Advertisement
ಹೌದು, ಆರೋಗ್ಯಕರ ಜೀವನ ಮತ್ತು ಉತ್ತಮ ವಾತವಾರಣ ಹೊಂದಲು ಮನೆಗೊಂದು ಶೌಚಾಲಯ ಇರಲಿ ಎಂಬ ಉದ್ದೇಶದಿಂದ ಸರ್ಕಾರಗಳು ಶೌಚಾಲಯ ನಿರ್ಮಾಣಕ್ಕಾಗಿ ಒತ್ತು ನೀಡುತ್ತಿವೆ. ಈ ಶೌಚಾಲಯ ನಿರ್ಮಾಣದ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ, ಪುರಸಭೆ, ನಗರಸಭೆಗಳ ಅಧಿಕಾರಿಗಳು ಸರ್ಕಾರ ಕೊಟ್ಟ ಟಾರ್ಗೆಟ್ ಮುಗಿಸುವ ಸಲುವಾಗಿ ನಾಮಕವಾಸ್ತೆ ಶೌಚಾಲಯ ನಿರ್ಮಿಸಿಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ.
Related Articles
Advertisement
ಶೌಚಾಲಯ ನಿರ್ಮಾಣ: ಬಯಲು ಶೌಚ ತಪ್ಪಿಸಲು ಸರ್ಕಾರ ತಮ್ಮ ಸ್ವಂತ ಜಾಗೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಎಸ್‌ಸಿ, ಎಸ್‌ಟಿ ಜನಾಂಗದವರಿಗೆ 15 ಸಾವಿರ, ಇತರೆ ಜನಾಂಗಕ್ಕೆ 12 ಸಾವಿರ ಸಹಾಯ ಧನ ನೀಡಿದೆ. ಇನ್ನು ಜಾಗೆ ಇಲ್ಲದೇ ಇರುವ ಜನರಿಗೆ ಗ್ರಾಮ ಪಂಚಾಯತಗಳೇ ಎಷ್ಟು ಜನರಿಗೆ ಸ್ವಂತ ಜಾಗವಿಲ್ಲ ಎಂಬುದನ್ನು ತಿಳಿದುಕೊಂಡು ಅಂತಹ ಜನರಿಗೆ ಸಮುದಾಯ ಶೌಚಾಲಯ ನಿರ್ಮಾಣ ಮಾಡಬೇಕು ಎಂಬ ನಿಯಮವಿದೆ.
ಸರ್ಕಾರದ ವಿವಿಧ ಯೋಜನೆ ಅನುದಾನದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲು ಹಣಕಾಸಿನ ನೇರವು ನೀಡಿದರೂ ಬೇಕಾಬಿಟ್ಟಿಯಾಗಿ ಶೌಚಾಲಯ ಕಟ್ಟಿrಸಿ ಅದರ ಅನುದಾನ ತೆಗೆಯುವುದರಲ್ಲಿ ಜಾಣರಾಗಿದ್ದಾರೆ. ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಮೂಕರಾಗಿದ್ದಾರೆ. ಸರ್ಕಾರ ಕೊಡುವ ಸಹಾಯ ಧನದ ಆಸೆಗಾಗಿ ಶೌಚ ನಿರ್ಮಿಸಿ ಅದನ್ನು ಬಳಕೆ ಮಾಡದೇ ಅದರಲ್ಲಿ ಕಟ್ಟಿಗೆ ಕುಳ್ಳು ಇಟ್ಟು ಮತ್ತೇ ಬಯಲು ಶೌಚಕ್ಕೆ ಹೋಗುವುದು ಮಾತ್ರ ಗ್ರಾಮದಲ್ಲಿ ತಪ್ಪಿಲ್ಲ.
ಬಿಸನಾಳದಲ್ಲಿ ಸಮುದಾಯ ಶೌಚಾಲಯ ಕಟ್ಟಿಸಿ ಒಂದು ವರ್ಷವಾಗಿದೆ. ಇಲ್ಲಿವರೆಗೆ ಅವುಗಳಿಗೆ ನೀರಿನ ವ್ಯವಸ್ಥೆಯಿಲ್ಲ. ಕರೆಂಟ್ ಸಹಿತ ಹಾಕಿಲ್ಲ. ಗ್ರಾಮದ ಜನರಿಗೆ ರಸ್ತೆ, ಹೊಲಗಳೇ ಶೌಚಾಲಯಗಳಾಗಿವೆ. ಈ ಶೌಚಾಲಯಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು.
•ಮಹಾಂತಪ್ಪ ವಾಲೀಕಾರ, ಬಿಸನಾಳ ಗ್ರಾಮಸ್ಥ. ಬೆಳಗಲ್ಲ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಮುದಾಯ ಶೌಚಾಲಯ ಮೂಲಭೂತ ವ್ಯವಸ್ಥೆ ಬಗ್ಗೆ ನಾನು ಅಲ್ಲಿನ ಪಿಡಿಒ ಜೊತೆ ಮಾತನಾಡುತ್ತೇನೆ. ಸ್ವತಃ ನಾನೇ ಅಲ್ಲಿಗೆ ಹೋಗಿ ಅದಕ್ಕೆ ಬೇಕಾಗಿರುವ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ.
•ಪುಷ್ಪಾ ಕಮ್ಮಾರ,ಹುನಗುಂದ ತಾಪಂ ಇಒ
•ಮಹಾಂತಪ್ಪ ವಾಲೀಕಾರ, ಬಿಸನಾಳ ಗ್ರಾಮಸ್ಥ. ಬೆಳಗಲ್ಲ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಮುದಾಯ ಶೌಚಾಲಯ ಮೂಲಭೂತ ವ್ಯವಸ್ಥೆ ಬಗ್ಗೆ ನಾನು ಅಲ್ಲಿನ ಪಿಡಿಒ ಜೊತೆ ಮಾತನಾಡುತ್ತೇನೆ. ಸ್ವತಃ ನಾನೇ ಅಲ್ಲಿಗೆ ಹೋಗಿ ಅದಕ್ಕೆ ಬೇಕಾಗಿರುವ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ.
•ಪುಷ್ಪಾ ಕಮ್ಮಾರ,ಹುನಗುಂದ ತಾಪಂ ಇಒ