Advertisement

ಮ್ಯಾನ್‌ಹೋಲ್‌ಗೆ ಇಳಿದಿದ್ದ ಇಬ್ಬರು ಕಾರ್ಮಿಕರ ಸಾವು

06:00 AM Aug 07, 2018 | |

ಶಿವಮೊಗ್ಗ: ಮ್ಯಾನ್‌ಹೋಲ್‌ ಸ್ವಚ್ಚತೆಗೆ ಇಳಿದಿದ್ದ ಕಾರ್ಮಿಕ ಉಸಿರುಗಟ್ಟಿ ಮೃತಪಟ್ಟಿದ್ದು, ಈತನನ್ನು ಮೇಲೆತ್ತಲು ಇಳಿದ ಮತ್ತೂಬ್ಬ ಕಾರ್ಮಿಕನೂ ಮೃತಪಟ್ಟ ಘಟನೆ ನಗರದ ನ್ಯೂಮಂಡ್ಲಿ ಬಳಿ ಸೋಮವಾರ ಸಂಭವಿಸಿದೆ. ಮ್ಯಾನ್‌ಹೋಲ್‌ ಸ್ವಚ್ಚತೆಗೆ ಕಾರ್ಮಿಕರನ್ನು ಬಳಸಬಾರದು ಎಂದು ಸುಪ್ರೀಂಕೋರ್ಟ್‌ ಆದೇಶವಿದ್ದರೂ ಇದನ್ನು ಪಾಲಿಸದಿರುವುದೇ ದುರಂತಕ್ಕೆ ಕಾರಣವಾಗಿದೆ.

Advertisement

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಬಿಳಿಚೋಡು ಹೋಬಳಿಯ ಬೆಂಜಿಕಟ್ಟೆ ಗ್ರಾಮದ ಅಂಜನಿ (17), ವೆಂಕಟೇಶ್‌ (37) ಮೃತರು.

ಶಿವಮೊಗ್ಗ ನಗರದ ಬೈಪಾಸ್‌ ಮತ್ತು ತೀರ್ಥಹಳ್ಳಿ ರಸ್ತೆಗೆ ಸೇರುವ ಜಾಗದ ಮ್ಯಾನ್‌ಹೋಲ್‌ಗ‌ಳ ಬಳಿ ಹಲವು ಕಾರ್ಮಿಕರು ಬೆಳಗ್ಗೆಯಿಂದ ಕೆಲಸ ಮಾಡುತ್ತಿದ್ದರು. ಮ್ಯಾನ್‌ಹೋಲ್‌ ಒಳಗೆ ಕೆಲಸ ಮಾಡುವಾಗಲೇ ಇವರಿಬ್ಬರೂ ಮೃತಪಟ್ಟಿದ್ದಾರೆ. ಇದು ಯಾರ ಗಮನಕ್ಕೂ ಬಂದಿಲ್ಲ. ಆದರೆ ಎಷ್ಟು ಹೊತ್ತಾದರೂ ಅಂಜನಿ ಮತ್ತು ವೆಂಕಟೇಶ ಬರದಿದ್ದನ್ನು ಗಮನಿಸಿದ ಉಳಿದ ಕಾರ್ಮಿಕರು ಸ್ಥಳಕ್ಕೆ ಹೋಗಿ ನೋಡಿದಾಗ ದುರ್ಘ‌ಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಮೇಲೆತ್ತಿದರು.

ನಗರದ 18 ವಾರ್ಡ್‌ಗಳಲ್ಲಿ ಹೊಸ ಯುಜಿಡಿ ಸಂಪರ್ಕ ಕೊಡುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 18 ಬಡಾವಣೆಗಳಲ್ಲಿ ಪೂರ್ಣಗೊಂಡಿದೆ. ಕೆಲ ಬಡಾವಣೆಗಳಲ್ಲಿ ಕಾಮಗಾರಿ ಪೂರ್ಣಗೊಂಡು 6 ತಿಂಗಳಿಂದ ವರ್ಷವಾಗಿದೆ. ಬಹಳಷ್ಟು ಕಡೆ ಒಳಚರಂಡಿಯಲ್ಲಿ ಕಸ ಮತ್ತು ನೀರು ತುಂಬಿಕೊಂಡಿದ್ದರಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಮುನ್ನ ಸ್ವಚ್ಚಗೊಳಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಈ ಗುತ್ತಿಗೆಯನ್ನು ವೆಂಕಟಸಾಯಿ ಅಸೋಸಿಯೇಟ್ಸ್‌ಗೆ ನೀಡಲಾಗಿತ್ತು. ಗುತ್ತಿಗೆದಾರರು ಬೇರೆ ಜಿಲ್ಲೆಗಳಿಂದ ಕಾರ್ಮಿಕರನ್ನು ಕರೆ ತಂದು ಕೆಲಸ ಮಾಡಿಸುತ್ತಿದ್ದರು.

ಗಾರೆ ಕೆಲಸದವರು: ಮ್ಯಾನ್‌ಹೋಲ್‌ ಸ್ವಚ್ಚತೆಯಲ್ಲಿ ತೊಡಗಿದ್ದ ಎಲ್ಲರೂ ಗಾರೆ ಕೆಲಸದವರಾಗಿದ್ದು, ಯಾರೂ ಕೂಡ ಪೌರ ಕಾರ್ಮಿಕರಲ್ಲ. ಮ್ಯಾನ್‌ಹೋಲ್‌ ಬಗ್ಗೆ ಯಾವುದೇ ಕಲ್ಪನೆ ಇಲ್ಲದೆ ಇರುವುದರಿಂದ ಯಾವ ರೀತಿ ಮುಂಜಾಗ್ರತೆ ವಹಿಸಬೇಕೆಂಬುದೂ ಇವರಿಗೆ ತಿಳಿದಿರಲಿಲ್ಲ.

Advertisement

ಉಸಿರುಗಟ್ಟಿ ಸಾವು: ದುರಂತ ಸಂಭವಿಸಿದ ಮ್ಯಾನ್‌ಹೋಲ್‌ 20 ಅಡಿಗೂ ಹೆಚ್ಚು ಆಳವಿದೆ. ಮೊದಲಿಗೆ ಅಂಜನಿ, ಕಸ ಕಟ್ಟಿದೆಯೇ ಎಂಬುದನ್ನು ನೋಡಲು ಮ್ಯಾನಹೋಲ್‌ನಲ್ಲಿ ಇಳಿದಿದ್ದು ಉಸಿರುಗಟ್ಟಿ ಕೆಳಗೆ ಜಾರಿದ್ದಾನೆ. ಇದನ್ನು ಗಮನಿಸುತ್ತಿದ್ದ ವೆಂಕಟೇಶ್‌ ಕೂಡ ಅಂಜನಿಯನ್ನು ರಕ್ಷಿಸಲು ಕೆಳಗೆ ಇಳಿದಿದ್ದಾನೆ. ಇಬ್ಬರೂ ಉಸಿರುಗಟ್ಟಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಪ್ರತಿಭಟನೆ: ಘಟನೆಯಿಂದ ಆಘಾತಗೊಂಡ ಇತರ ಕಾರ್ಮಿಕರು ಮೃತರ ಕುಟುಂಬಕ್ಕೆ ನ್ಯಾಯ, ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು. ಜಿಲ್ಲಾ ಧಿಕಾರಿ, ಶಾಸಕರು, ಗುತ್ತಿಗೆದಾರ ಬರುವವರೆಗೂ ಮೃತದೇಹ ಎತ್ತಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರು ಪ್ರತಿಭಟಕಾರರು ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಶಾಸಕ ಈಶ್ವರಪ್ಪ ಆಗಮಿಸಿ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಒಳಚರಂಡಿ ಸ್ವಚ್ಚತೆಯಲ್ಲಿ ಅನುಭವ ಇಲ್ಲದ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಂಡಿರುವುದು, ಬಾಲ ಕಾರ್ಮಿಕನಿಂದ ಕೆಲಸ ಮಾಡಿಸಿಕೊಂಡಿರುವುದು ಕಾನೂನು ಬಾಹಿರ. ಇದರ ಬಗ್ಗೆ ಸಂಬಂ ಧಿಸಿದ ಅ ಧಿಕಾರಿಗಳು ಮತ್ತು ಸಚಿವರೊಂದಿಗೆ ಮಾತನಾಡಿ ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೋರಲಾಗುವುದು.
– ಕೆ.ಎಸ್‌. ಈಶ್ವರಪ್ಪ, ಶಾಸಕ, ಶಿವಮೊಗ್ಗ.

Advertisement

Udayavani is now on Telegram. Click here to join our channel and stay updated with the latest news.

Next