ರೈತನೊಬ್ಬ ಬಲಿಯಾಗಿದ್ದಾನೆ. ಹಳಿಯಾಳ ತಾಲೂಕಿನ ಶೇಖನಕಟ್ಟಾ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಿಡಿಲು ಬಡಿದು ಗೋವಿಂದ ಸಿ.ಗೌಡಾ (64) ಎಂಬುವರು ಮೃತಪಟ್ಟಿದ್ದಾರೆ. ಇವರು ರಾತ್ರಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಸ್ಥಳಕ್ಕೆ ಬೆಳಗ್ಗೆ ತಹಶೀಲ್ದಾರ ವಿದ್ಯಾಧರ ಗುಳಗುಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಾದ್ಯಂತ ಮಳೆಯಾಗಿದ್ದು, ಸಿಡಿಲು ಬಡಿದು ತಾಲೂಕಿನ ಮಳ್ಳ ಗ್ರಾಮದಲ್ಲಿ 3 ತೆಂಗಿನ ಮರಗಳು ಭಸ್ಮವಾಗಿವೆ. ಸಮೀಪದಲ್ಲಿದ್ದ 2 ಮನೆಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಬಿದ್ದ ತೆಂಗಿನಮರಗಳ ಸಮೀಪದ ಮನೆಯೊಳಗಿದ್ದ ಬಾಳೆಗುಂಡಿ ತಿಮ್ಮಪ್ಪ ಮತ್ತು ತ್ರಿವೇಣಿ ಹಾಗೂ ನಾಗರಾಜ ಮತ್ತು ಮೀರಾ ದಂಪತಿಗಳಿಗೆ ತೀವ್ರ ಆಘಾತವಾಗಿದೆ. ಇವರನ್ನು ಉಪವಿಭಾಗೀಯ
ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ತೆಂಗಿನ ಮರಕ್ಕೆ ತಗುಲಿದ್ದ ಬೆಂಕಿಯನ್ನು
ನಂದಿಸಿ, ಹೆಚ್ಚಿನ ಯಾವುದೇ ಅಪಾಯವಾದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.
Advertisement
ಈ ಮಧ್ಯೆ, ಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಅತಿ ಹೆಚ್ಚು, 2 ಸೆಂ.ಮೀ. ಮಳೆಯಾಯಿತು. ಚಿತಗುಪ್ಪ, ಜಯಪುರದಲ್ಲಿ ತಲಾ 1 ಸೆಂ.ಮೀ. ಮಳೆಯಾಯಿತು. ಸುಬ್ರಹ್ಮಣ್ಯ, ಕಡಬ ಸೇರಿ ಸುಳ್ಯ ತಾಲೂಕಿನಾದ್ಯಂತ ಮಳೆ ಬಂದಿದೆ. ಸುಳ್ಯದಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಉಳಿದಂತೆ ದಕ್ಷಿಣ ಒಳನಾಡಿನ ಕೆಲವೆಡೆ ಗರಿಷ್ಠ ತಾಪ ಮಾನ ಸಾಮಾನ್ಯಕ್ಕಿಂತ ಅಧಿಕವಾಗಿದ್ದರೆ ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಎಲ್ಲೆಡೆ ಸಾಮಾನ್ಯವಾಗಿತ್ತು. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠವೆನಿಸಿದ 41.4 ಡಿ.ಸೆ.ತಾಪಮಾನ ದಾಖಲಾಯಿತು.