Advertisement

ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತ

06:42 PM Mar 03, 2021 | Team Udayavani |

ಬೀದರ: ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್‌ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಮಂಗಳವಾರ ಕೋವಿಡ್‌ ಲಸಿಕಾ ಕೇಂದ್ರ ಕಾರ್ಯಾರಂಭ ಮಾಡಿತು.

Advertisement

ಕೇಂದ್ರಕ್ಕೆ ಚಾಲನೆ ನೀಡಿದ ಸಿದ್ಧಾರೂಢ ಮಠದ ಡಾ| ಶಿವಕುಮಾರ ಸ್ವಾಮೀಜಿ ಮಾತನಾಡಿ, ಮಹಾಮಾರಿ ಕೋವಿಡ್‌ ತೊಲಗಿಸಲು ಪ್ರತಿಯೊಬ್ಬರೂ ತಪ್ಪದೇ
ಲಸಿಕೆ ಪಡೆಯಬೇಕು. ಲಸಿಕೆ ಕುರಿತ ಸುಳ್ಳು ವದಂತಿ ನಂಬಬಾರದು. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಿದರು. ಜಿಲ್ಲೆಯ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕಾ ಕೇಂದ್ರ ಆರಂಭಿಸಿದ್ದು, ಅದರಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯೂ ಸೇರಿದೆ. ಕೇಂದ್ರದಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲರಿಗೆ ಹಾಗೂ 45 ರಿಂದ 60 ವರ್ಷದೊಳಗಿನ ಮಧುಮೇಹ ಹಾಗೂ ರಕ್ತದೊತ್ತಡ ರೋಗಿಗಳಿಗೆ ಲಸಿಕೆ ಕೊಡಲಾಗುವುದು ಎಂದು ಡಾ|
ಮಹೇಶ ಬಿರಾದಾರ ತಿಳಿಸಿದರು.

ಕೋವಿಡ್‌ ಪ್ರಾರಂಭದಿಂದಲೂ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತ ಬಂದಿದ್ದಾರೆ. ಕೋವಿಡ್‌ ಲಸಿಕಾ ಕೇಂದ್ರ ಅರ್ಹರಿಗೆ ಉತ್ತಮ ಸೇವೆ ಒದಗಿಸಲಿದೆ ಎಂದು ಆಸ್ಪತ್ರೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಾರೆಡ್ಡಿ ತಿಳಿಸಿದರು. ಡಾ| ಶಿವಕುಮಾರ ಸ್ವಾಮೀಜಿ
ಮೊದಲ ಹಂತದ ಲಸಿಕೆ ಪಡೆದರು. ಈ ವೇಳೆ ಆಸ್ಪತ್ರೆ ನಿರ್ದೇಶಕ ಆಕಾಶ ನಾಗಮಾರಪಳ್ಳಿ, ಡಾ| ಮಲ್ಲಿಕಾರ್ಜುನ ಸ್ವಾಮಿ, ಡಾ| ದೀಪಕ ಚೋಕಡಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next