Advertisement

ಉಡುಪಿ : ಅಪಘಾತದಿಂದಾಗಿ ಗಂಭೀರ ಗಾಯಗೊಂಡಿದ್ದ ಸಾರಿಗೆ ಉದ್ಯಮಿ ಸಾವು

08:18 PM May 26, 2021 | Team Udayavani |

ಕಾಪು : ಕುರ್ಕಾಲು-ಸುಭಾಸ್‌ ನಗರ ಬಳಿ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಪಾಂಗಾಳ ಜೆ. ಎನ್. ಮೋಟಾರ್‍ಸ್‌ನ ಮಾಲಕ ಹರಿದಾಸ್ ಭಟ್ (65) ಅವರು ಚಿಕಿತ್ಸೆ ಫಲಕಾರಿಯಾಗದೇ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮೇ 26 ರಂದು ಮೃತ ಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Advertisement

ಶನಿವಾರ ಬೆಳಗ್ಗೆ ಕುರ್ಕಾಲು ಸುಭಾಸ್ ನಗರ ಸಮೀಪದ ದ್ವಾರದ ಬಳಿ ಬೈಕ್‌ಗೆ ರಿಕ್ಷಾ ಢಿಕ್ಕಿ ಹೊಡೆದು ಹರಿದಾಸ್ ಭಟ್ ಅವರ ಗಂಭೀರ ಏಟಾಗಿತ್ತು. ತತ್‌ಕ್ಷಣ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬುಧವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕಳೆದ ಸುಮಾರು 45 ವರ್ಷಗಳಿಂದ ಸಾರಿಗೆ ಉದ್ಯಮವನ್ನು ನಡೆಸುತ್ತಿರುವ ಇವರು ದೇಶದಾದ್ಯಂತ ಪ್ರವಾಸಿಗರನ್ನು ಕರೆದೊಯ್ದು ಜೆ.ಎನ್. ಭಟ್ರು ಎಂದೇ ಪರಿಚಿತರಾಗಿದ್ದರು. ಪಾಂಗಾಳ ಶ್ರೀ ಜನಾರ್ದನ ದೇವಸ್ಥಾನದ ಸೇವಾ ಸಮಿತಿ, ಪಾಂಗಾಳ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಉಡುಪಿ ಜಿಲ್ಲಾ ಟೆಂಪೋ ಚಾಲಕರ ಮತ್ತು ಮಾಲಕದ ಸಂಘದ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದ ಅವರು ಜನಾರಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next