Advertisement

ಟ್ರಾನ್ಸ್ ಫಾರ್ಮರ್ ನಿಂದ ವಿದ್ಯುತ್ ಪ್ರವಹಿಸಿ ದನ ಸಾವು

02:52 PM Jun 14, 2019 | Team Udayavani |

ಗುರುಪುರ: ಮೇಯಲು ಬಿಟ್ಟಿದ್ದ ದನವೊಂದಕ್ಕೆ ಟ್ರಾನ್ಸ್ ಫಾರ್ಮರ್ ನ ವಯರ್ ತಾಗಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗ್ಗೆ ಇಲ್ಲಿನ ಬಡಗ ಉಳಿಪಾಡಿ ಗ್ರಾಮದಲ್ಲಿ ನಡೆದಿದೆ.

Advertisement

ಸ್ಥಳೀಯ ನಿವಾಸಿ ಸಿಲಿನ್ ಪಿಂಟೋ ಅವರು ಪ್ರತಿದಿನದಂತೆ ದನವನ್ನು ಮೇಯಲು ಬಿಟ್ಟಿದ್ದರು. ಆದರೆ ಇಂದು ಬೆಳಗ್ಗೆ ಸುಮಾರು 10.30ರ ಸುಮಾರಿಗೆ ಟ್ರಾನ್ಸ್ ಫಾರ್ಮರ್ ಬಳಿ ಮೇಯುತ್ತಿದ್ದಾಗ ಅದರ ವಯರ್ ತಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು, ಟ್ರಾನ್ಸ್ ಫಾರ್ಮರ್ ಸುತ್ತ ಬೇಲಿ ಹಾಕುವ ಭರವಸೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬಳಿಯ ಗುರುಪುರ ಪರಿಸರದಲ್ಲಿ ಇನ್ನೂ ಮೂರು ಇದೇ ರೀತಿಯ ಟ್ರಾನ್ಸ್ ಫಾರ್ಮರ್ ಗಳಿದ್ದು ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಮಾಡಬೇಕು ಎಂದು ಸ್ಥಳೀಯರು ಆಗ್ರಹ ಮಾಡುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಬಜಪೆ ಪೊಲೀಸರು, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next