ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಜನ್ಮದಿನದಂದೇ ಅಂದರೆ ಡಿ.9ರಂದೇ ತೆಲಂಗಾಣದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರದ ಮೊದಲ ಸಂಪುಟ ಸಭೆ ನಡೆಯಲಿದೆ. ಅಂದೇ ಎಲ್ಲ ಗ್ಯಾರಂ ಟಿಗಳ ಅನು ಷ್ಠಾನದ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೀಗೆಂದು ಕಾಂಗ್ರೆಸ್‌ನ ಹಿರಿಯ ನಾಯಕ, ಕರ್ನಾಟಕ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿ ದ್ದಾರೆ. “ನ್ಯೂಸ್18′ ಇಂಗ್ಲಿಷ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತ ನಾಡಿದ ಅವರು, ಪ್ರಸಕ್ತ ಚುನಾ ವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದಲ್ಲಿಯೂ ಕರ್ನಾಟಕ ಮಾದರಿಯಂತೆ ನೀಡಲಾ ಗಿರುವ ಗ್ಯಾರಂಟಿಗಳು ಜನರ ಮನಸ್ಸು ಸೆಳೆದು ಮತವಾಗಿ ಪರಿವರ್ತನೆಯಾಗಲಿದೆ ಎಂದಿದ್ದಾರೆ.
ಸರಕಾರದ ನಿರ್ಧಾರ: ತಮ್ಮ ವಿರುದ್ಧದ ಸಿಬಿಐಗೆ ತನಿಖೆ ನಡೆಸಲು ನೀಡಿದ್ದ ಅನುಮತಿ ವಾಪಸ್ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿ ಅವರು “ನಾನು ಸಂಪುಟ ಸಭೆಯಲ್ಲಿ ಇರಲಿಲ್ಲ. ನನ್ನ ವಿರುದ್ಧದ ಪ್ರಕರಣದಲ್ಲಿ ಅನೇಕ ದುರ್ಬಲ ಅಂಶಗಳಿವೆ. ಜತೆಗೆ ತನಿಖೆಗೆ ಅನುಮತಿ ನೀಡಿದ್ದ ವಿಚಾರವೇ ಸಮರ್ಥನೀಯವಲ್ಲ ಎಂದು ವಾದ ಮಂಡಿಸಿದ್ದೆ. ಹೀಗಾಗಿ ಸರಕಾರವೇ ಈ ಬಗ್ಗೆ ತೀರ್ಮಾನ ಕೈಗೊಂಡಿದೆ ಎಂದರು. ಸಾಮಾಜಿಕ, ಆರ್ಥಿಕ ಗಣತಿಯ ವರದಿಗಳ ಕೆಲವು ಅಂಶಗಳು ನಾಪತ್ತೆಯಾಗಿವೆ ಎಂಬ ಬಗ್ಗೆ ಮಾತಾಡಿ “ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಸ್ವೀಕರಿಸಿ ಜಾರಿಗೆ ತರಲು ಕಾಂಗ್ರೆಸ್ ಬದ್ಧ ವಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ನಡೆಸಬೇಕು ಎಂದಿದ್ದಾರೆ.