Advertisement

ಚಂದಿರನ ಅಂಗಳದ ಮೇಲೆ ಇಸ್ರೋ ಸವಾರಿಗೆ ದಿನ ನಿಗದಿ

02:54 AM Jun 13, 2019 | Team Udayavani |

ಬಹು ನಿರೀಕ್ಷಿತ ಚಂದ್ರಯಾನ-2 ಉಡ್ಡಯನಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಜು.15ರ ಮುಂಜಾವ 2 ಗಂಟೆ 51 ನಿಮಿಷಕ್ಕೆ ಚಂದ್ರಯಾನ ಪರಿಕರ ಹೊತ್ತ
ಜಿಎಸ್‌ಎಲ್‌ವಿ ಮಾರ್ಕ್‌-3 ಶ್ರೀಹರಿಕೋಟಾದಿಂದ ಹೊರಡಲಿದೆ.

Advertisement

ಚಂದ್ರನ ದಕ್ಷಿಣ ಧ್ರುವ ಸ್ಪರ್ಶಿಸಲಿರುವ ಮೊದಲ ಬಾಹ್ಯಾಕಾಶ ನೌಕೆ
ಇದೇ ಮೊದಲ ಬಾರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆ ಇಳಿಸಿ ಎಲ್ಲ ಕಾರ್ಯಾಚರಣೆ ಅಲ್ಲಿಯೇ ನಡೆಸಲು ಇಸ್ರೋ ಉದ್ದೇಶಿಸಿದೆ. ಈವರೆಗೂ ಯಾವುದೇ ಬಾಹ್ಯಾಕಾಶ ಸಂಸ್ಥೆಗಳು ಈ ಸ್ಥಳದಲ್ಲಿ ತಮ್ಮ ನೌಕೆಯನ್ನು ಇಳಿಸುವ ಪ್ರಯತ್ನ ಮಾಡಿಯೇ ಇಲ್ಲ. ಈ ಹೊಸ ಸಾಹಸದ ಮೂಲಕ ಇಸ್ರೋ ಶಕ್ತಿ ಇನ್ನಷ್ಟು ಹೆಚ್ಚಲಿದೆ.

ಜೂ. 14ರ ಬಳಿಕ ಶೀಹರಿಕೋಟಾಗೆ ವರ್ಗಾವಣೆ
ಚಂದ್ರಯಾನ-2ರ ಬಾಹ್ಯಾಕಾಶ ನೌಕೆ ಪರಿಕರಗಳು ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಐಎಸ್‌ಐಟಿಇ (ಸ್ಯಾಟಲೈಟ್‌ ಸೆಂಟರ್‌)ನಲ್ಲಿ ತಯಾರಿಸುತ್ತಿದ್ದು, ಅಂತಿಮ ಕೆಲಸ ಪೂರ್ಣಗೊಂಡ ಬಳಿಕ ಅಂದಾಜು ಜೂ.14ರ ಬಳಿಕ ಅದನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾಕ್ಕೆ ರವಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

14 ಪೇಲೋಡ್ಸ್‌ ಬಳಕೆ
ಈ ಚಂದ್ರಯಾನ ಬಾಹ್ಯಾಕಾಶ ನೌಕೆಯಲ್ಲಿ 14 ಪೇಲೋಡ್ಸ್‌ (ವೈಜ್ಞಾನಿಕ ಉಪಕರಣಗಳು)ಗಳಿದ್ದು, ಆ ಪೈಕಿ 13 ಭಾರತೀಯ ಮೂಲದವೇ ಆಗಿವೆ. ಎಂಟು ಆರ್ಬಿಟ್‌ (ಕಕ್ಷಾನೌಕೆ), ಮೂರು ಲ್ಯಾಂಡರ್‌, ಎರಡು ರೋವರ್‌ನ ಚಕ್ರದಲ್ಲಿ ಇರುತ್ತದೆ. ಒಂದು ಅಮೆರಿಕ ಮೂಲದ ಪೇಲೋಡ್‌ ಲೇಸರ್‌ ಕಿರಣ ಮೂಲಕ ಭೂಮಿಯ ದೂರವನ್ನು ನಿಖರವಾಗಿ ಗುರುತಿಸಲು ಅಳವಡಿಸಲಾಗಿದೆ.

ನೌಕೆಯಲ್ಲಿ ಏನಿರುತ್ತೆ?
ವಿಕ್ರಂ ಲ್ಯಾಂಡರ್‌ ಪ್ರಗ್ಯಾನ್‌ ರೋವರ್‌ ಆರ್ಬಿಟರ್‌

Advertisement

ಚಂದ್ರನಲ್ಲಿಗೆ ತಲುಪುವ ಸಮಯ
ಆ.1ಕ್ಕೆ ಚಂದ್ರನ ಕಕ್ಷೆಗೆ ಪ್ರವೇಶ. ಸೆ.6ಕ್ಕೆ ಚಂದ್ರನ ಮೇಲ್ಮೈಗೆ.

ನೌಕೆಯ ತೂಕ
3.8 ಟನ್‌ (8 ಆನೆ ಗಳ ತೂಕ)

Advertisement

Udayavani is now on Telegram. Click here to join our channel and stay updated with the latest news.

Next