Advertisement

ಧರಂ ಸಿಂಗ್‌ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ

12:16 PM Jul 29, 2017 | |

ತಿ.ನರಸೀಪುರ: ತಾಲೂಕಿನ ವ್ಯಾಸರಾಜಪುರ ಸರ್ಕಾರಿ ಫ್ರೌಡಶಾಲೆ ಆವರಣದಲ್ಲಿ ನಡೆದ ಸೋಸಲೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಾಜಿ ಸಿಎಂ ಧರಂ ಸಿಂಗ್‌ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಧರಂ ಸಿಂಗ್‌ ಅವರ ನಿಧನದ ಹಿನ್ನಲೆ ರಾಜಾದ್ಯಂತ ಶೋಕಾಚರಣೆ ಇರುವುದರಿಂದ ಕ್ರೀಡಾಕೂಟದಲ್ಲಿ ಯಾವುದೇ ಸಭೆ ಸಮಾರಂಭ ನಡೆಸದೆ ದ ಧರಂಸಿಂಗ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.

Advertisement

ತಾಪಂ ಅಧ್ಯಕ್ಷ ಸಿ.ಚಾಮೇಗೌಡ ಮಾತನಾಡಿ, ಕರ್ನಾಟಕ ರಾಜ್ಯದ ಧೀಮಂತ ನಾಯಕರಾದ ಧರಂಸಿಂಗ್‌ರವರು ನಿಧನರಾಗಿರುವುದು ರಾಜ್ಯ ಹಾಗೂ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಧರಂಸಿಂಗ್‌ ವೃತ್ತಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ ನಂತರ ಇಂದಿರಾಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡು 8 ಬಾರಿ ವಿಧಾನ ಸಭೆಗೆ ಹಾಗೂ 2 ಬಾರಿ ಲೋಕಸಭೆಗೆ ಆಯ್ಕೆಯಾದವರು.

ಕಂದಾಯ, ನಗರಾಭಿವೃದ್ಧಿ, ಗೃಹಖಾತೆ, ಪೌರಕಾರ್ಮಿಕ, ಪಂಚಾಯತ್‌ ರಾಜ್‌ ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಗೆ ಅಪಾರ ಕೊಡುಗೆ ನೀಡಿದ್ದಾರೆಂದು ಸ್ಮರಿಸಿದರು. ತಾಪಂ ಸದಸ್ಯರಾದ ಶಿವಮ್ಮ, ರಂಗಸ್ವಾಮಿ, ಸೋಸಲೆ ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ರಾಮು, ಬಿಇಒ ಮರಿಸ್ವಾಮಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಶಿವಶಂಕರ್‌ಮೂರ್ತಿ, ಚಿದರವಳ್ಳಿ ಶಾಲಾ ಮುಖ್ಯ ಶಿಕ್ಷಕ ನಾಗೇಶ್‌ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next