Advertisement

ಹಸುವಿನ ಹೊಟ್ಟೆಯಲ್ಲಿತ್ತು12 ಕೆಜಿ ಪ್ಲಾಸ್ಟಿಕ್‌ ತ್ಯಾಜ್ಯ!

03:21 PM Oct 26, 2018 | |

ತೀರ್ಥಹಳ್ಳಿ: ಅನಾರೋಗ್ಯಕ್ಕೆ ಈಡಾಗಿದ್ದ ಹಸುವಿನ ಹೊಟ್ಟೆ ಒಳಗಿದ್ದ ಅಂದಾಜು 12ಕೆಜಿಯಷ್ಟು ಅಷ್ಟು ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ಹೊರತೆಗೆದ ಪಶುವೈದ್ಯ ಡಾ| ಯುವರಾಜ್‌ ಹೆಗ್ಡೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

Advertisement

ಪಟ್ಟಣದ ಗಾಂಧಿನಗರ ನಿವಾಸಿ ಸೀತಾರಾಮ್‌ ಅವರಿಗೆ ಸೇರಿದ ಹಸು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಮೇವು ಸೇವಿಸದೇ ನಿತ್ರಣಗೊಂಡಿತ್ತು. ಇದನ್ನು ಪರೀಕ್ಷಿಸಿದ ಪಶುವೈದ್ಯರು ಶಸ್ತ್ರ ಚಿಕಿತ್ಸೆಯ ಮುಖಾಂತರ ಹಸುವಿನ ಹೊಟ್ಟೆ ಒಳಗಿದ್ದ ಪ್ಲಾಸ್ಟಿಕ್‌, ಇತರೆ ಘನ ತ್ಯಾಜ್ಯ ವಸ್ತುಗಳನ್ನು ಹೊರತೆಗೆದಿದ್ದಾರೆ.

ಹಸು ಆರೋಗ್ಯ ಸುಧಾರಣೆಗೆ ಶಸ್ತ್ರ ಚಿಕಿತ್ಸೆ ಅತ್ಯಗತ್ಯವಾಗಿದ್ದು, ಹಸುವಿನ ರಕ್ತ ಪರೀಕ್ಷೆ ಹಾಗೂ ವಿವಿಧ ಅಂಗಾಂಗಗಳ ಕಾರ್ಯಕ್ಷಮೆಯನ್ನು ಪರೀಕ್ಷಿಸಿ ಒಂದು ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಂಡಿದ್ದು ಈಗ ಹಸು ಆರೋಗ್ಯವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದ್ದು ಜಾನುವಾರುಗಳಿಗೆ ಇಂತಹ ಪ್ಲಾಸ್ಟಿಕ್‌ ಆರೋಗ್ಯಕ್ಕೆ ಮಾರಕವಾಗಿದೆ ಎಂದು ವೈದ್ಯ ಯುವರಾಜ್‌ ತಿಳಿಸಿದರು.

ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ| ಅರುಣ್‌, ಪಶುವೈದ್ಯ ಸಿಬ್ಬಂದಿಗಳಾದ ಪೌಲ್‌, ಪ್ರತಿಮಾ ಇನ್ನಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next