Advertisement
ಅನಾದಿ ಕಾಲದಿಂದಲೂ ಅಮಾವಾಸ್ಯೆ ಕಡು ಮಾರ್ಗವೆಂದೇ ಗುರುತಿಸಿಕೊಂಡಿರುವ ಈ ಮುಖ್ಯ ರಸ್ತೆಯು ಭಾರೀ ಹೊಂಡಗಳಿಂದ ಕೂಡಿದ್ದು, ಕಳೆದ 1 ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮತ್ತಷ್ಟು ಹಾಳಾಗಿದೆ. ಕಳೆದ 15 ದಿನಗಳ ಹಿಂದೆ ರಸ್ತೆಯ ದುಸ್ಥಿತಿ ಬಗ್ಗೆ ಉದಯವಾಣಿ ಸಚಿತ್ರ ವಿಶೇಷ ವರದಿ ಪ್ರಕಟಿಸಿದ್ದರೂ ಇಲಾಖೆ ಸಹಿತ ಜನ ಪ್ರತಿನಿಗಳು ಸ್ಪಂದಿಸದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಡಿ ಹಬ್ಬ ಸಮೀಪಿಸುತ್ತಿರುವಂತೆ ಅಮಾವಾಸ್ಯೆ ಕಡುವಿಗೆ ಕೋಟೀಲಿಂಗೇಶ್ವರನ ಉತ್ಸವ ಮೂರ್ತಿಯೊಡನೆ ಸಾಗಲು ಈ ಮಾರ್ಗ ಬಳಸುವುದು ಪರಂಪರೆಯ ಪದ್ಧತಿಯಾಗಿದೆ. ಆದರೆ ಸಂಪೂರ್ಣವಾಗಿ ಬಸವಳಿದ ಹೊದ್ರಾಳಿ ರಸ್ತೆಯಲ್ಲಿ ದೇವರ ಮೂರ್ತಿಯೊಡನೆ ಸಾಗುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಎದುರಾಗಿರುವುದು ರಸ್ತೆಯ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ.