Advertisement

ಇಳಿಕೆ ಆಗಲಿದೆ ಸಾಲದ ಬಡ್ಡಿ ದರ

12:30 AM Feb 08, 2019 | |

ಮುಂಬಯಿ/ಹೊಸದಿಲ್ಲಿ: ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ ಬಳಿಕ ಈಗ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಪರಾಮರ್ಶೆ ಯಲ್ಲೂ ಜನಸಾಮಾನ್ಯರಿಗೆ ಸಿಹಿಸುದ್ದಿ ಸಿಕ್ಕಿದೆ. 

Advertisement

ಆರ್‌ಬಿಐ ಗುರುವಾರ ನಡೆದ ಸಭೆಯಲ್ಲಿ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.25 ಕಡಿಮೆ ಮಾಡಿದೆ. ಹೀಗಾಗಿ ಗೃಹ, ವಾಹನ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದ್ದು, ಇಎಂಐ ಕೂಡ ಕಡಿಮೆಯಾಗುವ ಸಾಧ್ಯತೆಗಳಿವೆ. 

2017ರ ಆಗಸ್ಟ್‌ನಲ್ಲಿ ರೆಪೋ ದರ ಕಡಿತಗೊಳಿಸಿದ ಬಳಿಕ 17 ತಿಂಗಳ ನಂತರ ಮೊದಲ ಬಾರಿಗೆ ದರ ಇಳಿಕೆ ಘೋಷಿಸಲಾಗಿದೆ. ಏಪ್ರಿಲ್‌-ಮೇನಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆರ್‌ಬಿಐನ ಈ ಘೋಷಣೆ ಮಹತ್ವ ಪಡೆದಿದೆ.
 
ದಾಸ್‌ಗೆ ಮೊದಲ ಸಭೆ: ಶಕ್ತಿಕಾಂತ ದಾಸ್‌ ಆರ್‌ಬಿಐ ಗವರ್ನರ್‌ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಗುರುವಾರ ಮುಂಬಯಿನಲ್ಲಿ ನಡೆಯಿತು. ಅಚ್ಚರಿ ಎಂಬಂತೆ, ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಬಡ್ಡಿ ದರದ ಪ್ರಮಾಣವನ್ನು 0.25% ಇಳಿಕೆ ಮಾಡಲಾಯಿತು. ಅಂದರೆ ರೆಪೋ ದರ ಹಾಲಿ ಶೇ. 6.50ರಿಂದ ಶೇ. 6.25ಕ್ಕೆ ಇಳಿಕೆಯಾಗಿದೆ. ಜತೆಗೆ ಎಂಪಿಸಿ ಈ ಹಿಂದೆ ಹೊಂದಿದ್ದ “ಕಠಿಣ ನಿಲುವಿ’ನಿಂದ “ತಟಸ್ಥ’ಕ್ಕೆ ಬದಲು ಮಾಡಿಕೊಂಡಿದೆ.

ರೈತರಿಗೆ ಮತ್ತೂಂದು ಖುಷಿ ಸುದ್ದಿ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬ್ಯಾಂಕ್‌ಗಳಿಂದ ಭದ್ರತೆ ಇಲ್ಲದೆ ನೀಡುವ ಸಾಲದ ಪ್ರಮಾಣವನ್ನು ಹಾಲಿ 1 ಲಕ್ಷ ರೂ.ಗಳಿಂದ 1.6 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದರ ಜತೆಗೆ ಆಂತರಿಕ ಸಮೀಕ್ಷಾ ಸಮಿತಿ ರಚಿಸಲು ನಿರ್ಧರಿಸಲಾಗಿದ್ದು, ಅದರ ಮೂಲಕ ಕೃಷಿ ಸಾಲ ನೀಡಿಕೆ ಬಗ್ಗೆ ಸಹಮತದ ನಿಲುವು ಹೊಂದುವ ಬಗ್ಗೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. 

ಸೂಚ್ಯಂಕ ಇಳಿಕೆ: ಬಡ್ಡಿ ದರ ಇಳಿಕೆಯ ಘೋಷಣೆ ಹೊರ ಬೀಳುತ್ತಲೇ ಮುಂಬಯಿ ಷೇರುಪೇಟೆಯಲ್ಲಿ ವಹಿ ವಾಟು ಇಳಿಮುಖವಾಯಿತು. ಆರಂ ಭದ ಹಂತದಲ್ಲಿ 200 ಅಂಕಗಳ ಷ್ಟು ಹೆಚ್ಚಿದ್ದ ಬಾಂಬೆ ಷೇರು ಪೇಟೆ ಸೂಚ್ಯಂಕ ದಿನಾಂತ್ಯಕ್ಕೆ 36,917.09ರಲ್ಲಿ ಮುಕ್ತಾಯ ಗೊಂಡಿತು. ನಿಷ್ಟಿ ಸೂಚ್ಯಂಕ 11,069.40ರಲ್ಲಿ ಕೊನೆಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next