Advertisement

ನದಿಯಲ್ಲಿ ಮುಳುಗಿ ಬಾಲಕ ಸಾವು

02:34 AM Jun 13, 2019 | mahesh |

ಸವಣೂರು: ಇಲ್ಲಿನ ಶಾಂತಿ ಮೊಗರು ಸೇತುವೆಯ ಬಳಿ ಗೆಳೆಯರೊಂದಿಗೆ ಸ್ನಾನಕ್ಕೆಂದು ಇಳಿದ ಬಾಲಕನೊಬ್ಬ ಮೃತಪಟ್ಟ ಘಟನೆ ಜೂ.12ರಂದು ಸಂಜೆ ಸಂಭವಿಸಿದೆ.

Advertisement

ವಿಟ್ಲ ಮೂಲದ, ಪ್ರಸ್ತುತ ಪರಣೆಯ ಬಾಡಿಗೆ ಮನೆಯಲ್ಲಿದ್ದ ಹಮೀದ್‌ ಅವರ ಪುತ್ರ, ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲಾ 9ನೇ ವಿದ್ಯಾರ್ಥಿ ಮಹಮ್ಮದ್‌ ಅಶ್ಪಾನ್‌ (15) ಮೃತ ಬಾಲಕ. ಈತ 6 ಮಂದಿ ಸ್ನೇಹಿತರ ಜತೆ ಸ್ನಾನಕ್ಕೆಂದು ಕುಮಾರ ಧಾರಾಕ್ಕಿಳಿದು ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದ. ಬಳಿಕ ಹುಡುಕಾಡಿದಾಗ ಮುಳುಗಿದ ಸ್ಥಳದಲ್ಲೇ ಶವ ಪತ್ತೆಯಾಗಿದೆ. ಅಗ್ನಿ ಶಾಮಕ ದಳದವರು ಆಗಮಿಸುವ ಮೊದಲೇ ಸ್ಥಳೀಯರು ಮೃತದೇಹವನ್ನು ಹೊರತೆಗೆದಿದ್ದರು. ದೇಹವನ್ನು ಕಡಬ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಅಶ್ಪಾನ್‌ ತಂದೆ ಹಮೀದ್‌ ಅವರು ವಿದೇಶದಲ್ಲಿದ್ದಾರೆ. ತಾಯಿ ಅವ್ವಮ್ಮ ತವರು ಮನೆಯೂ ಪರಣೆ ಸಮೀಪದ ಕೊಳಿ ಎಂಬಲ್ಲಿದ್ದು, ಸಮೀಪದಲ್ಲೇ ಇವರ ಬಾಡಿಗೆ ಇದೆ. ಅಶ್ಪಾನ್‌ ಉತ್ತಮ ಕಬಡ್ಡಿ ಆಟಗಾರನಾಗಿದ್ದು, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾನೆ.

ಕಡಬ ಎಸ್‌ಐ ಪ್ರಕಾಶ್‌ ದೇವಾಡಿಗ, ಬೆಳ್ಳಾರೆ ಎಸ್‌ಐ ಡಿ. ಎನ್‌. ಈರಯ್ಯ ಹಾಗೂ ಸಿಬಂದಿ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಘಟನ ಸ್ಥಳಕ್ಕೆ ಪುತ್ತೂರು ಉಪವಿಭಾಗ ಡಿವೈಎಸ್ಪಿ ದಿನಕರ ಶೆಟ್ಟಿ ಭೇಟಿ ನೀಡಿದರು.

ಉದಯವಾಣಿ ಎಚ್ಚರಿಸಿತ್ತು
ಕುಮಾರಧಾರಾ ನದಿಯಲ್ಲಿ ಅಪಾಯವನ್ನರಿಯದೆ ಈಜಾಡುವ ಕುರಿತು ಉದಯವಾಣಿ ಸುದಿನದಲ್ಲಿ ಮೇ 5ರಂದು ವರದಿ ಪ್ರಕಟವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next