ಪಾವಂಜೆ: ಕರಾವಳಿಯ ಸಂಸ್ಕೃತಿ ಎಂದಿಗೂ ನವ ವೈಭವದಂತೆ ವೇದಿಕೆ ಯನ್ನು ಕಲ್ಪಿಸಿಕೊಂಡು ಅನಾವರಣಗೊಳ್ಳುತ್ತಿರಬೇಕು. ಮುಂದಿನ ಪೀಳಿಗೆಗಾಗಿ ಇದು ಅನಿವಾರ್ಯವೂ ಕೂಡ ಎಂದು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಪಾವಂಜೆಯ ನಿನಾದ ಸಾಂಸ್ಕೃತಿಕ ರಂಗ ವೇದಿಕೆಯಲ್ಲಿ ನಡೆದ ರಂಗನಿನಾದ ನಿನಾದ ನೆಂಪು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿ. ದಾಮೋದರ ನಿಸರ್ಗ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ, ಜಾನಪದ ಸಂಸ್ಕೃತಿ ಹಿರಿಯರಿಂದ ಕಿರಿಯರಿಗೆ ಬಳುವಳಿಯಾಗಿ ನೀಡಲ್ಪಡುವ ಮಹೋ ನ್ನತ ಕೊಡುಗೆಯಾಗಿದೆ. ಅದನ್ನು ನಿನಾದದ ಸ್ಮರಣೆಯೊಂದಿಗೆ ಜನ ಮಾನಸಕ್ಕೆ ಹಂಚುತ್ತಿರುವ ಕಾರ್ಯ ಅಭಿನಂದನೀಯ ಎಂದರು.
ಕಾರ್ಯಕ್ರಮವನ್ನು ಪಾವಂಜೆ ಅಗೋಳಿ ಮಂಜಣ್ಣ ಜಾನಪದ ಕೇಂದ್ರ, ನಿನಾದ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ, ಹಳೆಯಂಗಡಿ ಲಯನ್ಸ್ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.
ಲಯನ್ಸ್ ಕ್ಲಬ್‌ನ ಮಾಜಿ ಪ್ರಾಂತ್ಯಾಧ್ಯಕ್ಷ ಯಾದವ ದೇವಾಡಿಗ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಗೌರ ವಾಧ್ಯಕ್ಷ ಗಣೇಶ್ ಜಿ. ಬಂಗೇರಾ, ಕಡಂಬೋಡಿ ಮಹಾಬಲ ಪೂಜಾರಿ, ಕುಸುಮಾ ಕಡಂಬೋಡಿ, ಹಳೆಯಂಗಡಿ ಲಯನ್ಸ್ ಅಧ್ಯಕ್ಷ ಯಶೋಧರ ಸಾಲ್ಯಾನ್, ಅಗೋಳಿ ಮಂಜಣ ಜಾನಪದ ಕೇಂದ್ರದ ಗೌರವಆಧ್ಯಕ್ಷ ಚಂದ್ರಶೇಖರ ನಾನಿಲ್, ಹಿರಿಯ ಕೃಷಿಕ ಬಾಲಚಂದ್ರ ಸನಿಲ್, ಜಯಂತಿ ಸಂಕಮಾರ್, ಗಗನ್ ಸುವರ್ಣ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರದ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು. ವಿಜಯ ಕುಮಾರ್ ಕುಬೆವೂರು ಕಾರ್ಯಕ್ರಮ ನಿರೂಪಿಸಿದರು. ಮೂಲ್ಕಿಯ ನವ ವೈಭವ ಕಲಾವಿದರಿಂದ ಚಂದ್ರಶೇಖರ ಸುವರ್ಣ ರಚನೆಯ ಕಾಡ್‌ದ ಗಿಳಿ ತುಳುನಾಟಕ ಪ್ರದರ್ಶನಗೊಂಡಿತು.