ಮಾಗಡಿ: ಏಪ್ರಿಲ್ 1ರೊಳಗೆ ಬೆಸ್ಕಾಂ ಎಂಜಿನಿಯರ್ ಗಳು ಸಮಸ್ಯೆ ಬಗೆಹರಿಸದಿದ್ದರೆ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ಉಗ್ರ ಹೋರಾಟನಡೆಸಲಾಗುವುದು ಎಂದು ಜಿಪಂ ಮಾಜಿ ಸದಸ್ಯಎಂ.ಕೆ.ಧನಂಜಯ್ಯ ಎಚ್ಚರಿಕೆ ನೀಡಿದರು.
ತಾಲೂಕಿನ ಹೊಸಪಾಳ್ಯದಲ್ಲಿ ಬೆಸ್ಕಾಂ ಅಧಿಕಾರಿಗಳುಮತ್ತು ಶಾಸಕ ಎ.ಮಂಜುನಾಥ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಉಗ್ರ ಹೋರಾಟ: ತಾಲೂಕಿನ ಶಿವನಸಂದ್ರ ಗ್ರಾಮದಬಳಿ ವಿದ್ಯುತ್ ಸರಬರಾಜು ಕೇಂದ್ರದ ಕಾಮಗಾರಿ ಶೇ.95 ಪೂರ್ಣಗೊಂಡಿದೆ. ಆದರೆ, ದೊಡ್ಡ ಸೋಮನಹಳ್ಳಿಗ್ರಾಮದ ವ್ಯಕ್ತಿಯೊಬ್ಬರ ಜಮೀನಲ್ಲಿದ್ದ ಮರ ಕಡಿಯಬೇಕಿದ್ದು, ಅವರಿಗೆ 2 ವರ್ಷವಾದರೂ ಪರಿಹಾರನೀಡಿಲ್ಲ, ಈ ಸಂಬಂಧ ರೈತ ಶಾಸಕರ ಗಮನಕ್ಕೆತಂದರೂ ಪ್ರಯೋಜನ ವಾಗಿಲ್ಲ, ಇದರಿಂದ ಕಾಮಗಾರಿ ಸ್ಥಗಿತವಾಗಿದ್ದು, ಹೊಸಪಾಳ್ಯ, ಚಿಕ್ಕಮುದಿಗೆರೆ ಭಾಗದ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗದೇ ತೊಂದರೆಯಾಗುತ್ತಿದೆ. ಇನ್ನೊಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ನಿಶ್ಚಿತ ಎಂದು ತಿಳಿಸಿದರು.
ಅಧಿಕಾರಿಗಳೇ ಹೊಣೆ: ತಾಪಂ ಸದಸ್ಯ ಎಂ.ಎಚ್.ಸುರೇಶ್ ಮಾತನಾಡಿ, ಸಾಲ ಮಾಡಿ ರೈತರು ಕೊಳವೆಬಾವಿ ಕೊರೆಸಿದ್ದಾರೆ. ಅವರ ಪಂಪ್‌ಸೆಟ್‌ಗಳಿಗೆಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗದೇತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತಬಡ್ಡಿಯೂ ಕಟ್ಟಲಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ.ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ,ಬೆಸ್ಕಾಂ ಎಂಜಿನಿಯರ್ ನೀಡುವ 3 ಗಂಟೆ ವಿದ್ಯುತ್ ನಲ್ಲಿ 40 ರಿಂದ 50 ಬಾರಿ ವಿದ್ಯುತ್ ಕಡಿತಗೊಳ್ಳುತ್ತಿರುತ್ತದೆ. ಪಂಪ್ ಮೋಟಾರ್‌ಗಳು ಸುಟ್ಟು ಹೋಗುತ್ತಿವೆ. ತಾಲೂಕಿನ ಆಡಳಿತದ ಜವಾಬ್ದಾರಿ ಹೊತ್ತವರುವಿದ್ಯುತ್ ಸಮಸ್ಯೆ ಕುರಿತು ವಿಧಾನಸಭೆಯಲ್ಲಿಚರ್ಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರೈತರವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಎಂಜಿನಿಯರ್‌ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಾಗುವಅನಾಹುತ ಗಳಿಗೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದರು.
ಲೈನ್‌ಮೆನ್‌ಗಳು ಬರಲ್ಲ: ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ರೈತರಜಮೀನುಗಳಲ್ಲಿ ಸುಟ್ಟು ಹೋಗಿರುವ ಟೀಸಿಗಳನ್ನುಬದಲಾವಣೆ ಮಾಡಿ ಎಂದು ತಿಳಿಸಿದ್ದರೂ ಬೆಸ್ಕಾಂಅಧಿಕಾರಿಗಳು ಟೀಸಿ ಬದಲಾವಣೆ ಮಾಡದೇ ಬೆಳೆಗಳು ನಾಶವಾಗುತ್ತಿವೆ. ವಿದ್ಯುತ್ ಸಂಪರ್ಕ ಕಡಿತವಾಗಿ2-3 ದಿನವಾದರೂ ಲೈನ್‌ಮೆನ್‌ಗಳು ಬರುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಲೇವಡಿ ಮಾಡಿದರು ಬೆಸ್ಕಾಂ ಇ.ಇ.ಮಂಜುನಾಥ್ ಮಾತನಾಡಿ,ವಿದ್ಯುತ್ ಲೈನ್ ಕಾಮಗಾರಿ ಕೊರೊನಾದಿಂದಸ್ಥಗಿತಗೊಂಡಿತ್ತು. ರೈತರ ಜಮೀನಿನಲ್ಲಿ ಕಾಮಗಾರಿಸಮಸ್ಯೆಯಾಗಿದೆ. ಸರಿಪಡಿಸಲಾಗುವುದು, ಬೇಸಿಗೆಆಗಿರುವುದರಿಂದ ವಿದ್ಯುತ್ ಸರಬರಾಜಿನ ಲೋಡ್‌ನಲ್ಲಿ ಸಮಸ್ಯೆ ಇತ್ತು. ಬೇರೆಡೆ ಲೈನ್ ಮೂಲಕ ತರಲುಪ್ರಯತ್ನಿಸಿದ್ದೇವೆ. 3 ದಿನಗಳಲ್ಲಿ ಇಲ್ಲಿನ ವಿದ್ಯುತ್ ಸಮಸ್ಯೆಬಗೆಹರಿಸುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಸ್ಥಗಿತಗೊಳಿಸಿದರು.
ತಾಪಂ ಸದಸ್ಯ ಕೆ.ಎಚ್.ಶಿವರಾಜು, ಟಿಎಪಿಸಿಎಂ ಎಸ್ ನಿರ್ದೇಶಕ ಸಿ.ಬಿ.ರವೀಂದ್ರ, ಗ್ರಾಪಂ ಅಧ್ಯಕ್ಷ ರವಿಕುಮಾರ್, ಗಂಗರಾಜು,ಮಾಜಿ ಸದಸ್ಯರಾದ ಜಾನಿಗೆರೆ ರವೀಶ್, ಪಾಪಣ್ಣಗೌಡ, ಕುಲುಮೆಪಾಳ್ಯದ ವಿಶ್ವನಾಥ್, ಸಿ.ವಿ. ರಾಜಣ್ಣ,ಸುರೇಶ್, ಗಂಗಾಧರ್, ಯತೀಶ್, ಕಿರಣ್, ಗಂಗರಾಜು, ಬಿಳಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.
ಅಧಿಕಾರಿಗಳ ವಿರುದ್ಧ ಆಕ್ರೋಶ :
ಶಾಸಕರು ರೈತರ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಬೆಸ್ಕಾಂ ಎಂಜಿನಿಯರ್‌ಗಳು ರೈತರಿಂದ 28ಸಾವಿರ ಹಣ ಕಟ್ಟಿಸಿಕೊಂಡು 2 ವರ್ಷವಾದರೂ ಇದುವರೆಗೂ ರೈತರ ಪಂಪ್‌ಸೆಟ್‌ಗಳಿಗೆ ಟೀಸಿ ಅಳವಡಿಸಿಲ್ಲ, ಇದರಿಂದ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ತುಂಬ ತೊಂದರೆಯಾಗಿದೆ. ಜತೆಗೆ ಕಷ್ಟಪಟ್ಟುಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿ ರೈತರು ತೀರಾ ಕಷ್ಟದಲ್ಲಿದ್ದು, ಆರ್ಥಿಕವಾಗಿ ಸಂಕಷ್ಟಅನುಭವಿಸುವಂತಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಜಿಪಂ ಮಾಜಿ ಸದಸ್ಯ ಎಂ.ಕೆ.ಧನಂಜಯ್ಯ ಆಕ್ರೋಶ ವ್ಯಕ್ತಪಡಿಸಿದರು.