Advertisement

ರಾಜ್ಯದಲ್ಲಿ 16ಕ್ಕೇರಿದ ಸಾವಿನ ಸಂಖ್ಯೆ

12:50 AM Apr 20, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕುಪೀಡಿತರ ಸಂಖ್ಯೆಯ ಗತಿ ಇಳಿಮುಖವಾಗಿದ್ದು, ರವಿವಾರ ಒಟ್ಟು ಆರು ಹೊಸ ಪ್ರಕರಣಗಳು ಮಾತ್ರ ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕುಪೀಡಿತರ ಸಂಖ್ಯೆ 390ಕ್ಕೆ ಏರಿದೆ. ಆದರೆ ಬೆಂಗಳೂರಿನ 65 ವರ್ಷದ ವೃದ್ಧೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 16ಕ್ಕೆ ಏರಿದೆ.

Advertisement

ರವಿವಾರ ಮೈಸೂರಿನಲ್ಲಿ ನಾಲ್ವರಿಗೆ ಸೋಂಕು ದೃಢವಾಗಿದೆ. ಬೆಂಗಳೂರಿನಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಈ ಮಧ್ಯೆ ರವಿವಾರ 7 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಕಾರ್ಮಿಕರ ಅಂತಾರಾಜ್ಯ ಓಡಾಟವಿಲ್ಲ
ಲಾಕ್‌ಡೌನ್‌ ಸಡಿಲಿಕೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಕೂಲಿ ಕಾರ್ಮಿಕರ ಸಾಗಾಟದ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕಾರ್ಮಿಕರ ಕೌಶಲಕ್ಕೆ ತಕ್ಕುದಾದ ಕೆಲಸವನ್ನು ಆಯಾ ಜಿಲ್ಲಾಡಳಿತಗಳು ನೀಡಬೇಕು. ಅವರು ಹಿಂದೆ ಕೆಲಸ ಮಾಡುತ್ತಿದ್ದ ಜಿಲ್ಲೆಗೆ ತೆರಳಲು ಅಪೇಕ್ಷೆ ಪಟ್ಟರೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಆದರೆ ಅಂತಾರಾಜ್ಯ ಓಡಾಟಕ್ಕೆ ಅವಕಾಶವಿಲ್ಲ ಎಂದು ಹೇಳಿದೆ. ಇದರನ್ವಯ ರಾಜ್ಯದಲ್ಲಿಯೂ ಮಂಗಳವಾರದಿಂದ ಚಟು ವಟಿಕೆಗಳು ಆರಂಭವಾಗುವ ನಿರೀಕ್ಷೆಯಿದೆ.

ಕೋವಿಡ್ 19ದಿಂದ ಪಾರಾದ ಗೋವಾ
ಕೋವಿಡ್ 19 ಹೊಡೆತದಿಂದ ಗೋವಾ ಪಾರಾಗಿದೆ. ಅಲ್ಲಿ ದಾಖಲಾಗಿದ್ದ ಎಲ್ಲ 7 ಕೋವಿಡ್ 19 ಸೋಂಕುಪೀಡಿತರು ಸಂಪೂರ್ಣ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ ಎಂದು ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಘೋಷಿಸಿದ್ದಾರೆ. “ರಾಜ್ಯದಲ್ಲಿ ಒಟ್ಟು 7 ಕೋವಿಡ್ 19 ಪ್ರಕರಣಗಳು ಕಂಡುಬಂದಿದ್ದವು, ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡ ಲಾಗಿತ್ತು. ಈಗ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಹಾಗೆಂದು ದಿಗ್ಬಂಧನ ಹಿಂದೆಗೆದುಕೊಳ್ಳುವುದಿಲ್ಲ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಟ್ವಿಟರ್‌ನಲ್ಲಿ ರಾಣೆ ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ನಾಳೆ ಮಧ್ಯರಾತ್ರಿಯ ವರೆಗೆ ಸಡಿಲಿಕೆ ಇಲ್ಲ
ಕೋವಿಡ್ 19 ನಿಯಂತ್ರಣಕ್ಕೆ ಕೇಂದ್ರ ಸರಕಾರವು ಎ.14ರಂದು ಹೊರಡಿಸಿದ್ದ ಮಾರ್ಗಸೂಚಿಗಳನ್ನು ಎಪ್ರಿಲ್‌ 21ರ ಮಧ್ಯರಾತ್ರಿಯ ವರೆಗೂ ಮುಂದುವರಿಸಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಆದೇಶ ಹೊರಡಿಸಿ ದ್ದಾರೆ. ಹೀಗಾಗಿ ರಾಜ್ಯದಲ್ಲಿ ಸೋಮವಾರದಿಂದ ಲಾಕ್‌ಡೌನ್‌ ಸಡಿಲಿಕೆಯಾಗುವುದಿಲ್ಲ. ಮಂಗಳವಾರ ಮಧ್ಯರಾತ್ರಿಯ ವರೆಗೆ ಲಾಕ್‌ಡೌನ್‌ನ ಎಲ್ಲ ಮಾರ್ಗಸೂಚಿಗಳು ಮುಂದುವರಿಯಲಿವೆ.

Advertisement

ಕೋವಿಡ್ 19 ನಿಯಂತ್ರಣ ಕುರಿತು ಕೇಂದ್ರ ಗೃಹ ಇಲಾಖೆ ಎ. 14ರಂದು ಮಾರ್ಗಸೂಚಿ ಹೊರಡಿಸಿ ಮೇ 3ರ ವರೆಗೂ ಲಾಕ್‌ ಡೌನ್‌ ಜಾರಿಯಲ್ಲಿರುತ್ತದೆ ಎಂದು ಆದೇಶಿಸಿತ್ತು. ಜತೆಗೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಇಲಾಖೆ ಎ.15ರಂದು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿತ್ತು. ಆದರೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಅವರು ತನ್ನ ಅಧಿಕಾರವನ್ನು ಬಳಸಿ ಎ.14ರ ಆದೇಶ ಎ.21ರ ಮಧ್ಯರಾತ್ರಿಯ ವರೆಗೆ ಜಾರಿಯಲ್ಲಿ ಇರುವಂತೆ ನೋಡಿಕೊಳ್ಳಿ ಎಂದು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ಇತರ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next