Advertisement

500 ಮಳಿಗೆ ಸ್ಥಾಪನೆಗೆ ನಿರ್ಧಾರ

06:00 AM Nov 28, 2018 | |

ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿರುವ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಒಟ್ಟು 500 ಪುಸ್ತಕ ಹಾಗೂ ವಸ್ತು ಪ್ರದರ್ಶನ-ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

Advertisement

ಈ ಮಳಿಗೆಗಳ ವಿಸ್ತೀರ್ಣ 10/10 ಅಡಿ ಇದ್ದು, ಒಂದು ಮಳಿಗೆಗೆ 2,500 ರೂ.ನಂತೆ ಬಾಡಿಗೆ ವಿ ಧಿಸಲಾಗಿದೆ. ಈ ಹಣವನ್ನು ಡಿಡಿ ಮುಖಾಂತರ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಹೆಸರಿನಲ್ಲಿ ಪಡೆದು ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ
ಪರಿಷತ್‌, ಸಾಹಿತ್ಯ ಭವನ, ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣ ಹತ್ತಿರ ಧಾರವಾಡ-580001 ಅಥವಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್‌ ಚಾಮರಾಜ  ಪೇಟೆ, ಪಂಪ ಮಹಾಕವಿ ರಸ್ತೆ, ಬೆಂಗಳೂರು-  560018 ಅವರಿಗೆ ಕಳುಹಿಸಿ ಕೊಡಬೇಕು. ಡಿಡಿ ಸಲ್ಲಿಸಿದ ದಿನಾಂಕಕ್ಕೆ ರಸೀದಿ ಪಡೆದ ಆಧಾರ ಮೇಲೆ ಮೊದಲು ಬಂದವರಿಗೆ ಮೊದಲ ಅದ್ಯತೆ ಮೇಲೆ ಮಳಿಗೆ ಹಂಚಿಕೆ ಮಾಡಲಾಗುವುದು.
ಹಾಗೂ ಈ ಹಂಚಿಕೆ ಸಮಿತಿಯ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ. ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ಮಳಿಗೆದಾರರು ಫ್ಲೆಕ್ಸ್‌ನಿಂದ ತಯಾರಿಸಿದ ಬ್ಯಾನರ್‌ಗಳ ಬದಲಾಗಿ ಅರಿವೆಯಿಂದ ತಯಾರಿಸಿದ ಬ್ಯಾನರ್‌ಗಳನ್ನು ಉಪಯೋಗಿ ಸುವುದು ಕಡ್ಡಾಯ.

ಪ್ಲಾಸ್ಟಿಕ್‌ ಉಪಯೋಗ ಸಂಪೂರ್ಣ ನಿಷೇಧಿಸಿದೆ. ಆಸಕ್ತಿಯುಳ್ಳ ಪ್ರದರ್ಶನಕಾರರು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್‌ ಕಚೇರಿ, ಧಾರವಾಡ 0836-2448721, ಹಾಗೂ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು ದೂ: 080-  26612991, 080-26623584 ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next