Advertisement

ಮೂರು ಹುಲಿಗಳ ಸಾವು

12:38 AM Aug 01, 2019 | mahesh |

ಉಮಾರಿಯಾ: ದೇಶದಲ್ಲಿ ಅತ್ಯಂತ ಹೆಚ್ಚು ಹುಲಿಗಳು ಇರುವ ರಾಜ್ಯ ಎಂದು ಮಧ್ಯಪ್ರದೇಶ 2 ದಿನಗಳ ಹಿಂದಷ್ಟೇ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದರ ಬೆನ್ನಲ್ಲಿಯೇ ಮೂರು ಹುಲಿಗಳು ಅಸುನೀಗಿದ ಬಗ್ಗೆ ವರದಿಯಾಗಿದೆ. ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ವ್ಯಾಪ್ತಿಯ ಅರಣ್ಯದಲ್ಲಿ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಹುಲಿಗಳು ಕಚ್ಚಾಡಿಕೊಂಡು ಅಸುನೀಗಿರುವ ಸಾಧ್ಯತೆ ಇದೆ. ಭಾನುವಾರ ಮತ್ತು ಸೋಮವಾರ ಭುವನಗೃಹ ಹುಲಿ ಅಭಯಾರಣ್ಯದಲ್ಲಿ 2 ಹುಲಿಗಳ ಕಳೇಬರ ಪತ್ತೆಯಾಗಿದೆ. ಬರೋಬ್ಬರಿ ಸೋಮವಾರ ಬಿಡುಗಡೆಯಾಗಿದ್ದ ಹುಲಿ ಗಣತಿಯಲ್ಲಿ ಮಧ್ಯಪ್ರದೇಶಕ್ಕೆ ಮೊದಲ ಸ್ಥಾನ ಲಭಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next