Advertisement
ಸಚಿವ ಈಶ್ವರ ಖಂಡ್ರೆ ಅವರು ಈ ಹಿಂದೆ ಸಂಘ ಪ್ರತಿಭಟನೆಗೆ ಮುಂದಾದಾಗ ಕಬ್ಬಿಗೆ 2000 ರೂ. ಮುಂಗಡವಾಗಿ ಕೊಡಿಸುವ ವಾಗ್ಧಾನ ಮಾಡಿದ್ದರು. ಆದರೆ, ಈವರೆಗೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸಿ ಎರಡು ತಿಂಗಳಾದರೂ ಹಣ ಪಾವತಿಯಾಗಿಲ್ಲ. ಹಾಗಾಗಿ ಈ ಹೋರಾಟ ನಡೆಸಲು ನಿರ್ಣಯಿಸಲಾಯಿತು.ಬಿಎಸ್‌ಎಸ್‌ಕೆ ಕಾರ್ಖಾನೆಗೆ ಬ್ಯಾಂಕ್ ಸಾಲ ತಕ್ಷಣ ಕೊಡಬೇಕು. ಕೆಲವು ರೈತರಿಗೆ ಎಂಟಿ ಸಾಲದ ಬಡ್ಡಿ ಮನ್ನಾ ಲಾಭ ಸಿಕ್ಕಿಲ್ಲ. ಅತಿವೃಷ್ಟಿ- ಅನಾವೃಷ್ಟಿ ಹಿನ್ನೆಲೆಯಲ್ಲಿ ರೈತರಿಗೆ ಸಾಲ ಪಾವತಿಸಲು ಸಾಧ್ಯವಾಗಿಲ್ಲ. ಹಾಗಾಗಿ ಅಸಲು ಕಟ್ಟಿದ ಬಡ್ಡಿ ಮನ್ನಾ ಅವಧಿಯನ್ನು ಮಾರ್ಚ್ ವರೆಗೆ ಮುಂದೂಡಿ ರೈತರಿಗೆ ನೆರವಾಗಬೇಕು. ರೈತರಿಗೆ ಹೊಸ ಸಾಲ ತಕ್ಷಣ ಕೊಡಿಸಬೇಕು ಎಂದು ಆಗ್ರಹಿಸಲಾಯಿತು.
ಶೋಭಾದೇವಿ ಕಾರಬಾರಿ, ಶಾಂತಮ್ಮ, ಶ್ರೀಮಂತ ಬಿರಾದಾರ, ವಿಠಲರೆಡ್ಡಿ, ಖಾಸೀಮ್ ಅಲಿ, ಬಾಬುರಾವ್ ಜೋಳದಾಪಕಾ, ಶಿವಾನಂದ ಹುಡಗಿ, ಶಂಕ್ರೆಪ್ಪ ಪಾರಾ, ಶಿವಶೆಟ್ಟಿ ಚೆಲುವಾ, ಅಮೃತಪ್ಪ, ಪ್ರಕಾಶ ಅಲ್ಮಾಜೆ, ಭವರಾವ್ ಪಾಟೀಲ, ಪ್ರವೀಣ ಕುಲಕರ್ಣಿ, ಶಿವಕಾಂತ ನಾಗೂರ, ಮೋಹನರಾವ್ ಮರಖಲ್, ಸಿದ್ರಾಮ ಬಾಲಕುಂದ, ಶಾಮಣ್ಣ ಬಾವಗಿ, ಶಿವಾನಂದ ಹುಡಗೆ ಹಾಜರಿದ್ದರು.