Advertisement

ಡಿಸಿಎಂ ತವರಲ್ಲಿ ದೇವಾಲಯ ಪ್ರವೇಶಿಸಿದ ದಲಿತನಿಗೆ ದಂಡ

11:03 PM Jun 07, 2019 | Lakshmi GovindaRaj |

ಕೊರಟಗೆರೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಸ್ವಕ್ಷೇತ್ರವಾದ ಕೊರಟಗೆರೆ ತಾಲೂಕಿನಲ್ಲಿ ದಲಿತನೊಬ್ಬ ದೇವಾಲಯ ಪ್ರವೇಶಿಸಿದ ಎಂದು ಪಂಚಾಯಿತಿ ಸೇರಿ ಆತನಿಗೆ ಗಾಮದಿಂದಲೇ ಬಹಿಷ್ಕಾರ ಹಾಕಲಾಗಿದೆ. ಜತೆಗೆ, 25 ಸಾವಿರ ರೂ.ದಂಡ ಹಾಕಿ, ದೇವಾಲಯ ಮೈಲಿಗೆ ಆಗಿದೆ ಎಂದು ಸುಣ್ಣ ಬಣ್ಣ ಮಾಡಿಸಿದ ಅಮಾನವೀಯ ಘಟನೆ ನಡೆದಿದೆ.

Advertisement

ತಾಲೂಕಿನ ಚನ್ನರಾಯನದುರ್ಗಾ ಹೋಬಳಿಯ ಮಲ್ಲೇಕಾವು ಗ್ರಾಮದ ದೊಡ್ಡಮ್ಮ ದೇವಿಯ ದೇವಾಲಯದಲ್ಲಿ ಮೇ 20ರಂದು ಜಾತ್ರೆ ನಡೆದಿತ್ತು. ಜಾತ್ರೆಯ ಒಂದು ವಾರದ ಬಳಿಕ ದೇವಾಲಯದಲ್ಲಿ ಮರುಪೂಜೆ ಏರ್ಪಡಿಸಿದ್ದು, ಅಂದು ದಲಿತ ಸಮುದಾಯಕ್ಕೆ ಸೇರಿದ, ಬೆಂಗಳೂರಿನಲ್ಲಿ ಆಟೋ ಚಾಲಕನಾಗಿರುವ ಮಲ್ಲೇಕಾವು ಜತೆ ಜಗದೀಶ್‌ ಎಂಬುವರು ಕುಟುಂಬ ಸಮೇತ ಪೂಜೆಗಾಗಿ ದೇವಾಲಯ ಪ್ರವೇಶಿಸಿದ್ದರು.

ಬಳಿಕ, ಗ್ರಾಮದ ಕೆಲ ಮುಖಂಡರು ಪಂಚಾಯಿತಿ ಸೇರಿ, ಜಗದೀಶನಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ. ದೇವಾಲಯ ಅಪವಿತ್ರವಾಗಿದ್ದು ಹೊಸದಾಗಿ ಸುಣ್ಣ, ಬಣ್ಣ ಬಳಿಸಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ಇದರ ಖರ್ಚಿಗಾಗಿ 25 ಸಾವಿರ ರೂ. ದಂಡ ಸಹ ಹಾಕಿದ್ದಾರೆ. ಈ ಬಗ್ಗೆ ಜಗದೀಶ್‌, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next