ಜೌನ್‌ಪುರ: ಇದು ವಿಚಿತ್ರ ಅನಿಸಿದ್ರೂ ಸತ್ಯ. ಉತ್ತರ ಪ್ರದೇಶದ ಜೌನ್ಪುರದಲ್ಲಿ ದಿನ ಗೂಲಿ ಕಾರ್ಮಿಕನೊಬ್ಬ 30 ವರ್ಷಗಳಿಂದ ವಧುವಿ ನಂತೆ ಸಿಂಗಾರ ಮಾಡಿಕೊಂಡು ಜೀವನ ಕಳೆಯುತ್ತಿದ್ದಾನೆ.
ಸಾವಿನ ಭಯವೋ ಅಥವಾ ಮೂಢನಂಬಿಕೆಯೋ ತಿಳಿಯದು. ದಿನಗೂಲಿ ಕಾರ್ಮಿಕ ಚಿಂತಹರನ್ ಚೌಹಾಣ್ ಮಾತ್ರ 1989ರಿಂದ ಸೀರೆ, ದೊಡ್ಡ ಮೂಗುತಿ, ಬಳೆ ಮತ್ತು ಜುಮುಕಿ ತೊಡುತ್ತಿದ್ದಾರೆ. ಇದರಿಂದ ಅವರ ಮನೆಯಲ್ಲಿ ಸಂಭವಿಸುತ್ತಿದ್ದ ಸಾವಿನ ಸರಣಿ ನಿಂತು ಹೋಗಿದೆ ಯಂತೆ. ಅಷ್ಟೇ ಅಲ್ಲ ಅವರ ಮತ್ತು ಮಕ್ಕಳ ಆರೋಗ್ಯವೂ ಚೆನ್ನಾಗಿದೆಯಂತೆ!
14ನೇ ವರ್ಷಕ್ಕೆ ವಿವಾಹವಾಗಿದ್ದ ಜೌಹಾಣ್, ಕೆಲ ತಿಂಗಳಲ್ಲೇ ಪತ್ನಿಯನ್ನು ಕಳೆದುಕೊಂಡರು. ಅನಂತರ 21ನೇ ವಯಸ್ಸಿನಲ್ಲಿ ಪಶ್ಚಿಮ ಬಂಗಾಲಕ್ಕೆ ಬಂದು, ಅಂಗಡಿ ಮಾಲೀಕರ ಮಗಳನ್ನು ಮದುವೆಯಾ ಗಿದ್ದಾರೆ. ಇದಕ್ಕೆ ಮನೆಯವರು ಆಕ್ಷೇಪ ವ್ಯಕ್ತಪಡಿಸಿದಾಗ ಪತ್ನಿ ಯನ್ನು ಬಿಟ್ಟು, ತನ್ನ ಸ್ವಂತ ಊರಾದ ಜಲಾಲ್‌ಪುರ್‌ನ ಹೌಜ್‌ಖಾನ್‌ಗೆ ಬಂದಿದ್ದಾರೆ. ಇತ್ತ ಪತಿ ಬಿಟ್ಟಿರಲಾಗದೇ 2ನೇ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅನಂತರ, ಚೌಹಾಣ್ ಕುಟುಂಬವು ಅವರಿಗೆ 3ನೇ ಮದುವೆ ಮಾಡಿದೆ. ಇದಾದ ಕೆಲವು ತಿಂಗಳಲ್ಲೇ ಚೌಹಾಣ್ ಅನಾರೋಗ್ಯಕ್ಕೆ ತುತ್ತಾಗುವ ಮೂಲಕ ಸಾವಿನ ಸರಣಿ ಆರಂಭವಾಗಿದೆ. ಮೊದಲಿಗೆ ತಂದೆ, ಹಿರಿಯ ಸಹೋದರ ಮತ್ತು ಸಹೋದರನ ಪತ್ನಿ, ಅವರ ಇಬ್ಬರು ಗಂಡು ಮಕ್ಕಳು, ಕಿರಿಯ ಸಹೋದರ, ಅನಂತರ ಸಹೋದರರ ಮೂರು ಹೆಣ್ಣುಮಕ್ಕಳು ಮತ್ತು ನಾಲ್ಕು ಗಂಡು ಮಕ್ಕಳು ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಮೃತಪಟ್ಟಿದ್ದಾರೆ. ಇಂತಹ ಸಮಯದಲ್ಲಿ ಚೌಹಾಣ್ 2ನೇ ಪತ್ನಿ ಯನ್ನು ಪದೇ ಪದೇ ಕನಸಿನಲ್ಲಿ ನೋಡು ತ್ತಿದ್ದ ನಂತೆ. ಒಂದು ದಿನ ಕನಸಲ್ಲಿ ಬಂದ ಆಕೆ, “ವಧು ವಿನಂತೆ ಸಿಂಗಾರ ಮಾಡಿಕೊಂಡು ನನ್ನನ್ನು ನಿನ್ನೊಂದಿಗೆ ಇಟ್ಟುಕೋ’ ಎಂದು ಕೇಳಿಕೊಂಡ ಳಂತೆ. ಅದಕ್ಕೆ ಒಪ್ಪಿದ ಚೌಹಾಣ್, ಅಂದಿನಿಂದ ವಧುವಿನಂತೆ ಸಿಂಗಾರ ಮಾಡಿ ಕೊಳ್ಳಲು ಆರಂಭಿ ಸಿದ್ದು, ಈಗಲೂ ಅದನ್ನೇ ಮುಂದುವರಿಸಿದ್ದಾರೆ.