Advertisement
5.60 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ: 2019ರಿಂದ ಇದುವ ರೆಗೂ ವಿದ್ಯುತ್ ಬಿಲ್ ಪಾವತಿಸಿಲ್ಲ. ಇದುವ ರೆಗೂ ಸುಮಾರು 5.60 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಇದೆ. ಅಧಿಕಾರಿಗಳ ನಿರ್ಲ ಕ್ಷ್ಯ ಹೆಚ್ಚಾಗಿರುವುದು ಸಮಸ್ಯೆಗೆ ಕಾರಣ ವಾಗಿ ದೆ. ಅಂಬೇಡ್ಕರ್ ಭವನ ನಿರ್ಮಾಣದ ಅನು ದಾನ ದಲ್ಲಿ ಉಳಿದಿರುವ 50 ಸಾವಿರ ರೂ. ಹಣವನ್ನು ಸಣ್ಣ ಪುಟ್ಟ ಖರ್ಚುಗಳಿಗೆ ಬಳಸಲಾಗಿದೆ.
Related Articles
Advertisement
ಸಮುದಾಯ ಭವನಗಳತ್ತ ಆಯೋಜಕರು-
ನಗರದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರ, ರೈತ ಸಭಾಂಗಣ, ಗುರು ಭವನಗಳು ಹಳೆಯದಾಗಿದ್ದು, ಕುರ್ಚಿಗಳು, ಸೌಂಡ್ ಸಿಸ್ಟಂಗಳು ದುರಸ್ತಿಯಲ್ಲಿವೆ. ಇದರಿಂದ ಸಮರ್ಪಕ ಸಭಾಂಗಣಗಳು ಕಾರ್ಯಕ್ರಮ ಆಯೋಜಕರಿಗೆ ಸಿಗುತ್ತಿಲ್ಲ.
ಕರ್ನಾಟಕ ಸಂಘದ ಕೆವಿಎಸ್ ಭವನ ಸುಸಜ್ಜಿತವಾಗಿದ್ದರೂ ಹೆಚ್ಚು ಮಂದಿ ಸೇರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳು, ಸಂಘ- ಸಂಸ್ಥೆಗಳು, ಖಾಸಗಿ ಕಂಪ ನಿಗಳು ಕಾರ್ಯಕ್ರಮಗಳು ಸಹ ಸಮುದಾಯ ಭವನ, ಕಲ್ಯಾಣ ಮಂಟಪಗಳ ಮೋರೆ ಹೋಗುವಂತಾಗಿದೆ
ಇದನ್ನೂ ಓದಿ:- ವಿಧಾನ ಪರಿಷತ್ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ
ಸಮಿತಿ ಸಭೆಯಲ್ಲೂ ಚರ್ಚೆ ಅಂಬೇಡ್ಕರ್ ಭವನ ಸಮಿತಿಗೆ ಮಂಡ್ಯ ಉಪವಿಭಾಗಾಧಿಕಾರಿಯವರೇ ಅಧ್ಯಕ್ಷರಾಗಿದ್ದಾರೆ. ನಿರ್ವಹಣೆಯ ಮೇಲ್ವಿಚಾರಣೆ ಅವರ ಜವಾಬ್ದಾರಿಯಾಗಿದೆ. ಕಳೆದ ಸಮಿತಿ ಸಭೆಯಲ್ಲೂ ವಿದ್ಯುತ್ ಬಿಲ್ ಪಾವತಿ ಸಂಬಂಧ ಚರ್ಚೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
“ಈಗಾಗಲೇ ಒಂದು ಅಂಬೇಡ್ಕರ್ ಭವನ ಸಮಿತಿಯ ಸಭೆ ನಡೆಸಲಾಗಿದ್ದು, ಕಾರ್ಯಕ್ರಮಗಳ ಆಯೋಜನೆಗೆ ಬಾಡಿಗೆ ದರ ನಿಗದಿ ಮಾಡಲಾಗಿದೆ. ಕೆಪಿಟಿ ಕಾಯ್ದೆಯಂತೆ ದರ ನಿಗದಿಪಡಿಸಲಾಗಿದೆ. ಬಾಕಿ ವಿದ್ಯುತ್ ಬಿಲ್ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಅಲ್ಲದೆ, ಜಿಲ್ಲಾಧಿಕಾರಿಯವರಿಗೂ ಮಾಹಿತಿ ನೀಡಿದ್ದು, ಸೆಸ್ಕಾಂಗೆ ತಿಳಿಸಲಾಗಿತ್ತು. ಸರ್ಕಾರದಿಂದ ಇನ್ನೂ ಅನುದಾನ ಬರಬೇಕಾಗಿದ್ದು, ಅದು ಬಂದರೆ ಸಮಸ್ಯೆ ಬಗೆಹರಿಯಲಿದೆ. ಸಮಿತಿಗೆ ಅಧ್ಯಕ್ಷರಾಗಿ ಎಸಿ ಅವರಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಉಳಿದ ನಿರ್ವಹಣೆ, ಖರ್ಚು-ವೆಚ್ಚಗಳನ್ನು ಸಮಾಜ ಕಲ್ಯಾಣ ಇಲಾಖೆಯವರೇ ನಿರ್ವಹಿಸಲಿದ್ದಾರೆ.” – ಐಶ್ವರ್ಯ, ಉಪವಿಭಾಗಾಧಿಕಾರಿ, ಸಮಿತಿ ಅಧ್ಯಕ್ಷರು, ಮಂಡ್ಯ.
“ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಸೆಸ್ಕ್ ವಿದ್ಯುತ್ ಕಡಿತಗೊಳಿಸಿದ್ದಾರೆ. ಉಚಿತ ಕಾರ್ಯಕ್ರಮಗಳು ಹಾಗೂ ಸರಿಯಾಗಿ ಬಾಡಿಗೆ ಪಾವತಿಸಿಕೊಳ್ಳದ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ತೊಂದರೆಯಾಗಿದೆ. ಶೀಘ್ರ 15 ದಿನದೊಳಗೆ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು.” – ರಂಗೇಗೌಡ, ಉಪನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮಿತಿ ಸದಸ್ಯರು.
“ಕಳೆದ ಸಮಿತಿ ಸಭೆಯಲ್ಲಿ ವಿದ್ಯುತ್ ಬಿಲ್ ಪಾವತಿಸುವ ಸಂಬಂಧ ಚರ್ಚೆ ನಡೆಸಲಾಗಿದೆ. ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸೆಸ್ಕ್ ಕಿರಿಯ ಎಂಜಿನಿಯರ್‌ರೊಬ್ಬರು ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭರವಸೆ ನೀಡಿದ್ದರೂ, ಇದುವರೆಗೂ ಆಗಿಲ್ಲ. ಕೂಡಲೇ ಅಧಿಕಾರಿಗಳು ಕ್ರಮ ವಹಿಸಬೇಕು.” -ಆರ್.ಮಹೇಶ್ ಕೃಷ್ಣ, ಸದಸ್ಯರು, ಅಂಬೇಡ್ಕರ್ ಭವನ ಸಮಿತಿ
“ವಿದ್ಯುತ್ ಕಡಿತ ಮಾಡಿರುವು ದರಿಂದ ಯಾವುದೇ ಕಾರ್ಯ ಕ್ರಮಗಳು ನಡೆಯುತ್ತಿಲ್ಲ. ನಗರದ ಸುಸಜ್ಜಿತ ಭವನ ಇದಾಗಿದ್ದು, ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ಭವನವನ್ನು ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕು. ಮುಂದೆ ಈ ರೀತಿ ತೊಂದರೆಯಾಗದಂತೆ ಕ್ರಮ ವಹಿಸಬೇಕು.” – ಬಿ.ಪಿ.ಪ್ರಕಾಶ್, ಮಾಜಿ ಸದಸ್ಯರು, ನಗರಸಭೆ
– ಎಚ್.ಶಿವರಾಜು