Advertisement
ಜಿಲ್ಲಾಧಿಕಾರಿಗಳು ಖುದ್ಧು ಧರಣಿ ಸ್ಥಳಕ್ಕೆ ಆಗಮಿಸಿ, ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭವಾಗಲಿದೆಯೋ ಅಥವಾ ಇಲ್ಲವೊ, ಪ್ರಾರಭವಾಗುವುದಿದ್ದಲ್ಲಿ ಯಾವಾಗ? ಆಗುವುದೇ ಇಲ್ಲ ಎನ್ನುವುದಾದರೆ ಯಾವ ಕಾರಣಕ್ಕೆ ಎಂಬುದನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು.
Related Articles
Advertisement
2016-17ನೇ ಸಾಲಿನಲ್ಲಿ ಆ ಅನುದಾನದಲ್ಲಿ 3 ಕೋಟಿಯನ್ನು ಯೋಜನೆ ರೂಪಿಸುವ ಕೆಲಸಗಳಿಗಾಗಿ ಬಳಕೆಯನ್ನೂ ಮಾಡಲಾಗಿದೆ. ಆದರೂ, ಈವರೆಗೆ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಯಾವ ಕಾರಣಕ್ಕೆ ಆಗುತ್ತಿಲ್ಲ ಎನ್ನುವ ಬಗ್ಗೆ ಜಿಲ್ಲಾಡಳಿಯ ಸ್ಪಷ್ಟ ಮಾಹಿತಿಯನ್ನೇ ನೀಡುತ್ತಿಲ್ಲ.
ಸಂಸದ ಜಿ.ಎಂ. ಸಿದ್ದೇಶ್ವರ್ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ, ಪತ್ರದ ಮೂಲಕ ಸಂಪರ್ಕಿಸಿದ್ದರೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಹಾಗಾಗಿಯೇ ಖುದ್ದು ಜಿಲ್ಲಾಧಿಕಾರಿ ಧರಣಿ ಸ್ಥಳಕ್ಕೆ ಬರಬೇಕು, ಕಾರಣ, ಸಮಸ್ಯೆ, ಒತ್ತಡದ ಬಗ್ಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆಗೆ ಒತ್ತಾಯಿಸಿ ಜೆಡಿಎಸ್‌ನವರು ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಯಾವುದೇ ಅಭ್ಯಂತರ, ಆಕ್ಷೇಪಣೆಯೇ ಇಲ್ಲ. ಬೇಕಾದಲ್ಲಿ ತಮಗೆ ಸೇರಿರುವ ಜಾಗ ಬಳಸಿಕೊಳ್ಳಬಹುದು.
ಸಂಸದರ ಮೇಲೆ ಒತ್ತಡ ತರುವಂತೆಯೂ ಹೇಳಿದ್ದಾರೆ. ಬಿಜೆಪಿ ಮತ್ತೆ ಮನವಿ ಮಾಡಿ, 15 ದಿನ ಕಾಲಾವಕಾಶ ನೀಡಲಾಗಿತ್ತು. ಆದರೂ, ಜಿಲ್ಲಾಡಳಿತ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾವು ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆ ಮಾಡುವವರೆಗೂ ಬೇಕಾದರೆ ಬಿಜೆಪಿಯವರು ಹೋರಾಟ ಮಾಡಲಿ ಎಂಬುದಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿರುವುದು ಖಂಡನೀಯ.
ಹಿರಿಯರಾದ ಬಗ್ಗೆ ಅಪಾರ ಗೌರವ ಇದೆ. ಬಿಜೆಪಿಯವರ ಹಿತಕ್ಕಾಗಿ ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆಗಾಗಿ ಹೋರಾಟ ಮಾಡುತ್ತಿಲ್ಲ. ಸಾರ್ವಜನಿಕರ ಹಿತಕ್ಕಾಗಿ ಎಂದು ಹೇಳಿದರು. ಪಕ್ಷದ ಜಿಲ್ಲಾ ವಕ್ತಾರ ಕೊಂಡಜ್ಜಿ ಜಯಪ್ರಕಾಶ್ ಮಾತನಾಡಿ, 90ರ ದಶಕದಲ್ಲಿ ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆಗಾಗಿ ಛೇಂಬರ್ ಆಫ್ ಕಾಮರ್ಸ್‌ನಿಂದ ರೈಲ್ವೆ ಇಲಾಖೆಗೆ 18 ಲಕ್ಷ ಕಟ್ಟಲಾಗಿತ್ತು. ವಾಪಾಸ್ಸು ಸಹ ಬಂದಿದೆ.
18 ಲಕ್ಷದಲ್ಲಿ ಆಗುವ ಕಾಮಗಾರಿಗೆ ಈಗ ಬಿಡುಗಡೆಯಾಗಿರುವ 35 ಕೋಟಿಯೂ ಸಾಕಾಗುವುದಿಲ್ಲ. ರೈಲ್ವೆ ಮೇಲ್ಸೇತುವೆಗೆ ತಾಂತ್ರಿಕ ಅಡಚಣೆ ಇದ್ದರೆ ಬಗೆಹರಿಸಿಕೊಳ್ಳಬಹುದು. ಅದನ್ನು ಬಿಟ್ಟು ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡುವುದು ಸರಿಯಲ್ಲ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಎಚ್.ಎನ್. ಶಿವಕುಮಾರ್, ಎನ್. ರಾಜಶೇಖರ್, ರಮೇಶ್‌ನಾಯ್ಕ, ರಾಜನಹಳ್ಳಿ ಶಿವಕುಮಾರ್, ಎಚ್.ಎಸ್. ಲಿಂಗರಾಜು, ಎ.ವೈ. ಪ್ರಕಾಶ್, ಆನಂದರಾವ್ ಶಿಂಧೆ, ಬೇತೂರು ಬಸವರಾಜ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.