ ಬಗ್ಗೆ ಖ್ಯಾತ ಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆ ಅವರು ವಿಶೇಷ ಉಪನ್ಯಾಸ ನೀಡಿದರು. ರಾಜಸ, ತಾಮಸ ಹಾಗೂ ಸಾತ್ವಿಕ ಗುಣಗಳು ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತವೆೆ. ಆದರೆ ರಾಜಸ ಮತ್ತು ತಾಮಸ ಪ್ರವೃತ್ತಿಗಳೇ ಇಂದು ಅಧಿಕಗೊಂಡಿದ್ದು, ಸಾತ್ವಿಕತೆಯ ಕೊರತೆಯಿಂದ ಗೊಂದಲಗಳು ಸೃಷ್ಟಿ ಯಾಗಿವೆ ಎಂದು ತಿಳಿಸಿದರು. ಜೀವ ನದ ಸಾರ್ಥಕ್ಯವು ಶರಣಾಗತಿಯಲ್ಲಿ ನಿಕ್ಷಿಪ್ತವಾಗಿದ್ದು, ಅಂತಹ ಮನೋಸ್ಥಿತಿ ಕುಂಠಿತಗೊಂಡಿದೆ. ಹೊಸ ತಲೆಮಾರಿನಲ್ಲಿ ಎಲ್ಲಾ ಅರಿವಿನ ವಿಸ್ತಾರತೆ ಇದೆ. ಆದರೆ ದೇವರ ಸಾಮೀಪ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಕಳಕಳಿ ವ್ಯಕ್ತಪಡಿಸಿದ ಅವರು, ಸಾಂಪ್ರದಾಯಿಕ ಶೈಲಿಯ ಜೀವನ ಕ್ರಮ, ಆಚಾರ ಅನುಷ್ಠಾನಗಳನ್ನು ಅನುಸರಿಸುವುದರಿಂದ ನೆಮ್ಮದಿ ಪ್ರಾಪ್ತವಾಗುವುದೆಂದು ತಿಳಿಸಿದರು.
Related Articles
ಧಾರ್ಮಿಕತೆ ಮತ್ತು ಸಾಹಿತ್ಯ ವಿಷಯದ ಬಗ್ಗೆ ಲೇಖಕಿ, ಕವಯಿತ್ರಿ ಅಕ್ಷತಾರಾಜ್ ಪೆರ್ಲ ಉಪನ್ಯಾಸ ನೀಡಿ, ಧರ್ಮಯುತವಾದ ಅಂತರಂಗದಿಂದ ಹುಟ್ಟುವ ಭಾವನೆಗಳು ಅಕ್ಷರ ರೂಪದಲ್ಲಿ ಜನರನ್ನು ಎಚ್ಚರಿಸಬೇಕು. ಸ್ವಪ್ರಶಂಸೆಯಿಂದ ದೂರ ಉಳಿದು ಬರೆಯುವ ಬರಹಗಾರ ಗೆಲ್ಲುತ್ತಾನೆ ಎಂದು ತಿಳಿಸಿದರು.
ತೇಜಸ್ ರೈ ಬಜಕೂಡ್ಲು ಪ್ರಾಸ್ತಾವಿಕ ವಾಗಿ ಮಾತನಾಡಿ, ಸ್ವಾಗತಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಮಣಿರಾಜ್ ವಾಂತಿ ಚ್ಚಾಲ್ ಸಂಯೋಜಿಸಿ ದರು. ಬಳಿಕ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹಿರಿಯ, ಯುವ ಹಾಗೂ ಉದಯೋನ್ಮುಖ ಕವಿ- ಕವಯತ್ರಿಗಳಿಂದ ಕವಿಗೋಷ್ಠಿ ನಡೆಯಿತು. ಹಿರಿಯ ಸಾಹಿತಿ ಡಾ| ಸುರೇಶ್ ನೆಗಳಗುಳಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯನ್ನು ಸಾಹಿತಿ ಡಾ| ಎಸ್.ಎನ್.ಭಟ್ ಪೆರ್ಲ ಉದ್ಘಾಟಿಸಿದರು.
Advertisement
ಪರಂಪರೆ ಉಳಿಸಿಯಕ್ಷಗಾನದಲ್ಲಿ ಆಧುನಿಕ ಪ್ರಭಾವ ವಿಷಯದ ಬಗ್ಗೆ ಹಿರಿಯ ಯಕ್ಷಗಾನ ಕಲಾವಿದ ಅಪ್ಪಕುಂಞಿn ಮಣಿಯಾಣಿ ಅವರು ಮಾತನಾಡಿ ಮನಸ್ಸನ್ನು ರಂಜಿಸುವ ಸಾಹಿತ್ಯ ಗಳ ಕೊರತೆ ಇಂದಿದೆ. ಸಾಂಪ್ರದಾ ಯಿಕತೆಯನ್ನು ಮರೆತು ವೈಯಕ್ತಿಕ ವ್ಯಕ್ತಿತ್ವವನ್ನು ಪ್ರಚಾರಪಡಿಸುವ ಗೀಳಿಗೊಳಗಾಗಿ ಕಲಾವಿದರು ಸಹಿತ ಜನ ಸಾಮಾನ್ಯರು ಸಂಸ್ಕೃತಿ, ಪರಂಪರೆಯನ್ನು ಮರೆಯುತ್ತಿದ್ದಾರೆ. ಪರಂಪರೆಯನ್ನು ಉಳಿಸಿ ಬೆಳೆಸು ವಲ್ಲಿ ಆಸಕ್ತರಾಗಬೇಕು ಎಂದರು.