Advertisement
ಶಾಸಕ ಅಂಗಾರ ಅವರ ಉಪಸ್ಥಿತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ನಿರ್ವಹಣೆಗೆ ಸಂಬಂಧಿಸಿ ನ.ಪಂ. ಸಭಾಂಗಣದಲ್ಲಿ ನ. 4ರಂದು ಜನಪ್ರತಿನಿಧಿಗಳ, ಸಾರ್ವಜನಿಕರ, ಅಧಿಕಾರಿಗಳ ಸಭೆ ನಡೆದಿತ್ತು. ಇಲ್ಲಿ ಒಂದು ವಾರದೊಳಗೆ ಕಸ ವಿಲೇವಾರಿಗೆ ಸಂಬಂಧಿಸಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಸಭೆಯಲ್ಲಿ ಕಸ ಸಂಪೂರ್ಣ ವಿಲೇಗೆ ವಾರದೊಳಗೆ ಬರ್ನಿಂಗ್ ಮೆಶಿನ್ ಖರೀದಿಸುವುದು ಹಾಗೂ ನಗರ ಪಂಚಾಯತ್ ಶೆಡ್‌ನಲ್ಲಿ ಸಂಗ್ರಹಿಸಿರುವ ಕಸವನ್ನು ತತ್‌ಕ್ಷಣ ವಿಲೇ ಮಾಡಲು ನಿರ್ಣಯಿಸಲಾಗಿತು. ಆದರೆ ಒಂದು ವಾರ ಕಳೆದು, ಎರಡು ವಾರ ಆದರೂ ಕಸ ತೆರವು ಇನ್ನೂ ಆಗಿಲ್ಲ. ಕಸ ಕರಗಿಸಲು ಬರ್ನಿಂಗ್ ಯಂತ್ರವು ಖರೀದಿ ಆಗಿಲ್ಲ. ಹೀಗಾಗಿ ನಿರ್ಣಯ ಕರಗಿತೇ ಹೊರತು ಕಸ ಕರಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಡಿ.ಸಿ. ಸೂಚನೆಗೆ ಕ್ಯಾರೇ ಇಲ್ಲ!
ಈಗಾಗಲೇ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ನಗರ ಪಂಚಾಯತ್ ಆವರಣಕ್ಕೆ ಖುದ್ದು ಭೇಟಿ ನೀಡಿ, ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ಮೂರು ದಿನಗಳೊಳಗೆ ತೆರವಿಗೆ ಸೂಚಿಸಿದ್ದರು. ಅವರು ಸೂಚನೆ ನೀಡಿ ವಾರ ಕಳೆದಿದೆ. ನಗರ ಪಂಚಾಯತ್ ಆವರಣದ ಶೆಡ್‌ನಲ್ಲಿ ಈಗಲೂ ಕಸ ತುಂಬಿ ತುಳುಕುತ್ತಿದೆ.
Related Articles
ನ. 19ರಂದು ಜಿಲ್ಲಾಧಿಕಾರಿ ಅವರು ಮಂಗಳೂರಿನಲ್ಲಿ ಸಭೆ ಕರೆದಿದ್ದು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಆ ಸಭೆಯಲ್ಲಿ ಬರ್ನಿಂಗ್ ಯಂತ್ರ ಖರೀದಿ ಪ್ರಸ್ತಾವ ಇಡಲಾಗುವುದು. ಈಗ ಸಂಗ್ರಹವಾಗುತ್ತಿರುವ ತ್ಯಾಜ್ಯ ಸೆಗ್ರಿಗೇಷನ್ ಆಗುತ್ತಿದೆ. ಹಾಗಾಗಿ ಕಸ ಪ್ರಮಾಣ ಸ್ವಲ್ಪ ಕಡಿಮೆ ಆಗಿದೆ.
– ಮತ್ತಡಿ,
ಮುಖ್ಯಾಧಿಕಾರಿ,ನ.ಪಂ.,ಸುಳ್ಯ
Advertisement
ಪ್ರತಿಭಟನೆಗೂ ಸಿದ್ಧಸಭೆಯ ಬಳಿಕ ಕೈಗೊಂಡಿರುವ ನಿರ್ಣಯಗಳ ಅನುಷ್ಠಾನದ ಕುರಿತಂತೆ ಬಿಜೆಪಿ ಬೆಂಬಲಿತ ಎಲ್ಲ ಚುನಾಯಿತ ಸದಸ್ಯರುಗಳು ಮುಖ್ಯಾಧಿಕಾರಿ ಭೇಟಿ ಮಾಡಿ ಚರ್ಚಿಸಿದ್ದೇವೆ. ನಿರ್ಣಯಗಳು ಈ ತನಕ ಜಾರಿ ಆಗಿಲ್ಲ. ಸೆಗ್ರಿಗೇಷನ್ ಕೂಡ ಆಗುತ್ತಿಲ್ಲ. ಕೆಲ ತಾಂತ್ರಿಕ ಸಮಸ್ಯೆಗಳು ಇವೆ ಎನ್ನುವ ಉತ್ತರ ದೊರೆತಿದೆ. ಜಿಲ್ಲಾಧಿಕಾರಿ ಸಭೆ ಕರೆದಿದ್ದು, ಕೆಲ ಚುನಾಯಿತ ಸದಸ್ಯರು ಅದರಲ್ಲಿ ಪಾಲ್ಗೊಳ್ಳುತ್ತೇವೆ. ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆ ಕೂರಲು ಹಿಂಜರಿಯುವುದಿಲ್ಲ.
– ವಿನಯ ಕುಮಾರ್ ಕಂದಡ್ಕ,
ನ.ಪಂ.ಸದಸ್ಯರು