Advertisement

ಕುಡಿದು ಕಾರು ಓಡಿಸಿದ ಕಾಂಗೋ ಪ್ರಜೆ ಸಾವು

11:12 AM Jan 15, 2018 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಅತೀ ವೇಗವಾಗಿ ಕಾರು ಚಾಲನೆ ಮಾಡಿ ಮನೆಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಚಾಲನೆ ಮಾಡುತ್ತಿದ್ದ ಆಫ್ರಿಕಾದ ಕಾಂಗೋ ದೇಶದ ಪ್ರಜೆ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಹೆಣ್ಣೂರು ಮುಖ್ಯರಸ್ತೆ ಗೆದ್ದಲಹಳ್ಳಿಯಲ್ಲಿ ಭಾನುವಾರ ನಸುಕಿನಲ್ಲಿ ಈ ಘಟನೆ ನಡೆದಿದೆ.

Advertisement

ಕಾಂಗೋ ದೇಶದ ಆಸ್ಮಿ ಬಾಲಿವೆಬ್‌ (24) ಮೃತನು. ಈತನ ಜತೆ ಕಾರಿನಲ್ಲಿದ್ದ ಕಾಂಗೋ ಪ್ರಜೆಗಳೇ ಆಗಿರುವ ಪಿಟ್ರೋಪಿ (27) ಮತ್ತು ಬ್ರೂನೋ (32) ಗಾಯಗೊಂಡಿದ್ದಾರೆ. ಮತ್ತೂಬ್ಬ ಗಾಯಾಳುವಿನ ಹೆಸರು ತಿಳಿದುಬಂದಿಲ್ಲ. ಮೂವರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಮಿ ಸೇರಿ ಈ ನಾಲ್ಕೂ ಮಂದಿ ಐದು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದು, ಕೊತ್ತನೂರು, ಗೆದ್ದಲಹಳ್ಳಿಯಲ್ಲಿ ವಾಸವಿದ್ದರು. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಶನಿವಾರ ತಡರಾತ್ರಿ 2 ಗಂಟೆವರೆಗೆ ಮದ್ಯ ಸೇವಿಸಿ ವೇಗವಾಗಿ ಕಾರು ಚಾಲನೆ ಮಾಡಿದ್ದು, ಚಾಲಕ ನಿಯಂ ತ್ರಣ ಕಳೆದುಕೊಂಡಿ ದ್ದರಿಂದ ಘಟನೆ ನಡೆದಿದೆ. ಎಂದು ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿದೇಶಿ ಪ್ರಜೆಗಳ ಹಾವಳಿ: ಈ ಭಾಗದಲ್ಲಿ ಉಗಾಂಡ, ಆಫ್ರೀಕಾ ಸೇರಿ ಇತರ ವಿದೇಶಿ ಪ್ರಜೆಗಳು ಹೆಚ್ಚಾಗಿ ನೆಲೆಸಿದ್ದಾರೆ. ವಿದ್ಯಾರ್ಥಿಗಳೂ ಒಳಗೊಂಡಂತೆ ಇವರಲ್ಲಿ ಬಹುತೇಕರು ಹಗಲು, ರಾತ್ರಿಯೆನ್ನದೆ ಸದಾ ಮದ್ಯದ ಅಮಲಲ್ಲಿ ಇರುತ್ತಾರೆ. ಮದ್ಯಪಾನ ಮಾಡಿದ ನಂತರ, ಅಮಲಿನಲ್ಲಿ ಬೈಕ್‌, ಕಾರುಗಳನ್ನು ಮನಬಂದಂತೆ ಚಾಲನೆ ಮಾಡಿ ಸಾಕಷ್ಟು ಬಾರಿ ಅಪಘಾತವೆಸಗಿ ದ್ದಾರೆ. ಇವರನ್ನು ಹಿಡಿದು ಪ್ರಶ್ನಿಸಿದರೆ, ಹಲ್ಲೆ ನಡೆಸಿದ್ದೇವೆ ಎಂದು ಪೊಲೀಸರಿಗೆ ದೂರು ನೀಡುವ ಮೂಲಕ ಬ್ಲಾಕ್‌ ಮೇಲ್‌ ಮಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅತಿ ವೇಗವಾಗಿ ಬಂದ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದ ಕೂಡಲೇ ದೊಡ್ಡ ಪ್ರಮಾಣದಲ್ಲಿ ಶಬ್ದವಾಗಿದೆ. ಸದ್ದು ಕೇಳಿ ಎಚ್ಚರಗೊಂಢ ಮನೆಯ ಸದಸ್ಯರು, ಮನೆಯಿಂದ ಆತಂಕದಲ್ಲೇ ಹೊರಬಂದಿದ್ದಾರೆ. ಅಷ್ಟರಲ್ಲಾಗಲೇ ಹಲವಾರು
ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು, ವಿದೇಶಿ ಯುವಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. 

ಕೂಡಲೆ ಸ್ಥಳೀಯರೇ ನಾಲ್ಕೂ ಮಂದಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಆಸ್ಮಿ ಮೃತನಾಗಿದ್ದು, ಉಳಿದ ಮೂವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

Advertisement

 ವೀಸಾ ಮಾನ್ಯತೆ ಪರಿಶೀಲನೆ: ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದ ಇವರ ವೀಸಾ ಅವಧಿ ಮುಕ್ತಾಯವಾಗಿದೆಯೇ? ಇಲ್ಲವೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಹಾಗೆಯೇ ಸಾಮಾನ್ಯವಾಗಿ ವಿದೇಶಿ ಪ್ರಜೆಗಳಿಗೆ ನೀಡುವ ಪಾಸ್‌ಪೋರ್ಟ್‌ನಲ್ಲಿ ಅವರ ಚಾಲನಾ ಪರವಾನಗಿ ವಿವರಗಳನ್ನು ನಮೂದಿಸಲಾಗುತ್ತದೆ. ಇದನ್ನು ಪರಿಶೀಲಿಸಿ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಗೆ ಚಾಲನಾ ಪರವಾನಗಿ ರದ್ದು ಮಾಡುವ ಕುರಿತು ಪತ್ರ ಬರೆಯಲಾಗುವುದು. ಪ್ರಸ್ತುತ ಅತೀಯಾಗಿ ಮದ್ಯ ಸೇವಿಸಿ ಕಾರು ಚಾಲನೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬಾಣಸವಾಡಿ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.’

ಗೋಡೆಯೇ ಪುಡಿ
ನಗರದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಈ ನಾಲ್ವರೂ ಬಾಣಸವಾಡಿಯ ಬಾರ್‌ ಮತ್ತು ರೆಸ್ಟೋರೆಂಟ್‌ ಒಂದರಲ್ಲಿ ಪಾರ್ಟಿ ಹೆಸರಿನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಬಳಿಕ ಮದ್ಯದ ಅಮಲಿನಲ್ಲೇ ಕಾರು ತೆಗೆದುಕೊಂಡ ಆಸ್ಮಿ, ಇತರ ಸ್ನೇಹಿತರನ್ನು ಹತ್ತಿಸಿಕೊಂಡು ಹೆಣ್ಣೂರು ಕಡೆ ಹೋಗಿದ್ದಾನೆ. ಮದ್ಯದ ಅಮಲಿನಲ್ಲಿ ಅತ್ಯಂತ ವೇಗವಾಗಿ ಚಾಲನೆ ಮಾಡುತ್ತಿದ್ದ ಆಸ್ಮಿ ಬಾಲಿವೆಬ್‌, ಹೆಣ್ಣೂರು ಮುಖ್ಯರಸ್ತೆಯ ಗೆದ್ದಲ ಹಳ್ಳಿ ಬಳಿ ವಾಹನದ ಮೇಲೆ ನಿಯಂತ್ರಣ ಕಳೆದು ಕೊಂಡು, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರವೂ ಅಮಲಿನಲ್ಲಿ ವೇಗ ಹೆಚ್ಚು ಮಾಡಿದ್ದರಿಂದ ಕಾರು ಏಕಾಏಕಿ ಎಡಕ್ಕೆ ತಿರುಗಿ, ಪಕ್ಕದಲ್ಲೇ ಇದ್ದ ಮನೆಯೊಂದರ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗೋಡೆಗೆ ಭಾರೀ ಹಾನಿಯಾಗಿ, ಕುಸಿದಿದೆ. ಹೊರಕ್ಕೆ ಅಳವಡಿಸಿದ್ದ ಕಬ್ಬಿಣದ ಮೆಟ್ಟಿಲು ಹತ್ತಾರು ಅಡಿ ದೂರ ಹೋಗಿ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next