Advertisement

ಟಿಕೆಟ್‌ ನೀಡಿಕೆಗೆ ಗೆಲ್ಲುವ ಮಾನದಂಡವೇ ಮುಖ್ಯ:ಸಿಎಂ

06:00 AM Dec 05, 2017 | |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಎನ್ನುವುದು ಪರಮೇಶ್ವರ್‌ ಅವರ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಹೈಕಮಾಂಡ್‌ ತೀರ್ಮಾನ  ಅಂತಿಮ. ಎಲ್ಲಕ್ಕಿಂತಲೂ ಗೆಲ್ಲುವ ಮಾನದಂಡ ಮುಖ್ಯ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಪರಮೇಶ್ವರ್‌ ಹೇಳಿಕೆಗೆ ಪರೋಕ್ಷ ಅಪಸ್ವರ ಎತ್ತಿದ್ದಾರೆ.

Advertisement

ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೋಮವಾರ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾರ್ಚ್‌ ಮೊದಲ ವಾರದಲ್ಲಿ ಕಾಂಗ್ರೆಸ್‌ ನಾಯಕರೆಲ್ಲ ಸೇರಿ ಸಭೆ ಚರ್ಚೆ ಮಾಡುತ್ತೇವೆ. ಸದ‌Â ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ಸರಕಾರದ ಕಾರ್ಯ ಕ್ರಮಗಳನ್ನು ಸಾರ್ವ ಜನಿಕರಿಗೆ ವಿತರಿಸಲು ತಾಲೂಕುಗಳಿಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ. ನಾವು ಯಾವುದೇ ಕಾರಣಕ್ಕೂ ಕೋಮು ಗಲಭೆ ಸೃಷ್ಟಿಸಲು ಅವಕಾಶ ಕಲ್ಪಿಸುವುದಿಲ್ಲ. ಹನುಮ ಜಯಂತಿ ನಡೆಸಲು ನಮಗೂ ಸಹಮತವಿದೆ. ಮೆರವಣಿಗೆಗೆ ಪೊಲೀಸರು ಸೂಚಿಸಿದ ಮಾರ್ಗದಲ್ಲಿ ಸಾಗಿದರೆ ಅಭ್ಯಂತರವಿರಲಿಲ್ಲ. ಇದನ್ನು ಹೊರತು ಪಡಿಸಿ ನಿಷೇಧಿತ ಮಾರ್ಗದಲ್ಲಿಯೇ ಮೆರವಣಿಗೆ ಹೊರಟಿದ್ದು ಘಟನೆಗೆ ಕಾರಣ ವಾಗಿದೆ. ನಾವು ಮನುಷ್ಯ ಧರ್ಮದಲ್ಲಿ ನಂಬಿಕೆ ಇರುವವರು. ಬಿಜೆಪಿಯವರು ಕೋಮುವಾದದ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದರು. ಚೆಕ್‌ ಮೂಲಕ ಲಂಚ ಪಡೆದು. ಲಂಚವನ್ನು ಸಮರ್ಥಿಸಿಕೊಳ್ಳುತ್ತಿರುವ ಮನುಷ್ಯ ಅವರು ಎಂದು ವಾಗ್ಧಾಳಿ ನಡೆಸಿದರು. ಇನ್ನು ಅಕ್ರಮ ಗಣಿಗಾರಿಕೆ ಕುರಿತು ಕೋರ್ಟ್‌ ಆದೇಶದಂತೆ ಎಸ್‌ಐಟಿ ತನಿಖೆ  ನಡೆಸುತ್ತಿದೆ. ಕೋರ್ಟ್‌ ಆದೇಶದ ಅನುಸಾರವೇ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು. ಇದೇ ವೇಳೆ, ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ನೂರಕ್ಕೆ ನೂರು ಸತ್ಯ ಎಂದು ಪುನರುಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next