Advertisement

ಕತ್ತರಿಸಿದ ಕಾಲೇ ದಿಂಬು: ವೈದ್ಯರ ಅಮಾನತು

10:05 AM Mar 12, 2018 | Team Udayavani |

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ರೋಗಿಯ ಕತ್ತರಿಸಿದ ಕಾಲನ್ನೇ ತಲೆದಿಂಬಾಗಿ ಇರಿಸಿದ್ದ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ. ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಸ್‌ ಅಪಘಾತದಲ್ಲಿ ಘನಶ್ಯಾಮ್‌ ಎಂಬಾತ ತೀವ್ರವಾಗಿ ಗಾಯಗೊಂಡಿದ್ದ. ದಿಂಬು ಕೊಡಿ ಎಂದು ಸಂಬಂಧಿಕರು ಕೇಳಿದ್ದರು. ವೈದ್ಯರಿಗೆ ಈ ಬಗ್ಗೆ ದೂರಿದರೂ ಪ್ರಯೋಜನವಾಗಿಲ್ಲ ಎಂದು ಸಂಬಂಧಿಗಳು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next