Advertisement

ರಾಜಧಾನಿ ನಿರ್ಮಾಣ ಆಯಾ ರಾಜ್ಯ ಸರ್ಕಾರದ ನಿರ್ಧಾರ : ಕೇಂದ್ರ

09:50 AM Feb 05, 2020 | sudhir |

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ನಿರ್ಮಿಸುವ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಟಿಡಿಪಿಯ ಜಯದೇವ್‌ ಗಲ್ಲಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌, “ರಾಜಧಾನಿಗಳ ಬಗ್ಗೆ ನಿರ್ಧರಿಸುವ ಅಧಿಕಾರ ಆಯಾ ರಾಜ್ಯಗಳಿಗೆ ಇರುತ್ತದೆ. ಕೇಂದ್ರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ’ ಎಂದಿದ್ದಾರೆ.

Advertisement

ಅಮರಾವತಿಯನ್ನು ರಾಜಧಾನಿಯನ್ನಾಗಿಸಲು ಸಾವಿರಾರು ರೈತರು ಕೃಷಿಭೂಮಿ ಬಿಟ್ಟುಕೊಟ್ಟಿದ್ದರು. ಸರ್ಕಾರ ಮತ್ತೆರಡು ರಾಜಧಾನಿಗಳನ್ನು ನಿರ್ಮಿಸಿದರೆ ಅವರಿಗೆ ನಷ್ಟವಾಗುತ್ತದೆ. ಹೀಗಾಗಿ ಕೇಂದ್ರ ರಾಜ್ಯ ಸರ್ಕಾರದ ನಡೆಗೆ ತಡೆಒಡ್ಡಬೇಕು ಎಂದು ಜಯದೇವ್‌ ಸಂಸತ್ತಿನಲ್ಲಿ ಮನವಿ ಮಾಡಿದ್ದರು.

ಕೇಂದ್ರ ಸರ್ಕಾರದ ಉತ್ತರದಿಂದಾಗಿ ಆಂಧ್ರಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರ ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next