Advertisement

ಓಟದ ದೊರೆಯ ಮಗಳ ಹೆಸರು ಒಲಿಂಪಿಯಾ ಲೈಟ್ನಿಂಗ್‌ ಬೋಲ್ಟ್!

03:56 AM Jul 09, 2020 | Sriram |

ಕಿಂಗ್‌ಸ್ಟನ್‌ (ಜಮೈಕಾ): ಓಟದ ದೊರೆ, ಒಲಿಂಪಿಕ್‌ ಲೆಜೆಂಡ್‌ ಉಸೇನ್‌ ಬೋಲ್ಟ್ ಮತ್ತೆ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ, ಇವರ ಪುಟಾಣಿ ಪುತ್ರಿ. ಈಕೆಯ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಬೋಲ್ಟ್, ಮಗಳ ಹೆಸರನ್ನೂ ಉಲ್ಲೇಖೀಸಿದ್ದಾರೆ. ಈ ಹೆಸರು ಬಹಳ ಆಕರ್ಷಕವಾಗಿದೆ. ತಮ್ಮ ಒಲಿಂಪಿಕ್‌ ಸಾಧನೆಯ ಸವಿನೆನಪಿಗಾಗಿ “ಒಲಿಂಪಿಯಾ ಲೈಟ್ನಿಂಗ್‌ ಬೋಲ್ಟ್’ ಎಂಬ ಹೆಸರನ್ನಿರಿಸಿದ್ದಾರೆ.

Advertisement

ಬಾಳಸಂಗಾತಿ ಕ್ಯಾಸಿ ಬೆನೆಟ್‌ಗೆ ಹುಟ್ಟಿದ ಹಬ್ಬದ ಶುಭಾಶಯ ತಿಳಿಸುವ ಸಂದರ್ಭದಲ್ಲಿ ಮಗಳ ಹೆಸರನ್ನೂ ಬಹಿರಂಗಗೊಳಿಸುವ ಮೂಲಕ ಬೋಲ್ಟ್ ಕ್ರೀಡಾಭಿಮಾನಿಗಳ ಕುತೂಹಲ ತಣಿಸಿದರು.

“ನಾವೀಗ ಪುತ್ರಿ ಒಲಿಂಪಿಯಾ ಲೈಟ್ನಿಂಗ್‌ ಬೋಲ್ಟ್ ಜತೆ ನೂತನ ಅಧ್ಯಾಯವೊಂದನ್ನು ಎದುರು ನೋಡುತ್ತಿದ್ದೇವೆ’ ಎಂದು ಉಸೇನ್‌ ಬೋಲ್ಟ್ ಪ್ರಕಟಿಸಿದ್ದಾರೆ. ಮೇ 14ರಂದು ಈಕೆಯ ಜನನವಾಗಿತ್ತು.

11 ಬಾರಿಯ ವಿಶ್ವ ಚಾಂಪಿಯನ್‌ ಆಗಿರುವ ಉಸೇಲ್‌ ಬೋಲ್ಟ್, ಸತತ 3 ಒಲಿಂಪಿಕ್‌ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದ ವಿಶ್ವದ ಏಕೈಕ ಸಾಧಕನಾಗಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next