Advertisement

ಕರ್ಫ್ಯೂ ಕೊಂಚ ಸಡಿಲ; ಜನಸಂಚಾರ ಹೆಚ್ಚಳ

05:49 PM Jun 15, 2021 | Team Udayavani |

ಧಾರವಾಡ: ಜಿಲ್ಲೆಯಲ್ಲಿ ಅನ್‌ಲಾಕ್‌ ಪ್ರಕ್ರಿಯೆಗೆ ಚಾಲನೆ ಲಭಿಸಿದ್ದು, ಸೋಮವಾರ ಮೊದಲ ದಿನವೇ ಜನ ಹಾಗೂ ವಾಹನಗಳ ಸಂಚಾರ ಜೋರಾಗಿತ್ತು.

Advertisement

ಕಳೆದ ಒಂದೂವರೆ ತಿಂಗಳಿಂದ ಜನ-ವಾಹನಗಳ ಸಂಚಾರವಿಲ್ಲದೇ ಭಣಗುತ್ತಿದ್ದ ಸುಭಾಸ, ಟಿಕಾರೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಜೋರಾಗಿತ್ತು. ಮಾರುಕಟ್ಟೆ ಪ್ರದೇಶದಲ್ಲಿ ಜನರ ಸಂಚಾರ, ವ್ಯಾಪಾರ-ವಹಿವಾಟು ಹೆಚ್ಚಿತ್ತು.

ಅನ್‌ಲಾಕ್‌ ಪ್ರಕ್ರಿಯೆ ಮೊದಲ ಹಂತವಾಗಿ ಅಗತ್ಯ ವಸ್ತುಗಳು ಸೇರಿ ಕೆಲ ವಲಯಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಬೆಳಗ್ಗೆಯಿಂದ ತುಂತುರು ಮಳೆ ಇದ್ದ ಕಾರಣಕ್ಕೆ ಮಾರುಕಟ್ಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು. ಮಧ್ಯಾಹ್ನ 2 ಗಂಟೆವರೆಗೂ ವ್ಯಾಪಾರ-ವಹಿವಾಟಿಗೆ ಅವಕಾಶ ನೀಡಿದ್ದರಿಂದ ಕೆಲ ವ್ಯಾಪಾರಸ್ಥರು ವಿಳಂಬವಾಗಿ ಅಂಗಡಿ ತೆರೆದರೆ, ಬೆಳಗ್ಗೆ ಬೇಗ ಅಂಗಡಿ ತೆರೆದವರಿಗೆ ಮಳೆ ನಿರಾಸೆ ಮೂಡಿಸಿತು.

ರಸ್ತೆಗಿಳಿದ ಜನರು ಮಾತ್ರ ಸರ್ಕಾರದ ನಿಯಮ ಪಾಲನೆ ಮಾಡದಿರುವುದು ಸ್ಪಷ್ಟವಾಗಿತ್ತು. ಬಹುತೇಕ ಜನರು, ವ್ಯಾಪಾರಸ್ಥರು ಮಾಸ್ಕ್ ಇಲ್ಲದೆ ವ್ಯಾಪಾರ-ವಹಿವಾಟು ನಡೆಸಿರುವುದು ಸಾಮಾನ್ಯವಾಗಿತ್ತು. ಮಧ್ಯಾಹ್ನದ ಬಳಿಕ ಜನ ಸಂಚಾರ ವಿರಳವಾಗಿತ್ತು. ಆಟೋಗಳು ರಸ್ತೆಗಳಿದು ಸಂಚಾರ ಮಾಡಿದವು.

Advertisement

Udayavani is now on Telegram. Click here to join our channel and stay updated with the latest news.

Next