Advertisement

ನಿರ್ಧಾರ ಬದಲಿಸಿದ ನವೋಮಿ ಒಸಾಕಾ

06:17 PM Aug 28, 2020 | mahesh |

ನ್ಯೂಯಾರ್ಕ್‌: ಕರಿಯರ ವಿರುದ್ಧ ನಡೆಯುತ್ತಿರುವ ದಬ್ಟಾಳಿಕೆ ಹಾಗೂ ಜನಾಂಗೀಯ ತಾರತಮ್ಯವನ್ನು ವಿರೋಧಿಸಿ ಪ್ರತಿಭಟಿಸಿದ್ದ ಜಪಾನಿನ ಕರಿಯ ಟೆನಿಸ್‌ ಆಟಗಾರ್ತಿ ನವೋಮಿ ಒಸಾಕಾ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. “ವೆಸ್ಟರ್ನ್ ಆ್ಯಂಡ್‌ ಸದರ್ನ್’ ಟೆನಿಸ್‌ ಕೂಟದ ಸೆಮಿಫೈನಲ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ.

Advertisement

22 ವರ್ಷದ, ಎರಡು ಗ್ರಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ನವೋಮಿ ಒಸಾಕಾ ಈ ಕೂಟದ ಸೆಮಿಫೈನಲ್‌ ಪ್ರವೇಶಿಸಿದ ಬಳಿಕ ಆಡದಿರಲು ನಿರ್ಧರಿಸಿದ್ದರು. ಇದೀಗ ತಮ್ಮ ನಿರ್ಧಾರವನ್ನು ಬದಲಿಸಿದ್ದು, ಕೂಟದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ಈ ನಡುವೆ ಎಲ್ಲ ಸೆಮಿಫೈನಲ್‌ ಪಂದ್ಯಗಳನ್ನು ಸಂಘಟಕರು ಶುಕ್ರವಾರ ರಾತ್ರಿಗೆ ಮುಂದೂಡಿದ್ದಾರೆ.

“ಜನಾಂಗೀಯ ನ್ಯಾಯಕ್ಕೆ ಬೆಂಬಲ ಸೂಚಿಸುವುದು, ಕರಿಯರ ಮೇಲೆ ಪೊಲೀಸ್‌ ಬಲಪ್ರಯೋಗವನ್ನು ವಿರೋಧಿಸುವುದು ನನ್ನ ಉದ್ದೇಶವಾಗಿತ್ತು. ಹೀಗಾಗಿ ಸೆಮಿಫೈನಲ್‌ ಆಡದಿರಲು ನಿರ್ಧರಿಸಿದ್ದೆ. ಆದರೀಗ ನಾನು ಕೂಟದಲ್ಲಿ ಮುಂದುವರಿಯುವ ತೀರ್ಮಾನಕ್ಕೆ ಬಂದಿದ್ದೇನೆ’ ಎಂಬುದಾಗಿ ಒಸಾಕಾ ಹೇಳಿದರು.

“ನನ್ನ ನಿರ್ಧಾರದ ಬಗ್ಗೆ ಮರು ತೀರ್ಮಾನ ತೆಗೆದುಕೊಳ್ಳುವ ಸಲುವಾಗಿ ಸಂಘಟಕರು ಎಲ್ಲ ಪಂದ್ಯಗಳನ್ನು ಒಂದು ದಿನ ಮುಂದೂಡಿದರು. ನಾನು ಅವರ ಕೋರಿಕೆಯನ್ನು ಮನ್ನಿಸಿದ್ದೇನೆ. ನನಗೆ ಬೆಂಬಲ ಸೂಚಿಸಿದ ಡಬ್ಲ್ಯುಟಿಎ ಮತ್ತು ಕೂಟದ ಆಯೋಜಕರಿಗೆ ಕೃತಜ್ಞತೆಗಳು’ ಎಂಬ ನವೋಮಿ ಒಸಾಕಾ ಹೇಳಿಕೆಯನ್ನು “ದಿ ಗಾರ್ಡಿಯನ್‌’ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next