Advertisement

ಓಲೈಕೆ ರಾಜಕಾರಣದಿಂದ ದೇಶದಲ್ಲಿ ಪಾಕಿಸ್ತಾನಗಳ ಸೃಷ್ಟಿ: ಸಿ.ಟಿ.ರವಿ

06:57 PM Sep 01, 2021 | Team Udayavani |

ಕಲಬುರಗಿ: ಮುಸ್ಲಿಮರ ಒಲೈಕೆ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದರೆ ಅಫ್ಘಾನಿಸ್ತಾನಕ್ಕೆ ಬಂದ ಪರಿಸ್ಥಿತಿ ಕಲ್ಯಾಣ ಕರ್ನಾಟಕಕ್ಕೂ ಬರಬಹುದು, ಕಲಬುರಗಿಗೂ ಬರಬಹುದು. ಅಲ್ಲದೇ, ದೇಶದಲ್ಲಿ ಮತ್ತಷ್ಟು ಪಾಕಿಸ್ತಾನಗಳ ಸೃಷ್ಟಿ ಮತ್ತು ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಹೇಳಿದರು.

Advertisement

ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಆಗಮಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಮೊದಲು ಎನ್ನುವ ತತ್ವವನ್ನೇ ಕಾಂಗ್ರೆಸ್‌ ಮರೆತಿದೆ. ಆ ಪಕ್ಷಕ್ಕೆ ದೇಶ ಭಕ್ತಿ ಮತ್ತು ಭಯೋತ್ಪಾದನೆ ನಡುವಿನ ವ್ಯತ್ಯಾಸ ಗುರುತಿಸಲಾಗಷ್ಟು ಅಂಧತ್ವ ಬಂದೊಗಿದೆ. ದೇಶ ಭಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ವನ್ನು ತಾಲಿಬಾನಿಗಳಿಗೆ ಸಮೀಕರಿಸುವಷ್ಟು ದುಃ ಸ್ಥಿತಿಗೆ ತಲುಪಿದೆ. ಇದೊಂದು ಓಲೈಕೆ ರಾಜಕಾರಣದ
ಪರಮಾವಧಿ ಎಂದು ಟೀಕಿಸಿದರು.

ನಮ್ಮ ದೇಶದ ಧರ್ಮ ಗ್ರಂಥಗಳನ್ನು ಓದಿದ ಎಲ್ಲರೂ ದಾರ್ಶನಿಕರಾಗಿದ್ದಾರೆ. ನಮ್ಮ ಮೂಲ ನಂಬಿಕೆಯಲ್ಲೇ ಸಹಿಷ್ಣುತೆ ಮಾತ್ರವಲ್ಲ, ಸಮಭಾವ ಇದೆ. ಹಿಂದುಗಳು ಬಹುಸಂಖ್ಯಾತರಾಗಿ ಇರುವ ವರೆಗೂ ಸಣ್ಣ ಸಮುದಾಗಳು ಸುರಕ್ಷಿತ ಆಗಿರಬಹುದು. ನಮ್ಮಲ್ಲಿ ಪಾರ್ಸಿ, ಯಹೂದಿಗಳು ನೆಮ್ಮದಿಯಾಗಿರುವುದೇ ಇದಕ್ಕೆ ಉದಾಹರಣೆ. ಈ ಪರಿಸ್ಥಿತಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಇತರ ದೇಶಗಳಲ್ಲಿಲ್ಲ. ಒಂದು ಸಾರಿ ಬೇರೆಯವರು ಬಹುಸಂಖ್ಯಾತರಾದರೆ ಅವರ ಬಾಯಲ್ಲಿ ಬರೋದೇ ಶರಿಯತ್‌. ಹಿಂದುಗಳು ಬಹುಸಂಖ್ಯಾತರಲ್ಲ ಎಂಬುವದನ್ನು ಕಳೆದುಕೊಂಡಾಗ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಹಿಂದುಗಳು ಬಹುಸಂಖ್ಯಾತ ಆಗಿರುವವರೆಗೆ ಮಾತ್ರ ಬದುಕಿನ ಅವಕಾಶ ಎಲ್ಲರಿಗೂ ಸಮಾನವಾಗಿ ಇರುತ್ತದೆ. ಅಂಬೇಡ್ಕರ್‌ ಸಂವಿಧಾನವೂ ಇರುತ್ತದೆ. ‌ಒಮ್ಮೆ ಹಿಂದುಗಳು ಬಹುಸಂಖ್ಯಾತರಲ್ಲ ಎಂಬುದಾದರೆ ಗಾಂಧಾರಕ್ಕಾದ ಗತಿ ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಗೂ ಆಗುತ್ತೆ. ಆಗ ಅಂಬೇಡ್ಕರ್‌ ಸಂವಿಧಾನವೂ ಇರಲ್ಲ, ಜಾತ್ಯತೀತತೆಯೂ ಇರಲ್ಲ. ಬಸವಣ್ಣ, ಕನಕದಾಸರೂ ಇರುವುದಿಲ್ಲ ಎಂದರು. ಡಾ| ಮಲ್ಲಿಕಾರ್ಜುನ ಖರ್ಗೆ ಅವರೇ ನೀವು ಕನಸು ಹೊತ್ತು ಕಲಬುರಗಿ ಬುದ್ಧ ವಿಹಾರ ನಿರ್ಮಿಸಿದ್ದೀರಿ.

ಇತ್ತ, ನಿಮ್ಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮುಸ್ಲಿಮರೆಲ್ಲರೂ ನನ್ನ ಸಹೋದರರು ಎಂದು ಹೇಳುತ್ತಾರೆ. ಅದೇ ಸಹೋದರರು ಎರಡು ‌ಸಾವಿರ ವರ್ಷಗಳಿಂದ ಬಾಮಿಯಾರ್‌ ನಲ್ಲಿ ‌ ನಗು ನಗುತ್ತಾ ‌ ನಿಂತಿದ್ದ ಬುದ್ಧನನ್ನು ಪಿರಂಗಿ ಇಟ್ಟು ಉಡಾಯಿಸಿದ್ದಾರೆ . ಬಾಮಿಯಾರ್‌ನ ಬುದ್ಧನಿಗೆ ಬಂದ ಪರಿಸ್ಥಿತಿ ಕಲಬುರಗಿ ಬುದ್ಧ ವಿಹಾರಕ್ಕೆ ಬರಬಾರದು ಎನ್ನುವುದಿದ್ದರೆ ವಾಸ್ತವಿಕ ನೆಲೆಯಲ್ಲಿ ರಾಜಕಾರಣ ಮಾಡಿ, ಓಲೈಕೆ ರಾಜಕಾರಣ ಬಿಡಿ ಎಂದು ಹೇಳಿದರು.

Advertisement

ಜಮ್ಮು ‌ ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ನಮ್ಮ ಪಕ್ಷದ ತಂತ್ರಗಾರಿಕೆ. ಪಿಡಿಪಿ ಜತೆ ಸರ್ಕಾರ ಮಾಡಿದರೂ 370ನೇ ಕಲಂ ರದ್ದತಿಯನ್ನು ನಮ್ಮಪಕ್ಷ ‌ಮಾಡಿತು ಎಂದು ಸಮರ್ಥಿಸಿಕೊಂಡರು. ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮಡು, ಶಶೀಲ ನಮೋಶಿ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ಕೃಷ್ಣ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಅಮರನಾಥ ಪಾಟೀಲ, ಈಶ್ವರಸಿಂಗ್‌ ಠಾಕೂರ ಇದ್ದರು.

ಹಿಂದುತ್ವಕ್ಕೆ ಬದ್ಧತೆ-ಅಭಿವೃದ್ಧಿಗೆ ಆದ್ಯತೆ
ಬಿಜೆಪಿ ಯಾರನ್ನೂ ಒಲೈಸಿ ರಾಜಕಾರಣಮಾಡುವುದಿಲ್ಲ. ಹಿಂದುತ್ವಕ್ಕೆ ಬದ್ಧತೆ ತೋರುವುದರ ಜತೆ-ಜತೆ ಅಭಿವೃದ್ಧಿಗೆ ಆದ್ಯತೆ ನೀಡುವುದೇ ನಮ್ಮ ಗುರಿ. “ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ, ಸಬ್‌ಕಾ ವಿಶ್ವಾಸ, ಸಬ್‌ಕಾ ಪ್ರಯಾಸ್‌’ ಎನ್ನುವುದು ನಮ್ಮ ಮಂತ್ರ. ಅದೇ ಪ್ರಕಾರಯಾರನ್ನೂಕಡೆಗಣಿಸದೆ ಅಭಿವೃದ್ಧಿ ಮಾಡುತ್ತೇವೆ ಎಂದು ಸಿ.ಟಿ. ರವಿಹೇಳಿದರು.

ಈ ಬಾರಿ ಮೂರು ಮಹಾನಗರ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ.ಕಲಬುರಗಿಯಲ್ಲೂ ಬದಲಾವಣೆ ಖಚಿತವಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈ ಭಾಗದ ಅಭಿವೃದ್ಧಿ ವೇಗ ಪಡೆಯಲು ಬಿಜೆಪಿಗೆ ಒಂದು ಅವಕಾಶವನ್ನು ಮತದಾರರುಕೊಡಬೇಕು ಎಂದು ಮನವಿ ಮಾಡಿದರು. ಈಗಗಾಲೇ ಭಾಗದಲ್ಲಿ ಅಭಿವೃದ್ಧಿಗೆ ಬಿಜೆಪಿ ಶ್ರಮಿಸುತ್ತಿದೆ. ವಿಮಾನ ನಿಲ್ದಾಣ,ಕೆಕೆಆರ್‌ಡಿಬಿಗೆ 1,500 ಕೋಟಿ ಅನುದಾನ ಮತ್ತುಕಲಬುರಗಿ ನಗರಕ್ಕೆ ದಿನದ 24 ಗಂಟೆಯು ಕುಡಿಯುವ ನೀರಿನಯೋಜನೆ ಜಾರಿ ಮಾಡಲಾಗಿದೆ. ಕಲಬುರಗಿ ರೈಲ್ವೆ ವಿಭಾಗೀಯಕಚೇರಿ ಆರಂಭಿಸಲೂ ಕೇಂದ್ರ ಸರ್ಕಾರದ ಮೇಲೆ ಒತ್ತಡಹೇರಲಾಗುತ್ತದೆ ಎಂದರು.

ಸಿದ್ದರಾಮಯ್ಯ ವಿಶ್ರಾಂತಿಗೆ
ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ರಾಂತಿಗೆ ಹೋಗುವುದು ಎಂದರೆ ಕಾಂಗ್ರೆಸ್‌ ಗೆಲ್ಲಬಾರದು ಎನ್ನುವ ಸೂಚಕದ ಸಂದೇಶ. ಇಂತಹ ಸಂದೇಶವನ್ನು ಹಿಂಬಾಲಕರ ಮೂಲಕ ಸಂದೇಶಕೊಡುತ್ತಾರೆ ಎಂದು ಸಿ.ಟಿ.ರವಿ ಆರೋಪಿಸಿದರು. ಈ ಹಿಂದೆ ಜಿ.ಪರಮೇಶ್ವರ ಮತ್ತು ಡಾ| ಮಲ್ಲಿಕಾರ್ಜುನಖರ್ಗೆ ಅವರಿಗೂ ಸೋಲಿಸುವ ಸಂದೇಶ ಕೊಟ್ಟುಹೋಗಿದ್ದರು. ಈ ಬಾರಿ ವಿಶ್ರಾಂತಿಗೆಹೋಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಯಾವ ಚುನಾವಣೆ ಗೆಲ್ಲಬಾರದು ಎನ್ನುವ ಸಂದೇಶ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next